
ಮುಂಬೈ(ನ.17): ನೋಟಿನ ಸುದ್ದಿಗಳ ಮಧ್ಯ ನಾಪತ್ತೆಯಾಗಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋದಿಂದ ಹೊಸದೊಂದು ಸುದ್ದಿ ಹೊರಬಂದಿದೆ. ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನ ಬಿರುಗಾಳಿಯನ್ನು ಸೃಷ್ಟಿಸುವ ಯತ್ನ ನಡೆಯುತ್ತಿದೆ.
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 4ಜಿ ಸ್ಮಾರ್ಟ್ ಪೋನ್ ಗಳಿಗೆ ಮಾತ್ರ ಜಿಯೋ ಸಿಮ್ ಹಾಕಬಹುದಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ಕೈಗೆಟುಕುವ ಬೆಲೆಯಲ್ಲಿ ಹೊಸ ಪೋನ್ ಬಿಡುಗಡೆ ಮಾಡಲು ಮುಂದಾಗಿದೆ.
ಸಾಮಾನ್ಯ ಜನರ ಹಿತ ದೃಷ್ಟಿಯಿಂದ, ದುಡಿಯುವ ವರ್ಗಕ್ಕೆ ಖರೀದಿ ಸುಲಭವಾಗುವಂತೆ 1000ರೂ ಗಳಿಗೆ 4ಜಿ ಫೀಚರ್ ಪೋನ್ ಬಿಡುಗಡೆ ಮಾಡಲು ಜಿಯೋ ಸಿದ್ಧತೆ ನಡೆಸಿದ್ದು, ಈ ಮೂಲಕ ಅಸಂಖ್ಯಾತ ಜನರನ್ನು ತಲುಪುವ ಯತ್ನಕ್ಕೆ ಕೈ ಹಾಕಿದೆ. ಈ 1000 ರೂ. ಪೋನ್ ನಲ್ಲಿ 4ಜಿ ನೆಟ್ ವರ್ಕ್ ಕನೆಕ್ಟ್ ಆಗಲಿದ್ದು, ಅ ಮೂಲಕ ಕಾಲ್ ಮಾಡಬಹುದಾಗಿದೆ.
ಸದ್ಯ ಈಗಾಗಲೇ ಸ್ಮಾರ್ಟ್ ಪೋನ್ ಬಳಕೆದಾದರು ಜಿಯೋಗಾಗಿಯೇ 4ಜಿ ಸಪೋರ್ಟ್ ಮಾಡುವ ಪೋನ್ ಗಳನ್ನು ಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಾಮಾನ್ಯ ಜನರು ಜಿಯೋ ಬಳಸುವಂತಗಾಗಲಿ ಎಂಬ ಆಶಯದಿಂದ ಈ ಹೊಸ ಯತ್ನಕ್ಕೆ ಕೈ ಹಾಕಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರು 4ಜಿ ಸಪೊರ್ಟ್ ಮೊಬೈಲ್ ಗಳು 5000ರೂ ಗಳಿಗಿಂತ ಹೆಚ್ಚಿದೆ. ಇದನ್ನು ಮನದಲ್ಲಿಟ್ಟುಕೊಂಡು ಸಾವಿರ ಇಲ್ಲವೇ ಒಂದುವರೆ ಸಾವಿರಕ್ಕೆ ಹೊಸ ಮೊಬೈಲ್ ಬಿಡುಗಡೆಯಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.