ಆನ್ ಲೈನ್'ನಲ್ಲಿ ಸೇಲಿಗಿದೆ 2000 ರೂ ನೋಟು...!

Published : Nov 17, 2016, 10:16 AM ISTUpdated : Apr 11, 2018, 12:49 PM IST
ಆನ್ ಲೈನ್'ನಲ್ಲಿ ಸೇಲಿಗಿದೆ 2000 ರೂ ನೋಟು...!

ಸಾರಾಂಶ

ಬುಧವಾರದಿಂದ 2000 ರೂ ಮುಖಬೆಲೆಯ ನೋಟನ್ನು ಆನ್ ಲೈನಲ್ಲಿ ಮಾರಾಟಕ್ಕೆ ಇಟ್ಟಿರುವ ಈಬೇ, ಒಂದು ನೋಟಿಗೆ ಆರಂಭಿಕ ಬೆಲೆಯಾಗಿ 3,500 ರೂಗಳನ್ನು ನಿಗಧಿಪಡಿಸಿದೆ. ನೀವು ನೋಟು ಪಡೆಯಬೇಕಾದರೆ ಆನ್ ಲೈನ್ ಮೂಲಕ ಇಲ್ಲವೇ ಕ್ರೆಡಿಟ್ ಕಾರ್ಡಿನಿಂದ ಹಣ ಪಾವತಿ ಮಾಡಬೇಕು. 

ದೆಹಲಿ(ನ.17): ದೇಶದಲ್ಲಿ ನೋಟು ಬದಲಾವಣೆ ಮಾಡಿಕೊಳ್ಳಲು ಬ್ಯಾಂಕಿನಲ್ಲಿ ಉದ್ದೂದ್ದ ಕ್ಯೂ ನಿಂತುಕೊಳ್ಳಲು ಪರದಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆನ್ ಲೈನ್ ಶಾಪಿಂಗ್ ಸೈಟ್ ಈಬೇ ತನ್ನ ವೆಬ್ ನಲ್ಲಿ 2000 ರೂ ನೋಟನ್ನು ಮಾರಾಟಕ್ಕೆ ಇಟ್ಟಿದೆ. 

ಬುಧವಾರದಿಂದ 2000 ರೂ ಮುಖಬೆಲೆಯ ನೋಟನ್ನು ಆನ್ ಲೈನಲ್ಲಿ ಮಾರಾಟಕ್ಕೆ ಇಟ್ಟಿರುವ ಈಬೇ, ಒಂದು ನೋಟಿಗೆ ಆರಂಭಿಕ ಬೆಲೆಯಾಗಿ 3,500 ರೂಗಳನ್ನು ನಿಗಧಿಪಡಿಸಿದೆ. ನೀವು ನೋಟು ಪಡೆಯಬೇಕಾದರೆ ಆನ್ ಲೈನ್ ಮೂಲಕ ಇಲ್ಲವೇ ಕ್ರೆಡಿಟ್ ಕಾರ್ಡಿನಿಂದ ಹಣ ಪಾವತಿ ಮಾಡಬೇಕು. 

ಅಲ್ಲದೇ ಮತ್ತೊಂದು ಆಯ್ಕೆಯ ಅವಕಾಶವನ್ನು ನೀಡಿರುವ ಈಬೇ, ಸಿರಿಯಲ್ ಅಥವಾ ನಿಮ್ಮ ಲಕ್ಕಿ ನಂಬರ್ ಇರುವ ನೋಟು ಬೇಕು ಎಂದರೆ ನೀವು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ. ಅದರಲ್ಲಿಯೂ ಧಾರ್ಮಿಕವಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿರುವ 798 ನಂಬರ್ ಹೊಂದಿರುವ ನೋಟಿಗೆ 1.51 ಲಕ್ಷ ರೂ. ನಿಗಧಿ ಮಾಡಿದೆ.

ಈ ಕುರಿತು ಮಾತನಾಡಿರುವ ಈಬೇ ಮುಖ್ಯಸ್ಥರು, ಇಂದೊದು ಸ್ವತಂತ್ರ ಮಾರುಕಟ್ಟೆಯಾಗಿದ್ದು, ಇಲ್ಲಿ ಮಾರಾಟಗಾರರ ಮೇಲೆ ಮತ್ತು ಮಾರಾಟವಾಗುವ ವಸ್ತುಗಳ ಮೇಲೆ ನಮ್ಮ ನಿಯಂತ್ರಣ ವಿರುವುದಿಲ್ಲ ಎಂದಿದ್ದಾರೆ. ಈ ಹಿಂದೆಯೂ ಈಬೇ ನಲ್ಲಿ ಲಕ್ಕಿ ನಂಬರ್ ನೋಟುಗಳ ವ್ಯಾಪರ ಜೋರಾಗಿಯೇ ನಡೆದಿತ್ತು. 


 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೇಯ್ ನಿಮ್ಮ ಫೋಟೋ ನೋಡಿದೆ, ವ್ಯಾಟ್ಸಾಪ್‌ನಲ್ಲಿ ಈ ರೀತಿಯ ಸಂದೇಶ ಓಪನ್ ಮಾಡಬೇಡಿ
108MP ಮಾಸ್ಟರ್ ಪಿಕ್ಸೆಲ್: ಹೊಸ ವರ್ಷಕ್ಕೆ Redmi Note 15 5G ಬಿಡುಗಡೆ! ಬೆಲೆ ಎಷ್ಟು?