
ಮುಂಬೈ(ಸೆ.18): ವಿಶ್ವದಲ್ಲಿಯೇ ಅತೀ ಕಡಿಮೆ ದರದಲ್ಲಿ ಇಂಟರ್’ನೆಟ್ ಸೌಲಭ್ಯ ಹಾಗೂ ಉಚಿತ ಕರೆ ಹಾಗೂ ಸಂದೇಶಗಳನ್ನು ನೀಡುವ ಯೋಜನೆಯಲ್ಲಿರುವ ಮುಖೇಶ್ ಅಂಬಾನಿ ನೇತೃತ್ವದ ಭಾರತದ ದೈತ್ಯ ಸಂಸ್ಥೆ ರಿಲಾಯನ್ಸ್ ಜಿಯೋ, 25 ಕೋಟಿ ಗ್ರಾಹಕರಿಗೆ ಸಿಮ್ ಹಾಗೂ ಸಿಮ್ ಒಳಗೊಂಡ ಮೊಬೈಲ್ ನೀಡುವ ಉದ್ದೇಶ ಹೊಂದಿದೆಯಂತೆ. ಸದ್ಯ ಭಾರತದಲ್ಲಿ 26 ಕೋಟಿ ಗ್ರಾಹಕರನ್ನು ಹೊಂದಿರುವ ಏರ್’ಟೆಲ್ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ದೂರವಾಣಿ ಸೇವಾ ಸಂಸ್ಥೆಯಾಗಿದೆ.
ಜಿಯೋ 4ಜಿ ವಿಶೇಷಗಳು
ದೇಶದಲ್ಲಿ ರಿಲಯನ್ಸ್ ಜಿಯೋ ರೋಮಿಂಗ್ ಚಾರ್ಚ್ ಉಚಿತ
50 ರೂಪಾಯಿಗೆ 1ಜಿಬಿ
ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿ ಘೋಷಣೆ. ಇದೀಗ ವಿದ್ಯಾರ್ಥಿಗಳು ಶೇ.25 ಕ್ಕೂ ಹೆಚ್ಚು ಡೇಟಾ ಸೇವೆಯನ್ನು ಪಡೆಯಬಹುದು.
ಜಿಯೋ ನೆಟ್’ವರ್ಕ್ ವೇಗ 135 ಎಮ್‌ಬಿಪಿಎಸ್ ಡೌನ್‌ಲೋಡಿಂಗ್ ಸ್ಪೀಡ್ ಹೊಂದಿರುತ್ತದೆ
ಎಲ್‌ವೈಎಫ್ ಅಡಿಯಲ್ಲಿ ಕೇವಲ 2999 ರೂ.ಗಳಲ್ಲಿ 4ಜಿ ಸ್ಮಾರ್ಟ್‌ಪೋನ್
4ಜಿ ಮಾತ್ರವಲ್ಲದೆ ಶೀಘ್ರದಲ್ಲಿಯೇ 5ಜಿ ಹಾಗೂ 6ಜಿ ಸೇವೆ ನೀಡಲಿದೆಯಂತೆ.
18 ಸಾವಿರ ನಗರಗಳಲ್ಲಿ ಜಿಯೋ
ಜಿಯೋ ಬಳಕೆದಾರರು ವಾಯ್ಸ್ ಕರೆಗಳಿಗೆ ಹಣ ಸಂದಾಯ ಮಾಡಬೇಕಿಲ್ಲ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.