3...2...1... ಜಿಯೋ ಫೈಬರ್‌ ಲಾಂಚ್‌ಗೆ ಕ್ಷಣಗಣನೆ.... ಅಪ್ಲೈ ಮಾಡೋದು ಹೀಗೆ...

By Web Desk  |  First Published Sep 4, 2019, 7:16 PM IST

ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಸಂಚಲನ ಹುಟ್ಟಿಸಿದೆ ಜಿಯೋ ಫೈಬರ್ ಎಂಟ್ರಿ; ಸೆ.05ರಂದು ಸೇವೆ ಕಾರ್ಯಾರಂಭ; ಏನೆಲ್ಲಾ ಪ್ಲಾನ್‌ಗಳಿರಬಹುದು? ಕುತೂಹಲ ಹುಟ್ಟು ಹಾಕಿದೆ ಜಿಯೋ ಫೈಬರ್ 


ಇನ್ನು ಕೆಲವೇ ಗಂಟೆಗಳು ಬಾಕಿ, ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಗುರುವಾರ (ಸೆ.05) ಮೊದಲ ಹೆಜ್ಜೆಯನ್ನಿಡಲಿದೆ.  ಕಳೆದ ತಿಂಗಳು ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ವಿಚಾರವನ್ನು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪ್ರಕಟಿಸಿದ್ದರು.

ಆ ಪ್ರಕಾರ, ಮೊದಲ ಹಂತದ ಬ್ರಾಡ್‌ಬ್ಯಾಂಡ್ ಸೇವೆ ಸುಮಾರು 1600 ಪಟ್ಟಣ/ನಗರ ಪ್ರದೇಶಗಳಲ್ಲಿ ಶುರುವಾಗಲಿದೆ. ಈ ಹೊಸ ಸೇವೆ ಕಾರ್ಯಾರಂಭಿಸಲು ಇನ್ನೇನು  ಕೆಲ ಗಂಟೆಗಳು ಬಾಕಿಯಿವೆ, ಆದರೆ ಬಹಳಷ್ಟು ವಿಷಯಗಳು ಇನ್ನೂ ಸ್ಪಷ್ಟವಾಗಿಲ್ಲ.

Tap to resize

Latest Videos

ಜಿಯೋ ಫೈಬರ್ ಬಗ್ಗೆ ಕಂಪನಿಯು ಏನೇನು ಯೋಜನೆಗಳನ್ನು ಪ್ರಕಟಿಸಿತ್ತು? ಅದರ ಒಂದು ಹಿನ್ನೋಟ ಇಲ್ಲಿದೆ.

ಇದನ್ನೂ ಓದಿ | ವಾಟ್ಸಪ್‌ನಲ್ಲಿ ಅಪಾಯಕಾರಿ ಬಗ್ ಹಾವಳಿ? ನೀವೇನು ಮಾಡ್ಬೇಕು ಸ್ವಲ್ಪ ತಿಳ್ಕೊಳ್ಳಿ!

ಜಿಯೋ ಫೈಬರ್ ಪ್ಲಾನ್ಸ್:  ನಾಳೆ ಆರಂಭವಾಗಲಿರುವ ಈ ಸೇವೆಯ ಪ್ಲಾನ್ ಗಳ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. 100Mbps ನಿಂದ 1Gbpsವರೆಗೆ ವೇಗವಿರುವ ಇಂಟರ್ನೆಟ್ ಸೇವೆ 700 ರೂ.ನಿಂದ ಆರಂಭವಾಗಿ 10 ಸಾವಿರ ರೂ.ವರೆಗೆ ಇರಲಿವೆ ಎಂದು ಕಂಪನಿ ಹೇಳಿತ್ತು.  ಗುರುವಾರ ಈ ವಿಚಾರ ಸ್ಪಷ್ಟವಾಗಲಿದೆ.

ಜಿಯೋ ಫೈಬರ್ ಅಳವಡಿಕೆ ಮತ್ತು ಉಪಕರಣಗಳ ಬೆಲೆ: ಫೈಬರ್ ಸೇವೆ ಅಳವಡಿಸಲು ಚಂದಾದಾರರು ಎಷ್ಟು ಪಾವತಿಸಬೇಕೆಂದು ಕಂಪನಿಯು ಯಾವುದೇ ಮಾಹಿತಿ ಕೊಟ್ಟಿಲ್ಲ. ಆದರೆ ರಿಫಂಡೇಬಲ್ ಸೆಕ್ಯೂರಿಟಿ ಡೆಪಾಸಿಟ್ ತೆಗೆದುಕೊಂಡು ಉಚಿತ ಇನ್ಸ್ಟಾಲೇಶನ್ ಸೌಲಭ್ಯ ನೀಡುವ ಸಾಧ್ಯತೆ ಇದೆ. ಬಳಕೆದಾರರಿಗೆ ಕೈಗೆಟಕುವ ಬೆಲೆಯಲ್ಲಿ, ಅಂದಾಜು 1 ಸಾವಿರ ರೂಪಾಯಿಯಲ್ಲಿ ರೂಟರ್ ಸಿಗಬಹುದು ಎಂದು ಹೇಳಲಾಗುತ್ತಿದೆ. 

ಜೊತೆಗೆ, ಉಚಿತ ಲ್ಯಾಂಡ್‌ಲೈನ್ ಹೋಮ್ ಫೋನ್ ಸೌಲಭ್ಯ, ಉಚಿತ ಜಿಯೋ ಟಿವಿ ಮತ್ತು ಜಿಯೋ ಸಿನೆಮಾ ಸೇವೆ, ಜಿಯೋ ಸೆಟ್‌ಟಾಪ್ ಬಾಕ್ಸ್ ಸೇವೆಗಳನ್ನು ಒದಗಿಸುವ ಬಗ್ಗೆ ಜಿಯೋ ಪ್ರಕಟಿಸಿತ್ತು.

ಇದನ್ನೂ ಓದಿ | ಫೇಸ್ ಬುಕ್ ನಲ್ಲಿ ಇನ್ನು ಮುಂದೆ ಲೈಕ್ ಗಳು ಕಾಣಿಸೋದಿಲ್ಲ?

ಜಿಯೋ ಫೈಬರ್ ಸಂಪರ್ಕ ಪಡೆಯುವುದು ಹೇಗೆ?

ಜಿಯೋ ಕಂಪನಿ ವೆಬ್‌ಸೈಟ್ ಅಥವಾ ಮೈ ಜಿಯೋ ಆ್ಯಪ್ ಮೂಲಕ ಜಿಯೋ ಫೈಬರ್ ಸೇವೆಗೆ ಅರ್ಜಿ ಸಲ್ಲಿಸಬಹುದು.  ಸೆ.05ರಂದು ಪ್ಲಾನ್ & ಬೆಲೆ ಪಟ್ಟಿ ಕೂಡಾ ಪ್ರಕಟವಾಗಲಿದೆ.   

click me!