ಪುಟ್ಟ ಮಕ್ಕಳು ಸಾಮಾನ್ಯವಾಗಿ ರಚ್ಚೆ ಹಿಡಿದು ಅಳುವುದು ಸಾಮಾನ್ಯ. ಯಾವುದೇ ರೀತಿ ಸಮಾಧಾನ ಮಾಡಿದರೂ ಅಳು ನಿಲ್ಲಿಸುವುದಿಲ್ಲ. ಇದು ಕೆಲವೊಮ್ಮೆ ಸುತ್ತಮುತ್ತಲಿದ್ದವರಿಗೆ ಕಿರಕಿರಿಯಾಗಿ ಪರಿಣಮಿಸುವುದೂ ಇದೆ. ಆದ್ರೆ ಇನ್ಮುಂದೆ ಆ ಸಮಸ್ಯೆ ಇರಲ್ಲ. ಮಕ್ಕಳು ಅಳ್ತಿದ್ರೆ ಸುಮ್ನೆ ಮ್ಯೂಟ್ ಮಾಡಿ ಬಿಡ್ಬೋದು. ಅರೆ, ಅದ್ಹೇಗ್ ಅಂತೀರಾ..ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ.
ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ವಸ್ತುಗಳನ್ನು ಆವಿಷ್ಕರಿಸುವುದರಲ್ಲಿ ಮನುಷ್ಯ ಎಕ್ಸ್‌ಪರ್ಟ್. ಉಪಯೋಗಕ್ಕೆಂದು ಕಂಡು ಹಿಡಿಯುವ ಈ ಕೆಲವು ಉಪಕರಣಗಳು ಕೆಲವೊಮ್ಮೆ ತೊಂದರೆಗೂ ಕಾರಣವಾಗುತ್ತವೆ. ಆದರೂ ಮನುಷ್ಯ ಹೊಸ ಹೊಸ ಆವಿಷ್ಕಾರಗಳನ್ನಂತೂ ನಿಲ್ಲಿಸೋದಿಲ್ಲ. ಹೀಗೆಯೇ ಬಟ್ಟೆ ಒಗೆಯುವ ಮೆಷಿನ್, ಪಾತ್ರೆ ತೊಳೆಯುವ ಮೆಷಿನ್, ಕಸ ಗುಡಿಸುವ, ನೆಲ ಒರೆಸುವ ಉಪಕರಣಗಳು ಆವಿಷ್ಕಾರಗೊಂಡಿವೆ. ಇವೆಲ್ಲಾ ಒಂಥರಾ ಮನೆಕೆಲಸಕ್ಕೆ ಇರೋ ಉಪಕರಣಗಳು. ಆದ್ರೆ ಮನುಷ್ಯನ ಭಾವನೆಯನ್ನೇ ನಿಯಂತ್ರಿಸೋಕೆ ಉಪಕರಣವನ್ನು ಕಂಡುಹಿಡಿಯೋದು ಅಂದ್ರೆ ವಿಚಿತ್ರ ಅಲ್ವಾ..ಸದ್ಯ ಹೊಸದಾಗಿ ಕಂಡು ಹಿಡಿದಿರುವ ಈ ಬೇಬಿ ಮ್ಯೂಟ್ ಮಾಸ್ಕ್ ಅದೇ ಸಾಲಿಗೆ ಸೇರಿದಂತಿದೆ.
ಪುಟ್ಟ ಮಕ್ಕಳು (Toddler) ಸಾಮಾನ್ಯವಾಗಿ ರಚ್ಚೆ ಹಿಡಿದು ಅಳುವುದು (Crying) ಸಾಮಾನ್ಯ. ಯಾವುದೇ ರೀತಿ ಸಮಾಧಾನ ಮಾಡಿದರೂ ಅಳು ನಿಲ್ಲಿಸುವುದಿಲ್ಲ. ಇದು ಕೆಲವೊಮ್ಮೆ ಸುತ್ತಮುತ್ತಲಿದ್ದವರಿಗೆ ಕಿರಿಕಿರಿಯಾಗಿ ಪರಿಣಮಿಸುವುದೂ ಇದೆ. ಆದ್ರೆ ಇನ್ಮುಂದೆ ಆ ಸಮಸ್ಯೆ ಇರಲ್ಲ. ಮಕ್ಕಳು ಅಳ್ತಿದ್ರೆ ಸುಮ್ನೆ ಮ್ಯೂಟ್ ಮಾಡಿ ಬಿಡ್ಬೋದು. ಕೇಳೋಕೆ ವಿಚಿತ್ರವೆನಿಸಿದರೂ ಇದು ನಿಜ. ಇಂಥಹದ್ದೊಂದು ಉಪಕರಣವನ್ನು ಕಂಡು ಹಿಡಿಯಲಾಗಿದೆ.
undefined
ಮಗು ಹುಟ್ಟಿದ ತಕ್ಷಣ ಜೋರಾಗಿ ಅಳೋದ್ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಬೇಬಿ ಮ್ಯೂಟ್ ಮಾಸ್ಕ್ ಹಾಕಿದ್ರೆ ಸಾಕು ಮಗು ಅಳೋದನ್ನು ನಿಲ್ಸುತ್ತೆ
ಇವತ್ತಿನ ಕಾಲದಲ್ಲಿ ಪೇರೆಂಟಿಂಗ್ ಅನ್ನೋದು ಹಲವರ ಪಾಲಿಗೆ ಸವಾಲಿನ ಕೆಲಸ. ಮಕ್ಕಳನ್ನು ನೋಡಿಕೊಳ್ಳಲು ಎಲ್ಲರಿಗೂ ಬರುವುದಿಲ್ಲ. ಅದರಲ್ಲೂ ಅಳುವ ಮಗುವನ್ನು ಸಾಂತ್ವನಗೊಳಿಸುವುದಂತೂ ಎಲ್ಲರಿಗೂ ಸಾಧ್ಯವಾಗದ ಮಾತು. ಆದರೆ ಮಕ್ಕಳು ಸಮಯ, ಸಂದರ್ಭದ ಪರಿವೆಯಿಲ್ಲದೆ ಅಳುತ್ತಲೇ ಇರುತ್ತಾರೆ. ಸಭೆ, ಸಮಾರಂಭ, ಟ್ರೈನ್, ಬಸ್‌ಗಳಲ್ಲಿ ಮಕ್ಕಳು ಅಳುವಾಗ ಪೋಷಕರು (Parents) ಸಹ ಮುಜುಗರಕ್ಕೆ ಒಳಗಾಗುತ್ತಾರೆ. ಆದರೆ ಮಕ್ಕಳು ಅಳುವುದು ಸಹಜ ಪ್ರಕ್ರಿಯೆ. ಆದರೆ ಇದನ್ನು ಅರ್ಥಮಾಡಿಕೊಳ್ಳದ ಕೆಲ ಪೋಷಕರು ಕಿರಿಕಿರಿ ಅನುಭವಿಸುತ್ತಾರೆ. ಆದ್ರೆ ಇನ್ಮುಂದೆ ಆ ತೊಂದ್ರೆ ಇರಲ್ಲ.
ಪೋಷಕರ ಈ ಸಮಸ್ಯೆಯನ್ನು ಬಗೆಹರಿಸಲು ಕಂಪನಿಯೊಂದು 'ಬೇಬಿ ಮ್ಯೂಟ್ ಮಾಸ್ಕ್'ನ್ನು ಅಭಿವೃದ್ಧಿಪಡಿಸಿದೆ. ಈ ಮಾಸ್ಕ್ ಅಳುವ ಮಗುವನ್ನು ಶಾಂತಗೊಳಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ. ಕಂಪೆನಿಯ ಪ್ರಯಾಣಿಸುವಾಗ ಅಥವಾ ಚಲನಚಿತ್ರಗಳನ್ನು ನೋಡುವಾಗ ಶಿಶುಗಳನ್ನು ಶಾಂತವಾಗಿರಿಸಲು ಈ ಮಾಸ್ಕ್ ಪರಿಹಾರವಾಗಿದೆ ಎಂದು ಹೇಳಿದೆ. ಕೆಲವು ಪೋಷಕರು ಈ ಮಾಸ್ಕ್‌ನ್ನು ಉತ್ತಮ ಪರಿಹಾರ ಎಂದು ಅಂದುಕೊಂಡರೆ, ಇನ್ನು ಕೆಲವರು 'ಬೇಬಿ ಮ್ಯೂಟ್ ಮಾಸ್ಕ್' ಮಗುವಿನ ಮಾನಸಿಕ (Mental) ಮತ್ತು ಭಾವನಾತ್ಮಕ ಬೆಳವಣಿಗೆಯ ಮೇಲೆ ಪ್ರಭಾವ (Impact) ಬೀರಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
Children Care: ಮಗು ರಾತ್ರಿ ಪದೇ ಪದೇ ಎದ್ದೇಳುತ್ತಾ? ಹಸಿವಾಗಿರಬಹುದು ನೋಡಿ
ಮಕ್ಕಳ ಅಳುವ ಸಹಜ ಪ್ರಕ್ರಿಯೆಗೆ ಡೇಂಜರ್ ಎಂದ ಪೋಷಕರು
ಮಗುವಿನ ಅಳುವ ಸಹಜ ಪ್ರವೃತ್ತಿಯನ್ನು ನಿಗ್ರಹಿಸುವುದು ಅವರ ಸಂವಹನ ಮತ್ತು ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು, ನಡವಳಿಕೆಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹಲವು ಪೋಷಕರು ಹೇಳಿದ್ದಾರೆ. ಅದಲ್ಲದೆ, ಶಿಶುಗಳು ಸೂಕ್ಷ್ಮವಾದ ಉಸಿರಾಟದ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಮಾಸ್ಕ್ ಬಳಕೆಯಿಂದ ಅವರ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುವುದರಿಂದ ಉಸಿರಾಟದ ತೊಂದರೆ ಅಥವಾ ಉಸಿರುಗಟ್ಟುವಿಕೆಯ ಸಮಸ್ಯೆ ಉಂಟಾಗಬಹುದು ಇನ್ನು ಕೆಲವರು ತಿಳಿಸಿದ್ದಾರೆ.
ಮಕ್ಕಳ ಈ 'ಬೇಬಿ ಮ್ಯೂಟ್ ಮಾಸ್ಕ್' ಕುರಿತಾಗಿ #ChildsVoiceMatters ಮತ್ತು #ParentingResponsibly ನಂತಹ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್ ಆಗುತ್ತಿವೆ. ಪೋಷಕರು ಮತ್ತು ವಕೀಲರು ಮಾಸ್ಕ್‌ನ ಬಿಡುಗಡೆಯನ್ನು ಮರುಪರಿಶೀಲಿಸುವಂತೆ ಕಂಪನಿಗೆ ಕರೆ ನೀಡಿದ್ದಾರೆ.