ಕ್ಷಿರಪಥ ನಕ್ಷತ್ರಪುಂಜದಲ್ಲೊಂದು ಬೃಹತ್ ಕಪ್ಪುರಂಧ್ರ ಪತ್ತೆ| ಸೂರ್ಯನ ದ್ರವ್ಯರಾಶಿಯ 70 ಪಟ್ಟು ದ್ರವ್ಯರಾಶಿ| ದೈತ್ಯಾಕಾರದ ಕಪ್ಪು ಕುಳಿ ಪತ್ತೆ ಹಚ್ಚಿದ ಚೀನಾದ ಖಗೋಳಶಾಸ್ತ್ರಜ್ಞರು| ನೂತನವಾಗಿ ಕಂಡುಹಿಡಿಯಲಾದ ಕಪ್ಪುರಂಧ್ರಕ್ಕೆ LB-1 ಎಂದು ನಾಮಕರಣ|
ಬಿಜಿಂಗ್(ನ.28): ನಮ್ಮ ಕ್ಷಿರಪಥ ನಕ್ಷತ್ರಪುಂಜದಲ್ಲಿ ಸೂರ್ಯನ ದ್ರವ್ಯರಾಶಿಯ 70 ಪಟ್ಟು ದ್ರವ್ಯರಾಶಿಯನ್ನು ಹೊಂದಿರುವ ದೈತ್ಯಾಕಾರದ ಕಪ್ಪು ಕುಳಿಯೊಂದನ್ನು ಚೀನಾದ ಖಗೋಳಶಾಸ್ತ್ರಜ್ಞರು ಆವಿಷ್ಕರಿಸಿದ್ದಾರೆ.
ಚೀನಾದ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧನಾ ತಂಡ, ಚೀನಾದ ಕ್ಸಿಂಗ್‌ಲಾಂಗ್ ವೀಕ್ಷಣಾಲಯದ ಮಲ್ಟಿ-ಆಬ್ಜೆಕ್ಟ್ ಫೈಬರ್ ಸ್ಪೆಕ್ಟ್ರೋಸ್ಕೋಪಿಕ್ ಟೆಲಿಸ್ಕೋಪ್ (ಲ್ಯಾಮೋಸ್ಟ್)ಮೂಲಕ ಈ ಬೃಹತ್ ಕಪ್ಪುರಂಧ್ರವನ್ನು ಪತ್ತೆ ಹಚ್ಚಿದೆ.
undefined
ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ: ಬೆಳಕು ಹಾಯಲು ಬಿಡದು ಬೇಡಿದರೂ ಇಂದ್ರ!
ಈ ಕುರಿತು ಮಾಹಿತಿ ನೀಡಿರುವ ಚೀನಾದ ರಾಷ್ಟ್ರೀಯ ಖಗೋಳ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ ಲಿಯು ಜಿಫೆಂಗ್, ಪ್ರಸ್ತುತ ನಕ್ಷತ್ರ ವಿಕಾಸದ ಸಿದ್ಧಾಂತದ ಪ್ರಕಾರ ನಮ್ಮ ಗ್ಯಾಲಕ್ಸಿಯಲ್ಲಿ ಇಷ್ಟು ಅಗಾಧ ದ್ರವ್ಯರಾಶಿಯುಳ್ಳ ಗಾತ್ರದ ಕಪ್ಪುರಂಧ್ರಗಳ ಅಸ್ತಿತ್ವ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.
Scientists Just Found an "Impossible" Black Hole in The Milky Way Galaxy. LB-1 is twice as massive as what we thought possible. Great finding by China's LAMOST. 😍https://t.co/3TxJbYQGyq
— Chaitali Chakraborty|চৈতালী (@chaitali_abp)ಈ ಕಪ್ಪುರಂಧ್ರವನ್ನು LB-1 ಎಂದು ಹೆಸರಿಸಲಾಗಿದ್ದು, ಇದರ ರಚನೆಯ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಲಿಯು ಸ್ಪಷ್ಟಪಡಿಸಿದ್ದಾರೆ.
ಮಿಲ್ಕಿ ವೇ ಗ್ಯಾಲಕ್ಸಿ ಕಪ್ಪುರಂಧ್ರ ವಿಸ್ಫೋಟ: ಇನ್ನೂ ಬಿಟ್ಟಿಲ್ಲ ಭೂಮಿ ನುಂಗುವ ಚಟ!
ನಕ್ಷತ್ರಗಳು ಸಾಮಾನ್ಯವಾಗಿ ಅಂತ್ಯದ ಸಮೀಪ ಬಂದಾಗ ತನ್ನಲ್ಲಿರುವ ಅನಿಲವನ್ನು ಕಳೆದುಕೊಳ್ಳುತ್ತವೆ. ಅಲ್ಲದೇ ಕಡಿಮೆ ದ್ರವ್ಯರಾಶಿಯ ಉಂಡೆಯಾಗಿ ಪರಿವರ್ತನೆ ಹೊಂದುತ್ತವೆ.
ಸಿಕ್ಕಳಾ ಕಪ್ಪು ಸುಂದರಿ: ಯುಗದ ಮೊದಲ ಬ್ಲ್ಯಾಕ್ ಹೋಲ್ ಫೋಟೋ!
ಸೂರ್ಯನಿಗಿಂತ ಎಂಟು ಪಟ್ಟು ದೊಡ್ಡದಿರುವ ಈ ಕಪ್ಪುರಂಧ್ರವನ್ನು, ಸ್ಪೇನ್ ಮತ್ತು ಅಮೆರಿಕದಲ್ಲಿರುವ ದೂರದರ್ಶಕಗಳ ಮೂಲಕ ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಲಿಯು ಸ್ಪಷ್ಟಪಡಿಸಿದ್ದಾರೆ.
ನಕ್ಷತ್ರ ತೇಗಿದ ಕಪ್ಪುರಂಧ್ರ: ನುಂಗುಬಾಕನಿಗೆ ಯಾವ ಲೆಕ್ಕ ಭೂಮಿ, ಚಂದ್ರ?