ಬ್ರಹ್ಮಾಂಡದ ಅಸ್ತಿತ್ವಕ್ಕೆ ಕಾರಣವಾಗಿರುವ ನಾಲ್ಕು ಪ್ರಮುಖ ಶಕ್ತಿಗಳು| ಹಂಗೇರಿಯ ವಿಜ್ಞಾನಿಗಳಿಂದ ಬ್ರಹ್ಮಾಂಡದ 5ನೇ ಶಕ್ತಿಯ ಆವಿಷ್ಕಾರ?| ಅಟೋಮ್ಕಿ ನ್ಯೂಕ್ಲಿಲಿಯರ್ ರಿಸರ್ಚ್ ಸಂಘಟನೆಯ ಸದಸ್ಯರಿಂದ 5ನೇ ಶಕ್ತಿ ಅನ್ಷೇಷಣೆ?| ಡಾರ್ಕ್ ಮ್ಯಾಟರ್‌ಗೆ ಸಂಬಂಧಿಸಿದ X17 ಕಣವನ್ನು ಪತ್ತೆ ಹಚ್ಚಿದ ಅಟ್ಟಿಲಾ ಕ್ರಾಸ್ನಹೋರ್ಕೆ ತಂಡ| ಪ್ರೊಟೊಫೋಬಿಕ್ ಎಕ್ಸ್ ಬೋಸಾನ್ 17 MeV ದ್ರವ್ಯರಾಶಿ|
ಬುಡಾಪೆಸ್ಟ್(ನ.27): ನಿಸರ್ಗದಲ್ಲಿರುವ ಬೆಳಕು, ಗುರುತ್ವಾಕರ್ಷಣೆ, ಆಯಸ್ಕಾಂತಗಳನ್ನು ಒಳಗೊಂಡ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೋರ್ಸ್ ಮತ್ತು ದರ್ಬಲ-ಪ್ರಬಲ ಪರಮಾಣು ಶಕ್ತಿ, ಇವು ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲಿರುವ ಪ್ರಮುಖ ನಾಲ್ಕು ಶಕ್ತಿಗಳು ಎಂದು ಭೌತ ವಿಜ್ಞಾನ ಹೇಳುತ್ತದೆ.
ಆದರೆ ಈ ಸಿದ್ಧಾಂತವನ್ನು ಬುಡಮೇಲು ಮಾಡಬಲ್ಲ ಹೊಸ ಆವಿಷ್ಕಾರವನ್ನು ಹಂಗೇರಿಯ ವಿಜ್ಞಾನಿಗಳು ಮಾಡಿದ್ದಾರೆ. ಬ್ರಹ್ಮಾಂಡದ 5ನೇ ಶಕ್ತಿಯನ್ನು ಪತ್ತೆ ಹಚ್ಚಿರುವುದಾಗಿ ಅಟೋಮ್ಕಿ ನ್ಯೂಕ್ಲಿಲಿಯರ್ ರಿಸರ್ಚ್ ಸಂಘಟನೆಯ ವಿಜ್ಞಾನಿಗಳು ದಾವೆ ಮಾಡಿದ್ದಾರೆ.
Scientists discovered a new particle they called X17. They found its mass to be 17 megaelectronvolts.https://t.co/PW15xumumK
— Nick Hinton (@NickHintonn)undefined
ಅಟೋಮ್ಕಿ ನ್ಯೂಕ್ಲಿಲಿಯರ್ ರಿಸರ್ಚ್ ಸಂಘಟನೆಯ ಅಟ್ಟಿಲಾ ಕ್ರಾಸ್ನಹೋರ್ಕೆ ಹಾಗೂ ತಂಡದ ಸದಸ್ಯರು ಬ್ರಹ್ಮಾಂಡದ 5ನೇ ಶಕ್ತಿ 17ನ್ನು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ.
ನ್ಯೂಟನ್ ಗ್ರ್ಯಾವಿಟಿ ಲಾ ತಪ್ಪು: ವಿಜ್ಞಾನಿಗಳ ಹೊಸ ವಾದ ನೀ ಒಪ್ಪು!
ಡಾರ್ಕ್ ಮ್ಯಾಟರ್‌ಗೆ ಸಂಬಂಧಿಸಿದ X17 ಕಣವನ್ನು, ಪ್ರೊಟೊಫೋಬಿಕ್ ಎಕ್ಸ್ ಬೋಸಾನ್ 17 MeV ಹತ್ತಿರದ ದ್ರವ್ಯರಾಶಿಯೊಂದಿಗೆ ವಿವರಿಸಲಾಗಿದೆ.
ಎಲೆಕ್ಟ್ರಾನ್ ಕಣಕ್ಕಿಂತ ಕೇವಲ 34 ಪಟ್ಟು ಭಾರವಾಗಿರುವ X17 ಕಣ, 17 ಮೆಗಾ ಎಲೆಕ್ಟ್ರಾನಿಕ್ ವೋಲ್ಟ್ ದ್ರವ್ಯರಾಶಿಯನ್ನು ಹೊಂದಿದೆ.
ಇದೇ ಕಾರಣಕ್ಕೆ ಇದನ್ನು X17ಎಂದು ಹೆಸರಿಸಲಾಗಿದೆ. 2015ರಲ್ಲೆ ಇದರ ಅನ್ಷೇಷಣೆ ಮಾಡಲಾಗಿತ್ತಾದರೂ, ಹೆಚ್ಚಿನ ಅಧ್ಯಯನದ ಬಳಿಕ ಇದರ ಅಸ್ತಿತ್ವನ್ನು ಖಚಿತಪಡಿಸಲಾಗಿದೆ.
A 'no-brainer Nobel Prize': Hungarian scientists may have found a fifth force of nature - CNN https://t.co/AILm3iPCXs “team had detected a new particle, which they call X17, because they calculated its mass at 17 megaelectronvolts.”
— Steven Sinofsky (@stevesi)ಬೆರಿಲಿಯಂ-8 ನ ವಿಕೀರಣಶೀಲತೆಯ ಪರಿಶೀಲನೆ ವೇಳೆ ಹೊರಬಂದ ಬೆಳಕನ್ನು ಆಧರಿಸಿ X17 ಕಣದ ಅಸ್ತಿತ್ವವನ್ನು ಕಂಡುಹಿಡಿಲಾಗಿದೆ ಎಂದು ಅಟ್ಟಿಲಾ ಕ್ರಾಸ್ನಹೋರ್ಕೆ ಸ್ಪಷ್ಟಪಿಸಿದ್ದಾರೆ.
ಆದರೂ ಈ ಕುರಿತು ಮತ್ತಷ್ಟು ಹೆಚ್ಚಿನ ಅಧ್ಯಯನದ ಅವಶ್ಯಕತೆಯಿದ್ದು, ಒಂದು ವೇಳೆ 5ನೇ ಶಕ್ತಿಯ ಇರುವಿಕೆ ಸಾಬೀತಾದರೆ ಭೌತಶಾಸ್ತ್ರದ ಪುನರ್ ವ್ಯಾಖ್ಯಾನ ಅನಿವಾರ್ಯವಾಗಲಿದೆ.