2000 ರು. ನೀಡಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನ್ ನಿಮ್ಮದಾಗಿಸಿಕೊಳ್ಳಿ!

By Web Desk  |  First Published May 9, 2019, 6:24 PM IST

32 ಮೆಗಾ ಪಿಕ್ಸೆಲ್ ಫ್ರಂಟ್‌ ಕ್ಯಾಮರಾ ಸೇರಿ ಒಟ್ಟು 4 ಕ್ಯಾಮೆರಾಗಳು! ರು. 2990 ಬೆಲೆಯ ಇಯರ್‌ಫೋನ್‌ ಸಂಪೂರ್ಣ ಉಚಿತವಾಗಿ ಪಡೆಯುವ ಅವಕಾಶ;   Huawei P30 Lite ಮೊಬೈಲ್‌ಗೆ ನಾಳೆಯಿಂದ ಆಫ್‌ಲೈನ್‌ ಬುಕ್ಕಿಂಗ್‌


ಹೊಸ ಮೊಬೈಲ್‌ ಕೊಳ್ಳಬೇಕು ಎಂದುಕೊಂಡಿದ್ದರೆ ನಿಮಗೊಂದು ಆಯ್ಕೆ ಇದೆ. Huawei P30 Lite. 32 ಮೆಗಾ ಪಿಕ್ಸೆಲ್ ಫ್ರಂಟ್‌ ಕ್ಯಾಮರಾ ಜೊತೆಗೆ ಹಿಂಬದಿಯಲ್ಲಿ ಮೂರು ಕ್ಯಾಮರಾಗಳನ್ನು ಹೊಂದಿರುವ ಈ ಮೊಬೈಲ್‌ಗೆ ಮೇ 10ರಿಂದ ಆಫ್‌ಲೈನ್‌ ಪ್ರಿ ಬುಕ್ಕಿಂಗ್‌ ಆರಂಭ.

ಕ್ರೋಮಾ ಮತ್ತು ಪೂರ್ವಿಕಾ ಸ್ಟೋರ್‌ಗಳಲ್ಲಿ 2000 ರು. ಅಡ್ವಾನ್ಸ್‌ ನೀಡಿ ಪ್ರಿ ಬುಕ್ಕಿಂಗ್‌ ಮಾಡಿಕೊಳ್ಳುವ ಅವಕಾಶವನ್ನು Huawei  ತನ್ನ ಗ್ರಾಹಕರಿಗೆ ನೀಡಿದೆ. ಹೀಗೆ ಬುಕ್‌ ಮಾಡಿಕೊಂಡ ಗ್ರಾಹಕರಿಗೊಂದು ಬಂಪರ್‌ ಆಫರ್‌ ಕೂಡ ಇದೆ. ರು. 2990 ಬೆಲೆಯ ಬೋಟ್‌ ರಾಕರ್‌ ಇಯರ್‌ಫೋನ್‌ 255 ಸಂಪೂರ್ಣ ಉಚಿತವಾಗಿ ಸಿಗಲಿದೆ.

Tap to resize

Latest Videos

ಇದನ್ನೂ ಓದಿ: ಮತ್ತೆ 100 ಆ್ಯಪ್‌ಗಳು ಪ್ಲೇಸ್ಟೋರ್‌ನಿಂದ ಬ್ಯಾನ್! ನಿಮ್ಮ ಫೋನಲ್ಲೂ ಇದೆಯಾ?

6 GB RAM ಮತ್ತು 128 GB ROM ಹೊಂದಿರುವ Huawei P30 Lite ಮಿಡ್‌ನೈಟ್‌ ಬ್ಲ್ಯಾಕ್‌ ಮತ್ತು ಪೀಕಾಕ್‌ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು, ಬೆಲೆ ರು. 22990. 

ಹಿಂಬದಿಯಲ್ಲಿ 24, 08 ಮತ್ತು 02 ಮೆಗಾಫಿಕ್ಸೆಲ್‌ ಕ್ಯಾಮರಾ, ಮುಂಬದಿಯಲ್ಲಿ 32 ಮೆಗಾ ಪಿಕ್ಸೆಲ್ ಕ್ಯಾಮರಾಗಳು ಇದರಲ್ಲಿವೆ. 3340 mAh ಬ್ಯಾಟರಿ, ಆ್ಯಂಡ್ರಾಯ್ಡ್‌ 9.0, ಎಲ್‌ಇಡಿ ಫ್ಲಾಶ್‌ ಲೈಟ್‌, ಪನೋರಮಾ, ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಸುರಕ್ಷತೆ ಹೊಂದಿರುವ ಈ ಮೊಬೈಲ್‌ 6.15 ಇಂಚಿನ ವಿಶಾಲ ಸ್ಕ್ರೀನ್‌ ಹೊಂದಿದೆ.
 

click me!