
ನವದೆಹಲಿ[ಜೂ.27] ವಿವಿಧ ಟೆಲಿಕಾಂ ಸಂಸ್ಥೆಗಳು ತಿಂಗಳ ಲೆಕ್ಕದಲ್ಲಿ ಡಾಟಾ ಪ್ಲಾನ್ ನೀಡುವುದನ್ನು ನೋಡಿದ್ದೇವೆ. ಆದರೆ ಇದೀಗ ಬಿಎಸ್‌ಎನ್‌ಎಲ್ [ಭಾರತ ಸಂಚಾರ ನಿಗಮ] ವಾರ್ಷಿಕ ಯೋಜನೆಯೊಂದನ್ನು ತನ್ನ ಗ್ರಾಹಕರಿಗಾಗಿ ನೀಡುತ್ತಿದೆ.
ತಮಿಳುನಾಡು ಮತ್ತು ಚೆನ್ನೈ ವಿಭಾಗದವರಿಗೆ ಈ ಯೋಜನೆಯನ್ನು ಮೊದಲು ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದೆ. 365 ದಿನಕ್ಕೆ 730 ಜಿಬಿ ಡಾಟಾ ಲಭ್ಯವಾಗಲಿದ್ದು 1999 ರೂಪಾಯಿ ನೀಡಬೇಕಾಗುತ್ತದೆ. ಯೋಜನೆ ಗ್ರಾಹಕರಿಗೆ ಅನ್ ಲಿಮಿಟೆಡ್ ಕರೆ ಮತ್ತು ದಿನಕ್ಕೆ ನೂರು ಎಸ್ಎಂಎಸ್ ಸೇವೆಯನ್ನು ಒದಗಿಸಲಿದೆ. ರಿಲಯನ್ಸ್ ಜಿಯೋ ಈ ಹಿಂದೆ ವಾರ್ಷಿಕ ಆಫರ್ ನೀಡಿತ್ತು ಇದೀಗ ಬಿಎಸ್‌ಎನ್‌ಎಲ್ ತಾನು ಒಂದು ಹೆಜ್ಜೆ ಇಟ್ಟಿದೆ.
ಜಿಯೋ ಹಿಂದಿಕ್ಕಲು ಬಿಎಸ್‌ಎನ್‌ಎಲ್ ಸಜ್ಜು
ಯೋಜನೆಯನ್ನು ಪ್ರಚುರ ಪಡಿಸಲು ದಿನಕ್ಕೆ 2 ಜಿಬಿ ಡಾಟಾದ ಕೊಡುಗೆಯನ್ನು ನೀಡಿದ್ದು ಜೂನ್ 25 ರಿಂದ ಸೆಪ್ಟಂಬರ್ 22, 2018 ರೊಳಗೆ ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಅಂದರೆ ಒಮದು ಜಿಬಿ ಡಾಟಾಕ್ಕೆ ನೀವು ನೀಡಬೇಕಾದ್ದು 2.73ರೂ. ಮಾತ್ರ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.