ಅಂಬಾನಿ ಜಿಯೋಗಿಂತ ಎತ್ತರಕ್ಕೆ ಜಿಗಿದ ಬಿಎಸ್‌ಎನ್ಎಲ್: ಏನಾಗಲಿದೆ ಮುಂದಿನ ನಡೆ?

By Mahmad Rafik  |  First Published Sep 26, 2024, 3:39 PM IST

ರಿಲಯನ್ಸ್ ಜಿಯೋ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಬಿಎಸ್‌ಎನ್‌ಎಲ್ ಸ್ಪರ್ಧೆಯನ್ನು ನೀಡುತ್ತಿದೆ. ಮುಕೇಶ್ ಅಂಬಾನಿಯವರ ಮುಂದಿನ ನಡೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ನವದೆಹಲಿ: ಬಿಎಸ್‌ಎನ್‌ಎಲ್ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ರಿಲಯನಸ್ ಜಿಯೋಗಿಂತ ಎತ್ತರಕ್ಕೆ ಸರ್ಕಾರಿ ಟೆಲಿಕಾಂ ಕಂಪನಿ ಜಿಗಿತ ಕಂಡಿದೆ. ಹೌದು, ರಿಲಯನ್ಸ್ ಜಿಯೋಗಿಂತ ಬಿಎಸ್‌ಎನ್‌ಎಲ್ ಎತ್ತರದ ಸಾಧನೆ ಮಾಡಿದೆ. ಲಡಾಕ್‌ನಿಂದ ದೂರ ದೂರ ಪ್ರದೇಶಗಳಲ್ಲಿಯೂ ಬಿಎಸ್‌ಎನ್‌ಎಲ್ 4ಜಿ ಟವರ್ ಅಳವಡಿಕೆ ಮಾಡುತ್ತಿದೆ. 4G ನೆಟ್‌ವರ್ಕ್ ಅಳವಡಿಕೆ 14,500 ಅಡಿಗಿಂತ ಎತ್ತರಕ್ಕೆ ತಲುಪಿದೆ ಎಂದು ವರದಿಯಾಗಿದೆ. ಈ ಮೂಲಕ ಬಿಎಸ್ಎನ್ಎಲ್ ತನ್ನ ಮಹತ್ವಕಾಂಕ್ಷೆಯ 4G ನೆಟ್‌ವರ್ಕ್ ಅಳವಡಿಕೆ ಮೂಲಕ ತಲುಪಲಾಗದ ಕ್ಷೇತ್ರಗಳನ್ನು ಸಹ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಬಿಎಸ್‌ಎನ್‌ಎಲ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಮೂಲಕ ಖಾಸಗಿ ಕಂಪನಿಗಳಿಗೆ ಮತ್ತೊಂದು ದೊಡ್ಡ ಹೊಡೆತವನ್ನು ನೀಡಿದೆ.

ಟೆಲಿಕಾಂ ಇಂಡಸ್ಟ್ರಿಯ ಮೊದಲ ಸ್ಥಾನದಲ್ಲಿರುವ ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋಗೆ ಬಿಎಸ್ಎನ್ಎಲ್ ವಿಸ್ತರಣೆಯ ಪ್ಲಾನ್ ದೊಡ್ಡ ಶಾಕಿಂಗ್ ನ್ಯೂಸ್ ಆಗಿದೆ. ಅಗ್ರೆಸ್ಸಿವ್ ಮಾರ್ಕೆಟ್ ಸ್ಟ್ರಾಟಜಿಗೆ ಹೆಸರುವಾಸಿಯಾಗಿರುವ ಮುಕೇಶ್ ಅಂಬಾನಿ ಮುಂದಿನ ನಡೆ ಏನಾಗಲಿದೆ ಎಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ. ಮೊದಲಿಗೆ ರಿಲಯನ್ಸ್ ಜಿಯೋ ತನ್ನ ಬೆಲೆಗಳನ್ನು ಹೆಚ್ಚಿಸಿಕೊಂಡ ಬಳಿಕ ಏರ್‌ಟೈಲ್ ಮತ್ತು ವೊಡಾಫೋನ್ ಐಡಿಯಾಗಳು ದರ ಹೆಚ್ಚಿಸಿಕೊಂಡಿದ್ದವು. ಆನಂತರ ಕಡಿಮೆ ಬೆಲೆಯ ಪ್ಲಾನ್ ಪರಿಚಯಿಸಿ ಎದುರಾಳಿಗಳಿಗೆ ಅಂಬಾನಿ ಶಾಕ್ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಬಿಎಸ್ಎನ್‌ಎಲ್ ಪುಟಿದೇಳುವ ಮೂಲಕ ಎಲ್ಲಾ ಖಾಸಗಿ ಕಂಪನಿಗಳಿಗೆ ಶಾಕ್ ನೀಡಿದ್ದಾರೆ.

Tap to resize

Latest Videos

undefined

BSNL ನೆಟ್‌ವರ್ಕ್‌ಗೆ Port ಆಗುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ..

ಕೇಂದ್ರ ಸಚಿವ ಜ್ಯೋತರಾದಿತ್ಯ ಸಿಂಧಿಯಾ ಬಿಎಸ್ಎನ್ಎಲ್ 4ಜಿ ನೆಟ್‌ವರ್ಕ್ ಅಳವಡಿಕೆ ಕುರಿತು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಸದ್ಯ ದೇಶದ ತುಂಬೆಲ್ಲಾ 35 ಸಾವಿರಕ್ಕೂ ಅಧಿಕ 4ಜಿ ನೆಟ್‌ವರ್ಕ್ ಕಾರ್ಯ ಪೂರ್ಣಗೊಂಡಿದೆ. 2025ರವರೆಗೆ  1 ಲಕ್ಷ ಟವರ್ ಅಳವಡಿಕೆಯ ಗುರಿಯನ್ನು ಹೊಂಂದಲಾಗಿದೆ. ಇದಕ್ಕಾಗಿ ಸರ್ಕಾರ 6 ಸಾವಿರ ಕೋಟಿ ರೂಪಾಯಿ ನೆರವು ನೀಡಿದೆ. ಕೆನೆಕ್ಟಿವಿಟಿಗೆ ಮೊದಲ ಆದ್ಯತೆಯನ್ನು ನೀಡಲಾಗಿದ್ದು, ಅರುಣಾಚಲ ಪ್ರದೇಶದ ಮಲಾಪುನಿಂದ ಲಡಾಕ್‌ನ ಫೊಬ್ರಾಂಗ್‌ವರೆಗೂ ವ್ಯಾಪಿಸಲಿದೆ. ಕೇಂದ್ರ ಸರ್ಕಾರದ ಆರ್ಥಿಕ ಮತ್ತು ಟಾಟಾದ ತಂತ್ರಜ್ಞಾನದ ನೆರವಿನಿಂದ 4ಜಿ ನೆಟ್‌ವರ್ಕ್ ಅಳವಡಿಕೆ ಕಾರ್ಯ ವೇಗ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಬಿಎಸ್ಎನ್‌ಎಲ್ ಕೆಲಸ ನೋಡಿ ದೇಶದಟಾಪ್ ಟೆಲಿಕಾಂ ಕಂಪನಿಗಳು ಅಚ್ಚರಿಗೊಂಡಿವೆ. ಖಾಸಗಿ ಕಂಪನಿಗಳಿಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿಯ ಪ್ಲಾನ್ ಗಳನ್ನು ನೀಡುತ್ತಿದೆ. ಈ ಕಾರಣದಿಂದ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಜುಲೈ 2024 ರಲ್ಲಿಯೇ BSNLಗೆ 29.4 ಲಕ್ಷ ಹೊಸ ಗ್ರಾಹಕರನ್ನು ಹೊಂದಿದೆ ಎಂದು TRAI ಮಾಹಿತಿ ನೀಡಿದೆ. ಟೆಲಿಕಾಂ ಕ್ಷೇತ್ರವು ಅತ್ಯಂತ ವೇಗವಾಗಿ ಬದಲಾಗುತ್ತಿದ್ದು,  ಮುಕೇಶ್ ಅಂಬಾನಿ ಮುಂದಿನ ನಡೆ ಏನು? BSNLಹೆ ಹೇಗೆ ಟಕ್ಕರ್ ಕೊಡುತ್ತೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಬಿಎಸ್ಎನ್ಎಲ್ ಹೊಸ ಪ್ಲಾನ್‌ಗೆ ಎದುರಾಳಿಗಳು ಧೂಳಿಪಟ; 200Mbps ಸ್ಪೀಡ್ ಜೊತೆ 5000GB ಡೇಟಾ

click me!