6 ಲಕ್ಷ ಮೊಬೈಲ್‌ ನಂಬರ್ ಬಂದ್, 65 ಸಾವಿರ URL ಬ್ಲಾಕ್; ಸರ್ಕಾರದಿಂದ ಅತಿದೊಡ್ಡ ಮಹತ್ವದ ನಿರ್ಧಾರ

By Mahmad RafikFirst Published Sep 25, 2024, 2:10 PM IST
Highlights

ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಮಹತ್ವದ ಹೆಜ್ಜೆಯುನ್ನು ಇರಿಸಿದ್ದು, 6 ಲಕ್ಷ ಮೊಬೈಲ್‌ ನಂಬರ್ ಬಂದ್, 65 ಸಾವಿರ URL ಬ್ಲಾಕ್ ಮಾಡಲಾಗಿದೆ.

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಸೈಬರ್ ವಿಭಾಗ 14C, ಸೈಬರ್ ದಾಳಿಗಳನ್ನು ಭೇದಿಸಲು ಸತತವಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಒಟ್ಟು 6 ಲಕ್ಷ ಮೊಬೈಲ್ ನಂಬರ್ ಹಾಗೂ ವಂಚನೆ ಮಾಡುತ್ತಿರುವ 65 ಸಾವಿರ ಯುಆರ್‌ಎಲ್‌ (ಲಿಂಕ್‌) ಬ್ಲಾಕ್ ಮಾಡಿ ಆದೇಶ ಹೊರಡಿಸಿದೆ. ಎಂಎಚ್‌ಎ ಸೈಬರ್ ವಿಂಗ್ ಆದೇಶದಲ್ಲಿ ವಂಚನೆಯಲ್ಲಿ ತೊಡಗದ್ದ 800 ಅಪ್ಲಿಕೇಷನ್‌ಗಳನ್ನು (App) ಸಹ ಬ್ಲಾಕ್ ಮಾಡಲಾಗಿದೆ.

2023ರಲ್ಲಿ NCRPಗೆ (National Cyber Crime Reporting Portal) 1 ಲಕ್ಷಕ್ಕೂ ಅಧಿಕ ಇನ್ವೆಸ್ಟ್‌ಮೆಂಟ್ ಸ್ಕ್ಯಾಮ್ ಸಂಬಂಧ ದೂರುಗಳು ಸಲ್ಲಿಕೆಯಾಗಿದ್ದವು. ಇಡೀ ದೇಶದದ್ಯಂತ ಸೈಬರ್ ಕ್ರೈಂ ಸಂಬಂಧ ಅಂದಾಜು 17 ಸಾವಿರ ಎಫ್‌ಐಆರ್ ದಾಖಲಾಗಿವೆ. ಇನ್ನು  ಜನವರಿ 2024 ರಿಂದ ಸೆಪ್ಟೆಂಬರ್ 2024ರವರೆಗೆ ಡಿಜಿಟಲ್ ಅರೆಸ್ಟ್  6000, ಟ್ರೇಡಿಂಗ್ ಸ್ಕ್ಯಾಮ್ 20,043, ಇನ್ವೆಸ್ಟ್‌ಮೆಂಟ್ ಸ್ಕ್ಯಾಮ್ 62,687 ಮತ್ತು ಡೇಟಿಂಗ್ ಸ್ಕ್ಯಾಮ್ 1725 ದೂರುಗಳು ದಾಖಲಾಗಿವೆ.

Latest Videos

ಸೈಬರ್ ವಿಂಗ್ ತೆಗೆದುಕೊಂಡ ಮಹತ್ವದ ನಿರ್ಧಾರಗಳು 
1.
ಕಳೆದ ನಾಲ್ಕು ತಿಂಗಳಲ್ಲಿ 3.25 ಲಕ್ಷ ವಂಚನೆ ಮಾಡುವ ಅಕೌಂಟ್‌ಗಳ (Mule Accounts) ಡೆಬಿಟ್ ಫ್ರೀಜ್ ಮಾಡಲಾಗಿದೆ.
2.ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ ಅಥವಾ ತೊಡಗಿಕೊಂಡಿರುವ 3401 ಸೋಶಿಯಲ್ ಮೀಡಿಯಾ, ವೆಬ್‌ಸೈಟ್ ಮತ್ತು ವಾಟ್ಸಪ್ ಗ್ರೂಪ್ ಬಂದ್. 
3.ಕಳೆದ ವರ್ಷದಿಂದ ಸೈಬರ್ ಫ್ರಾಡ್‌ನಿಂದ 2800 ಕೋಟಿ ರೂಪಾಯಿ ಸೇವ್ ಮಾಡಲಾಗಿದೆ.
4.ಗೃಹ ಸಚಿವಾಲಯ 8 ಲಕ್ಷ 50 ಸಾವಿರ ಸಂತ್ರಸ್ತರನ್ನು ಸೈಬರ್ ದಾಳಿಯಿಂದ ರಕ್ಷಣೆ ಮಾಡಲಾಗಿದೆ.

ಸೈಬರ್ ಅಪರಾಧ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳೇನು?

1.ಇಡೀ ದೇಶದಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಲು ರಾಷ್ಟ್ರೀಯಮಟ್ಟದಲ್ಲಿ ಕೋಆರ್ಡಿನೇಷನ್ ಸೆಂಟರ್ ಆರಂಭ

2.ಸೈಬರ್ ವಂಚನೆ ದೂರು ಸಲ್ಲಿಸುವ ಪ್ರಕ್ರಿಯೆ ಸರಳೀಕರಣ

3.ಸೈಬರ್ ಅಪರಾಧ ತಡೆಗಟ್ಟಲು ಸಂಸ್ಥೆಗಳಿಗೆ ಕಾನೂನು ಸಹಾಯ.

4.ಸೈಬರ್ ಅಪರಾಧದ ಪ್ರವೃತ್ತಿಗಳು ಮತ್ತು ಮಾದರಿಗಳನ್ನು ಗುರುತಿಸುವುದು. 

5.ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಜನರಲ್ಲಿ ಜಾಗೃತಿ ಮೂಡಿಸುವುದು.

6.ನಕಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಗುರುತಿಸುವುದು ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳುವುದು. 

7.ಡಿಜಿಟಲ್ ಬಂಧನದ ಬಗ್ಗೆ ಎಚ್ಚರಿಕೆಯನ್ನು ನೀಡುವುದು

8.ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರಿಗೆ ತರಬೇತಿ

9.ಸೈಬರ್ ಕಮಾಂಡೋ ತರಬೇತಿ. ಮುಂದಿನ ಐದು ವರ್ಷಗಳಲ್ಲಿ 5,000 ಸೈಬರ್ ಕಮಾಂಡೋಗಳಿಗೆ ತರಬೇತಿ

ಬಿಎಸ್‌ಎನ್‌ಎಲ್‌ 4G ಲಾಂಚ್ ಯಾವಾಗ? ಮೋದಿ ಸರ್ಕಾರದಿಂದ ಮಹತ್ವದ ಮಾಹಿತಿ

14C ವಿಂಗ್ ಎಂದರೇನು?
I4C ವಿಂಗ್ ಅನ್ನು ಅಕ್ಟೋಬರ್ 5, 2018 ರಂದು ಗೃಹ ವ್ಯವಹಾರಗಳ ಸಚಿವಾಲಯದ ಸೈಬರ್ ಮತ್ತು ಮಾಹಿತಿ ಭದ್ರತಾ ವಿಭಾಗ (CIS ವಿಭಾಗ) ವ್ಯಾಪ್ತಿಯಲ್ಲಿ ಕೇಂದ್ರ ವಲಯ ಯೋಜನೆಯಡಿ ಸ್ಥಾಪಿಸಲಾಯಿತು. ದೇಶದಾದ್ಯಂತ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಮಟ್ಟದ ಸಮನ್ವಯ ಕೇಂದ್ರವನ್ನು ಸ್ಥಾಪಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಸೈಬರ್ ಅಪರಾಧಗಳನ್ನು ತಡೆಗಟ್ಟುವುದು, ಅಪರಾಧದ ವಿಶ್ಲೇಷಣೆ ಮತ್ತು ತನಿಖೆ,ತಾಂತ್ರಿಕ ಮತ್ತು ಕಾನೂನು ಸಹಾಯವನ್ನು I4C ವಿಂಗ್ ಮಾಡುತ್ತದೆ. ಪ್ಯಾರಾ ಮಿಲಿಟರಿ ಫೋರ್ಸ್ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ I4C ವಿಂಗ್‌ನಲ್ಲಿ ಕೆಲಸ ಮಾಡುತ್ತಾರೆ.

ಒಂದು ಬಟನ್ ಒತ್ತಿದ್ರೆ Jio-Airtelನಿಂದ ಸಿಗುತ್ತೆ ಮುಕ್ತಿ; ಕೆಲವೇ ನಿಮಿಷದಲ್ಲಿ ಮನೆಗೆ ಬರುತ್ತೆ BSNL 4G ಸಿಮ್

click me!