ಐನ್‌ಸ್ಟೈನ್‌ಗೂ ಸವಾಲೊಡ್ಡಿದ್ದ ಭಾರತೀಯ: ನಾಸಾವೂ ಇವರ ಸಹಾಯ ಪಡೆದಿತ್ತು: ಜನ ಮರೆತ ಗಣಿತಶಾಸ್ತ್ರಜ್ಞ

By Anusha Kb  |  First Published Sep 25, 2024, 5:00 PM IST

ಬಿಹಾರದ ಬಸಂತ್‌ಪುರ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ವಶಿಷ್ಠ ನಾರಾಯಣ ಸಿಂಗ್, ಅವರು ಗಣಿತದಲ್ಲಿ ಜೀನಿಯಸ್‌, ಖ್ಯಾತ ವಿಜ್ಞಾನಿಯಾದ ಐನ್‌ಸ್ಟೈನ್ ಅವರ ಥಿಯರಿಗೂ ಇವರು ಸವಾಲೊಡ್ಡಿದ್ದರು. ಐಐಟಿ ನಾಸಾದಲ್ಲೂ ಕೆಲಸ ಮಾಡಿದ್ದ ಅವರು ನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು.


ಜೀವನವೂ ಗಣಿತದಲ್ಲಿ ಬರುವ ಲೆಕ್ಕಾಚಾರದಂತೆ, ಹೆಚ್ಚು ಗಳಿಕೆ ಮಾಡಲು ನೆಗೆಟಿವನ್ನು ಪಾಸಿಟಿವ್‌ ಆಗಿ ಬದಲಾಯಿಸಲು ನಮಗೆ ತಿಳಿದಿರಬೇಕು.  ಇಲ್ಲದೇ ಹೋದರೆ ಬದುಕು ದುರಂತವಾಗಿ ಬಿಡುತ್ತದೆ. ಇದನ್ನು ವಶಿಷ್ಠ ನಾರಾಯಣ ಸಿಂಗ್ ಅವರ ಜೀವನಕ್ಕಿಂತ ಚೆನ್ನಾಗಿ ಬೇರೆಲ್ಲೂ ವಿವರಿಸಲು ಸಾಧ್ಯವಿಲ್ಲ, ಬಿಹಾರದ ಬಸಂತ್‌ಪುರ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ವಶಿಷ್ಠ ನಾರಾಯಣ ಸಿಂಗ್, ಅವರು ಗಣಿತದಲ್ಲಿ ಜೀನಿಯಸ್‌, ಖ್ಯಾತ ವಿಜ್ಞಾನಿಯಾದ ಐನ್‌ಸ್ಟೈನ್ ಅವರ ಥಿಯರಿಗೂ ಇವರು ಸವಾಲೊಡ್ಡಿದ್ದರು. ಐಐಟಿ ನಾಸಾದಲ್ಲೂ ಕೆಲಸ ಮಾಡಿದ್ದ ಅವರು ನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು. ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಜನಪ್ರಿಯತೆ ಸಿಗದೇ ತೆರೆಮರೆಯಲ್ಲೇ ಇದ್ದು ಬದುಕಿನ ಏಳುಬೀಳುಗಳ ನಡುವೆ ಸಂಪೂರ್ಣ ಹೈರಾಣಾದ ಅವರ ದುರಂತ ಕತೆ ಇಲ್ಲಿದೆ.

ವಶಿಷ್ಠ ನಾರಾಯಣ ಸಿಂಗ್‌, ಅವರು  ಜನಿಸಿದ್ದು, 1942ರಲ್ಲಿ ಬಿಹಾರದ ಪುಟ್ಟ ಗ್ರಾಮ ಬಸಂತ್‌ಪುರದಲ್ಲಿ ಜನಿಸಿದ ಅವರು ಗಣಿತಶಾಸ್ತ್ರದಲ್ಲಿ ಮಹಾನ್ ಬುದ್ಧಿವಂತ, ಆದರೆ ಅವರ ಜೀವನವೇ ಸಂಪೂರ್ಣ ದುರಂತಮಯವಾಗಿತ್ತು. ಶೈಕ್ಷಣಿಕವಾಗಿ ಬಹಳ ಬುದ್ಧಿವಂತರಾಗಿದ್ದ ನಾರಾಯಣ್‌ ಸಿಂಗ್ ಅವರು ಆಗಿನ ಕಾಲದಲ್ಲೇ ಬಿಎಸ್ಸಿ, ಎಂಎಸ್‌ಸಿ ಶಿಕ್ಷಣವನ್ನು ಉನ್ನತ ದರ್ಜೆಯಲ್ಲಿ ಪಾಸ್‌ ಮಾಡಿದ್ದರು. ಬರೀ ಅಷ್ಟೇ ಅಲ್ಲ ನಾಸಾ, ಐಐಟಿ, ಬೆರ್ಕೆಲಿಯ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯಲ್ಲಿಯೂ ಕೆಲಸ ಮಾಡಿದ್ದರು.  ಆದರೆ ನಡುವೆ ಅವರಿಗೆ ಕಾಣಿಸಿಕೊಂಡ ಮಾನಸಿಕ ಕಾಯಿಲೆಯಿಂದಾಗಿ ಅರ ಬದುಕು ದುರಂತಮಯವಾದ ತಿರುವು ಪಡೆದುಕೊಂಡಿತ್ತು. ಗಣಿತಶಾಸ್ತ್ರಜ್ಞ ರಾಮನುಜಂ ಅವರ ಉತ್ತರಾಧಿಕಾರಿಯಾಗುವ ಸಾಮರ್ಥ್ಯವಿದ್ದ ಅವರು ಮಾನಸಿಕ ಖಿನ್ನತೆಯಿಂದಾಗಿ ಶೂನ್ಯದತ್ತ ಜಾರಿದ್ದರು. 

Tap to resize

Latest Videos

undefined

6 ಲಕ್ಷ ಮೊಬೈಲ್‌ ನಂಬರ್ ಬಂದ್, 65 ಸಾವಿರ URL ಬ್ಲಾಕ್; ಸರ್ಕಾರದಿಂದ ಅತಿದೊಡ್ಡ ಮಹತ್ವದ ನಿರ್ಧಾರ

ಪೊಲೀಸ್ ಕಾನ್ಸ್‌ಟೇಬಲ್‌ ಒಬ್ಬರ ಪುತ್ರರಾದ ನಾರಾಯಣ್ ಸಿಂಗ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದು ಜಾರ್ಖಂಡ್‌ನ ನೆತರ್‌ಹಟ್‌ ಶಾಲೆಯಲ್ಲಿ ಮುಂದೆ ಪಾಟ್ನಾದ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿದ್ದರು. ಅವರ ಅದ್ಭುತವಾದ ಪ್ರತಿಭೆಯನ್ನು ಗುರುತಿಸಿದ ಕಾಲೇಜು ಪ್ರಾಂಶುಪಾಲರು ಅವರಿಗೆ ಶಿಕ್ಷಣದಲ್ಲಿ ಮತ್ತಷ್ಟು ಮಾರ್ಗದರ್ಶನ ನೀಡಿದ್ದರು. ಪರಿಣಾಮ 1969ರಲ್ಲೇ ಅವರು ಪಿಹೆಚ್‌ಡಿ ಮಾಡಿದ್ದರು. 

ಇವರ ಈ ಬುದ್ಧಿವಂತಿಕೆಯಿಂದ ಪ್ರಭಾವಿತಗೊಂಡ ಪ್ರೊಫೆಸರ್‌ ಜಾನ್‌ ಎಲ್‌. ಕೆಲ್ಲಿ, ನಾರಾಯಣ್‌ ಸಿಂಗ್ ಅವರಿಗೆ ಉನ್ನತ ಶಿಕ್ಷಣ ಪಡೆಯಲು ಬೆರ್ಕೆಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಅನುಕೂಲ ಮಾಡಿಕೊಟ್ಟರು.  ಹೀಗಾಗಿ ದಶಕದ ಕಾಲ ವಿದೇಶದಲ್ಲಿದ್ದ ಸಿಂಗ್ ನಂತರ ಭಾರತಕ್ಕೆ ಹಿಂದಿರುಗಿದ್ದರು. ನಂತರ ಕಾನ್ಪುರ ಐಐಟಿ ಹಾಗೂ ಮುಂಬೈನ ಟಾಟಾ ಇನ್ಸಿಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಲ್ಲಿ ಹಾಗೂ ಇಂಡಿಯನ್‌ ಸ್ಟಟಿಸ್ಟಿಕಲ್ ಇನ್ಸಿಟಿಟ್ಯೂಟ್‌ ಕೋಲ್ಕತ್ತಾದಲ್ಲಿಯೂ ಕೆಲಸ ಮಾಡಿದ್ದರು. 

ಇಂದು ಸುನೀತಾ ವಿಲಿಯಮ್ಸ್‌ ಜನ್ಮದಿನ, ಬಾಹ್ಯಾಕಾಶವನ್ನೇ 2ನೇ ಮನೆ ಮಾಡಿಕೊಂಡ ಗಗನಯಾತ್ರಿ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ!

ಪ್ರಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೈನ್‌ ಅವರ ಥಿಯರಿ ಆಫ್ ರಿಲೇಟಿವಿಟಿಗೆ ಸಾವಲೊಡ್ಡಿದ್ದರು, ಜೊತೆಗೆ ಒಮ್ಮೆ ನಾಸಾದ ಕಂಪ್ಯೂಟರ್‌ ಕೆಲಸ ಮಾಡುವುದು ಸ್ಥಗಿತಗೊಳಿಸಿದಾಗ ಅಲ್ಲಿನ ಸಂಕೀರ್ಣವಾದ ಲೆಕ್ಕಚಾರವನ್ನು ಪೂರ್ಣಗೊಳಿಸಿ ಕಂಪ್ಯೂಟರನ್ನು ಸರಿಪಡಿಸಿದ್ದರು ಎಂಬ ಮಾತಿದೆ. ಹಾಗೂ ನಾಸಾದ ಅಪೊಲೋ ಮೂನ್ ಮಿಷನ್‌ಗೂ ಕೊಡುಗೆ ನೀಡಿದ್ದರು ಎಂಬ ವರದಿ ಇದೆ. ವಿಜ್ಞಾನದಲ್ಲಿ ಅವರ ಕೆಲಸ ಅವರಿಗೆ ಜಾಗತಿಕ ಮನ್ನಣೆಯನ್ನು ತಂದು ಕೊಟ್ಟಿತ್ತು. ಆದರೆ ಅವರ ಬಹುತೇಕ ಸಾಮರ್ಥ್ಯಗಳು ಅವರ ವೈಯಕ್ತಿಕ ಜೀವನದಲ್ಲಾದ ತೊಂದರೆಯಿಂದಾಗಿ ತೆರೆಮರೆಯಲ್ಲೇ ಸರಿದು ಹೋಗಿದೆ. 

ಹಳೆ ಫೋನ್‌ ಸೇಲ್ ಮಾಡೋ ಮುನ್ನ ಈ ಮಿಸ್ಟೇಕ್ ಮಾಡ್ಬೇಡಿ : ಕಂಬಿ ಎಣಿಸ್ಬೇಕಾಗುತ್ತೆ ಹುಷಾರ್

ಇಷ್ಟೊಂದು ಮಹಾನ್ ಸಾಮರ್ಥ್ಯವಿದ್ದ ಅವರು ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಿದರಿಂದ ಅವರ ಬದುಕು ಹಳಿತಪ್ಪಿತ್ತು. ಇದರಿಂದ ಅವರ ಮದುವೆಯೂ ಮುರಿದು ಬಿತ್ತು. ಕೊನೆಯದಾಗಿ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡುವಂತೆ ಮಾಡಿತ್ತು. ಈ ಮಧ್ಯೆ ಅವರು ಒಂದು ಸಲ ರೈಲು ಪ್ರಯಾಣದ ವೇಳೆ ತಪ್ಪಿ ಹೋಗಿ  ನಾಪತ್ತೆಯಾಗಿದ್ದರು.  ಆದರೆ ನಂತರ ಅವರು ಬಡತನದ ಸ್ಥಿತಿಯಲ್ಲಿ ತಮ್ಮ ಹುಟ್ಟೂರಿನಲ್ಲಿ ಕಾಣಿಸಿಕೊಂಡಿದ್ದರು. 

ಇದಾದ ನಂತರ ಅವರಿಗೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಇದರ ಜೊತೆಗೆ ದೆಹಲಿಯ ಹ್ಯೂಮನ್ ಬಿಹೇವಿಯರ್ & ಅಲೈಡ್‌ ಸೈನ್ಸ್‌ ನಲ್ಲಿಯೂ ನಟ ಶತ್ರುಘ್ನ ಸಿನ್ಹಾ ಅವರ ಸಹಾಯದಿಂದ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ನಂತರ ಅವರು ಹುಷಾರಾಗಿ ಮತ್ತೆ ತಮ್ಮ ಪ್ರಧ್ಯಾಪಕ ವೃತ್ತಿಗೆ ಮರಳಿ ಬಂದ ಅವರು ಮದೇಪುರದ ಬಿಎನ್‌ಎಂಯುನಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಪ್ರತಿಭೆ ಇದ್ದರೂ ಕೂಡ  ಯಾವುದು ಕೂಡ ಅಷ್ಟಾಗಿ ಬೆಳಕಿಗೆ ಬರದೇ ತೆರೆಮರೆಗೆ ಸರಿದು ಹೋದರು. ನಂತರ 2019ರ ನವೆಂಬರ್ 14ರಂದು ಅವರು ಸಾವನ್ನಪ್ಪಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಗಣಿತಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಗಾಗಿ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ  ಪ್ರಶಸ್ತಿ ನೀಡಿ ಗೌರವಿಸಲಾಯ್ತು.
 

click me!