120 ರೂಪಾಯಿಗಿಂತಲೂ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಕೊಟ್ಟ ಬಿಎಸ್‌ಎನ್‌ಎಲ್

By Mahmad RafikFirst Published Sep 9, 2024, 6:01 PM IST
Highlights

BSNL ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಅನ್‌ಲಿಮಿಟೆಡ್ ವಾಯ್ಸ್ ಕರೆಗಳು, 10GB ಹೈ-ಸ್ಪೀಡ್ ಡೇಟಾ ಮತ್ತು ಹೆಚ್ಚುವರಿ ಲಾಭಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ.

ನವದೆಹಲಿ: ಭಾರತ ಸಂಚಾರ ನಿಗಮ ಲಿಮಿಟೆಡ್ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿವೆ. ಜೂನ್ ಆರಂಭದಲ್ಲಿ ಮೂರು ಖಾಸಗಿ ಕಂಪನಿಗಳು ಪೋಸ್ಟ್‌ಪೇಡ್ ಮತ್ತು ಪ್ರಿಪೇಯ್ಡ್‌ ರೀಚಾರ್ಜ್‌ ಬೆಲೆಯನ್ನು ಅಂದಾಜು ಶೇ.15ರಷ್ಟು  ಹೆಚ್ಚಿಸಿಕೊಂಡಿವೆ. ಆದ್ರೆ ಇದರ ಲಾಭವನ್ನು ಪಡೆದುಕೊಂಡಿದ್ದು ಸರ್ಕಾರಿ ಕಂಪನಿ ಬಿಎಸ್‌ಎನ್‌ಎಲ್. ಬೆಲೆ ಏರಿಕೆ ಬೆನ್ನಲ್ಲೇ ತನ್ನ ನೆಟ್‌ವರ್ಕ್‌ಗೆ ಆಗಮಿಸುವ ಬಳಕೆದಾರರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದರ ಪರಿಣಾಮ ಬಿಎಸ್ಎನ್‌ಎಲ್ ಗ್ರಾಹಕರ ಸಂಖ್ಯೆ ಏರಿಕೆಯಾಗಿದೆ. ಇದೀಗ ಬಿಎಸ್ಎನ್‌ಎಲ್ 120 ರೂಪಾಯಿಗೂ ಕಡಿಮೆ ಬೆಲೆಯ ಆಫರ್ ಘೋಷಿಸಿದೆ.

ಇಂದು ನಾವು ನಿಮಗೆ 118 ರೂಪಾಯಿ ಪ್ಲಾನ್ ಬಗ್ಗೆ, ಈ ಯೋಜನೆ 20 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. 118 ರೂಪಾಯಿ ರೀಚಾರ್ಜ್‌ ಮಾಡಿಕೊಳ್ಳುವ ಗ್ರಾಹಕರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಿಗಲಿದೆ. ಇದರೊಂದಿಗೆ ಹೈಸ್ಪೀಡ್ 10GB ಡೇಟಾ ಲಭ್ಯವಾಗಲಿದೆ. ಕಾಲ್ ಮತ್ತು ಡೇಟಾ ಹೊರತುಪಡಿಸಿ ಹೆಚ್ಚುವರಿಯಾಗಿ Hardy Games, Arena Games, Gameon Astrotell, Gameium, Lystn Podocast, Zing Music ಮತ್ತು WOW Entertainment ಆಕ್ಸೆಸ್ ಸಿಗಲಿದೆ. 

Latest Videos

BSNL Plan ನೋಡಿ Portಗೆ ಮುಂದಾದ Jio-Airtel ಗ್ರಾಹಕರು: 45 ದಿನದವರೆಗೆ ಪ್ರತಿದಿನ ಸಿಗುತ್ತೆ 2GB ಡೇಟಾ!

ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ತನ್ನ ಗ್ರಾಹಕರಿಗೆ ಅಚ್ಚರಿಯ ಗುಡ್‌ನ್ಯೂಸ್ ನೀಡುತ್ತಿದೆ. ಬಿಎಸ್‌ಎನ್ಎಲ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಖಾಸಗಿ ಕಂಪನಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದಂತಿದೆ. ಈ ಪೋಸ್ಟ್ ಮೂಲಕ ಶೀಘ್ರದಲ್ಲಿಯೇ ಸೂಪರ್‌ಫಾಸ್ಟ್ ಕೆನೆಕ್ಟವಿಟಿ ನೀಡುವ ಭರವಸೆಯನ್ನು ನೀಡಿದೆ. ಸದ್ಯ ಬಿಎಸ್‌ಎನ್ಎಲ್ 4ಜಿ ನೆಟ್‌ವರ್ಕ್ ಸೆಟಪ್‌ಗೆ ಮುಂದಾಗಿದ್ದು, 25,000 ಮೊಬೈಲ್ ಅಪ್‌ಗ್ರೇಡ್‌ ಮಾಡುವ ಪ್ರಯತ್ನದಲ್ಲಿದೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಖಾಸಗಿ ಕಂಪನಿಗಳಿಗೆ ಕಠಿಣ ಸ್ಪರ್ಧೆ ನೀಡಲು ಮುಂದಾಗುತ್ತಿವೆ. ತನ್ನ ಮೂಲಸೌಕರ್ಯವನ್ನು ನವೀಕರಣಕ್ಕೆ ಮುಂದಾಗಿರುವ BSNL ದೀಪಾವಳಿಯ ವೇಳೆಗೆ 75000 ಕಾರ್ಯಾಚರಣೆಯ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ನೆಟ್‌ವರ್ಕ್ ಸಂಪರ್ಕ ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಇತ್ತೀಚಿನ ಬೆಲೆ ಏರಿಕೆಗಳಿಂದಾಗಿ BSNL ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಈ ಬೆಳವಣಿಗೆಯು ಖಾಸಗಿ ಕಂಪನಿಗಳಿಗೆ ಸಂಭಾವ್ಯವಾಗಿ ಸ್ಪರ್ಧೆಯನ್ನು ಉಂಟು ಮಾಡುವ ಸಂದರ್ಭ ಮಾರುಕಟ್ಟೆಯಲ್ಲಾಗುವ ಸಾಧ್ಯತೆ ಇದೆ. 

ಟಕ್ಕರ್ ಅಂದ್ರೆ ಇದಪ್ಪಾ...! ಎಲ್ಲದಕ್ಕಿಂತ 40 ಪರ್ಸೆಂಟ್ ಕಡಿಮೆ ಬೆಲೆ.. ಒಂದು ತಿಂಗಳಲ್ಲಿ BSNLಗೆ ಬಂದವರೆಷ್ಟು?

Faster speeds, greater possibilities: Driving Innovation and self reliance.
Stay tuned for more updates. pic.twitter.com/m32hrzCIXM

— BSNL India (@BSNLCorporate)
click me!