ಭೂಮಿ ಕಂಪಿಸುವ ವಿಚಾರ ಎಲ್ಲರಿಗೂ ಗೊತ್ತು. ವರ್ಷಗಳ ಕಾಲ ಜಡವಾಗಿ ಮಲಗಿದ ಭೂಮಿ ಒಮ್ಮೆ ಮೈ ಮುರಿದರೆ ಆಗುವ ಅನಾಹುತ ಅಷ್ಟಿಷ್ಟಲ್ಲ, ಆದರೆ ಚಂದ್ರನ ಮೇಲೆಯೂ ಭೂಮಿ ಕಂಪಿಸುತ್ತದಾ? ಹೌದು ಎನ್ನುತ್ತದೆ ಚಂದ್ರಯಾನ 3 ಮಿಷನ್.
ಭೂಮಿ ಕಂಪಿಸುವ ವಿಚಾರ ಎಲ್ಲರಿಗೂ ಗೊತ್ತು. ವರ್ಷಗಳ ಕಾಲ ಜಡವಾಗಿ ಮಲಗಿದ ಭೂಮಿ ಒಮ್ಮೆ ಮೈ ಮುರಿದರೆ ಆಗುವ ಅನಾಹುತ ಅಷ್ಟಿಷ್ಟಲ್ಲ, ಆದರೆ ಚಂದ್ರನ ಮೇಲೆಯೂ ಭೂಮಿ ಕಂಪಿಸುತ್ತದಾ? ಹೌದು ಎನ್ನುತ್ತದೆ ಚಂದ್ರಯಾನ 3 ಮಿಷನ್. ಬಾಹ್ಯಾಕಾಶ ಲೋಕದ ಹಲವು ಮೊದಲುಗಳಿಗೆ ಕಾರಣವಾದ ಚಂದ್ರಯಾನ 3 ಮಿಷನ್ ಇದುವರೆಗೆ ಒಟ್ಟು ಇಂತಹ 250ಕ್ಕೂ ಹೆಚ್ಚು ಕಂಪನಗಳನ್ನು ದಾಖಲಿಸಿದೆ ಎಂದು ಇಸ್ರೋ ಹೇಳಿದೆ.
ಕಳೆದ ವರ್ಷ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಭಾರತದ ಚಂದ್ರಯಾನ 3 ಮಿಷನ್ 250ಕ್ಕೂ ಹೆಚ್ಚು ಭೂಕಂಪನದ ತರಾಂಗಾಂತರಗಳನ್ನು ದಾಖಲಿಸಿದೆ. ಇದರಲ್ಲಿ 50ರಷ್ಟು ಕಂಪನಗಳು ಚಂದ್ರನಲ್ಲಿನ ಕಂಪನಗಳಿಗೆ ಸಂಬಂಧಿಸಿರಬಹುದೇ ಎಂದು ವಿವರಿಸಲಾಗದಂತಹದು. ಅಪೊಲೋ ಯುಗದ ನಂತರ ಈ ರೀತಿಯ ಮಾಹಿತಿ ಸಂಗ್ರಹಣೆ ಇದೇ ಮೊದಲಾಗಿರುವುದರಿಂದ ಇದೊಂದು ಗಮನಾರ್ಹ ಸಾಧನೆಯಾಗಿದೆ ಎಂದು ICARUSನಲ್ಲಿ ಇಸ್ರೋ ಸಂಶೋಧಕರು ಪ್ರಕಟಿಸಿದ ವರದಿಯಲ್ಲಿ ಪ್ರಕಟಿಸಲಾಗಿದೆ.
undefined
Chandrayaan 3: ಚಂದ್ರನ ಮೇಲೆ ವಿಕ್ರಮ್, ಪ್ರಗ್ಯಾನ್ ಇಳಿದ ಹಿಂದೆಂದೂ ಕಾಣದ ಚಿತ್ರ ಪ್ರಕಟಿಸಿದ ಇಸ್ರೋ!
ಈ ಕಂಪನಗಳು ರೋವರ್ (ಪ್ರಜ್ಞಾನ್)ನ ಚಲನೆ ಅಥವಾ ಇತರ ಬಾಹ್ಯಾಕಾಶ ಉಪಕರಣಗಳ ಕಾರ್ಯಾಚರಣೆಯಿಂದ ಸಂಭವಿಸಿದ ಕಂಪನವಲ್ಲ, ಅದರಲ್ಲೂ 50ರಷ್ಟು ಕಂಪನಗಳಿಗೂ ರೋವರ್‌ಗಳಿಗೂ ಯಾವುದೇ ಸಂಬಂಧವಿಲ್ಲ, ಇವುಗಳು ಬಹುಶಃ ಮೂನ್ಕ್ವೇಕ್ ( ಚಂದ್ರನ ಕಂಪನಕ್ಕೆ) ಸಂಬಂಧಿಸಿದಾಗಿರಬಹುದು. ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭೂಮಿ ಕಂಪಿಸಿದ ಮಾಹಿತಿಯನ್ನು ದಾಖಲಿಸಿದ ಮೊದಲ ನಿದರ್ಶನವಾಗಿದೆ.
ವಿಕ್ರಮ್ ಲ್ಯಾಂಡರ್‌ನಲ್ಲಿರುವ ವೈಜ್ಞಾನಿಕ ಸಾಧನವಾದ ಇನ್‌ಸ್ಟ್ರುಮೆಂಟ್ ಫಾರ್ ಲೂನಾರ್ ಸೆಸ್ಮಿಕ್ ಆಕ್ಟಿವಿಟಿ (ILSA)ಮೂಲಕ ಈ ಪ್ರಯೋಗವನ್ನು ನಡೆಸಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ 69.37 ಡಿಗ್ರಿ ದಕ್ಷಿಣ ಮತ್ತು 32.32 ಪೂರ್ವದ ಲ್ಯಾಂಡಿಂಗ್ ಸೈಟ್‌ನಲ್ಲಿ ನಡೆಸಲಾಗಿದೆ. 2023 ರ ಆಗಸ್ಟ್ 24 ಮತ್ತು ಸೆಪ್ಟೆಂಬರ್ 4 ರ ನಡುವೆ ಸುಮಾರು 190 ಗಂಟೆಗಳ ಈ ಐಎಲ್‌ಎಸ್‌ಎ ಕಾರ್ಯನಿರ್ವಹಿಸಿದೆ. ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇರುವ ಭೂಮಿಯ ವೇಗವರ್ಧನೆಯನ್ನು ದಾಖಲಿಸಿದ ಮೊದಲ ಸಾಧನವಾಗಿದೆ. ಹಾಗೂ ಸಿಲಿಕಾನ್ ಮೈಕ್ರೋಮಾಚಿನಿಂಗ್ ತಂತ್ರಜ್ಞಾನದಿಂದ ತಯಾರಿಸಿದ ಉಪಕರಣವನ್ನು ಬಳಸಿದ ಚಂದ್ರನ ಮೇಲ್ಮಯಲ್ಲಿ ಈ ರೀತಿ ಸಂಶೋಧನೆ ನಡೆಸಿದ ಮೊದಲ ಸಾಧನವಾಗಿದೆ ಎಂದು ಗೃಹಗಳಿಗೆ ಸಂಬಂಧಿಸಿದ ಸಂಶೋಧನ ಬರಹಗಳಿಗೆ ಮೀಸಲಾಗಿರುವ ವೈಜ್ಞಾನಿಕ ನಿಯತಕಾಲಿಕವಾದ ಐಸಿಎಆರ್‌ಯುಎಸ್‌ನಲ್ಲಿ ಇಸ್ರೋ ವಿಜ್ಞಾನಿಗಳು ಈ ಸಂಶೋಧನಾ ಲೇಖನವನ್ನು ಪ್ರಕಟಿಸಿದ್ದಾರೆ.
ಇಸ್ರೋದ ಚಂದ್ರಯಾನ 3 ಮೈಲಿಗಲ್ಲಿಗೆ ಐಎಸ್ ಫೆಡರೇಶನ್‌ನಿಂದ ವಿಶ್ವ ಬಾಹ್ಯಾಕಾಶ ಪ್ರಶಸ್ತಿ ಗರಿ!
ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋದ ಪ್ರಯೋಗಾಲಯದ ಸಂಶೋಧಕರಾದ ಜೆ ಜಾನ್, ವಿ ತಾಮರೈ, ಟೀನಾ ಚೌಧರಿ, ಎಂಎನ್ ಶ್ರೀನಿವಾಸ, ಅಶ್ವಿನಿ ಜಾಂಬಾಲಿಕರ್, ಎಂ ಎಸ್ ಗಿರಿಧರ್, ಮದನ್ ಮೋಹನ್ ಮೆಹ್ರಾ, ಮಯಾಂಕ್ ಗಾರ್ಗ್, ಕವಿ ಶಿಲಾ, ಕೃಷ್ಣ ಕುಮ್ಮರಿ, ಎಸ್‌ಪಿ ಕಾರಂತ, ಕಲ್ಪನಾ ಅರವಿಂದ್ ಮತ್ತು ಕೆವಿ ಶ್ರೀರಾಮ್ ಅವರು ಜೊತೆಯಾಗಿ ಈ ಸಂಶೋಧನಾ ವರದಿಯನ್ನು ಪ್ರಕಟಿಸಿದ್ದಾರೆ.
ಅಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ (Laboratory for Electro-Optics Systems) ಎಲ್‌ಇಒಎಸ್‌ನ ನಿರ್ದೇಶಕರಾದ ಶ್ರೀರಾಮ್ ಮಾತನಾಡಿದ ದಾಖಲಾದ 200 ಕಂಪನಗಳ ಸಂಕೇತಗಳಲ್ಲಿ ಸರಿಸುಮಾರು 200 ಸಂಕೇತಗಳು ರೋವರ್ ಪ್ರಗ್ಯಾನ್‌ನ ಚಲನೆಗಳಾಗಿವೆ. ಆದರೆ ಉಳಿದ 50 ಕಂಪನಗಳಿಗೆ ಯಾವುದೇ ವಿವರಣೆ ಇಲ್ಲ. ಈ ಕಂಪನಗಳಿಗೆ ಕಾರಣ ಏನು ಎಂಬುದನ್ನು ಅರಿತುಕೊಳ್ಳಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಹೇಳಿದ್ದಾರೆ.
Breaking: ಚಂದ್ರಯಾನ-3 ಆಯ್ತು, ಚಂದ್ರಯಾನ-4 ಲ್ಯಾಂಡಿಂಗ್ ಸೈಟ್ ಘೋಷಿಸಿದ ಇಸ್ರೋ!