ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಯ ನಂತರ, ಬಿಎಸ್‌ಎನ್‌ಎಲ್ ಹೊಸ ಬಳಕೆದಾರರನ್ನು ಆಕರ್ಷಿಸುತ್ತಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ 1.75 ಲಕ್ಷ ಹೊಸ ಬಳಕೆದಾರರು ಬಿಎಸ್‌ಎನ್‌ಎಲ್‌ಗೆ ಸೇರ್ಪಡೆಗೊಂಡಿದ್ದಾರೆ.
ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬೆನ್ನಲ್ಲೇ ಸರ್ಕಾರಿ ಒಡೆತನದ ಬಿಎಸ್‌ಎನ್‌ಎಲ್ ನತ್ತ ಬಳಕೆದಾರರು ಆಕರ್ಷಿಸಿತರಾಗುತ್ತಿದ್ದಾರೆ. ಖಾಸಗಿ ಕಂಪನಿಗಳ ಬೆಲೆ ಏರಿಕೆಯನ್ನು ಲಾಭವನ್ನಾಗಿ ಮಾಡಿಕೊಂಡ ಬಿಎಸ್‌ಎನ್‌ಎಲ್ ಪೋರ್ಟ್ ಮೂಲಕ ಆಗಮಿಸುವ ಹೊಸ ಬಳಕೆದಾರರಿಗೆ ಜೇಬಿಗೆ ಹಿತವಾದ ಪ್ಲಾನ್ ಘೋಷಣೆ ಮಾಡಿತ್ತು. ದೂರದಿಂದಲೇ ಬಿಎಸ್‌ಎನ್‌ಎಲ್ ನತ್ತ ನೋಡುತ್ತಿದ್ದ ಗ್ರಾಹಕರು ಸಿಮ್ ಪೋರ್ಟ್‌ಗೆ ನಿರ್ಧರಿಸುವಂತೆ ಮಾಡುವಲ್ಲಿ ಸರ್ಕಾರಿ ಟೆಲಿಕಾಂ ಕಂಪನಿ ಯಶಸ್ವಿಯಾಗಿದೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತಿವೆ. ಈ ದತ್ತಾಂಶ ಜನರು ಹಂತ ಹಂತವಾಗಿ ಬಿಎಸ್‌ಎನ್‌ಎಲ್ ನತ್ತ ತೆರಳುತ್ತಿರೋದನ್ನು ಗಮನಿಸಬಹುದಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಿಎಸ್‌ಎನ್‌ಎಲ್‌ಗೆ 1.75 ಲಕ್ಷ ಹೊಸ ಬಳಕೆದಾರರ ಆಗಮನವಾಗಿದೆ.
ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್‌ಗೆ ಬದಲಾಗುತ್ತಿದ್ದು ಮತ್ತು ಖಾಸಗಿ ಕಂಪನಿಗಳಿಗಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚು ದಿನ ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. ಶೀಘ್ರದಲ್ಲಿಯೇ 5G ಸೇವೆಯನ್ನು ಆರಂಭಿಸುವ ವಿಶ್ವಾಸವನ್ನು ಬಿಎಸ್‌ಎನ್ಎಲ್ ವ್ಯಕ್ತಪಡಿಸಿದೆ. ಇತ್ತ ಕೇಂದ್ರ ಸರ್ಕಾರವು ಸಹ ಬಿಎಸ್‌ಎನ್‌ಎಲ್ ನಲ್ಲಿ 6 ಸಾವಿರ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದೆ.
undefined
3G ಯಿಂದ 4Gಗೆ ಬದಲಾಗುತ್ತಿರುವ ಹಿನ್ನೆಲೆ ಸಿಮ್ ಅಪ್‌ಗ್ರೇಡೇಷನ್ ಮಾಡಿಕೊಳ್ಳುವಂತೆ ಬಿಎಸ್ಎನ್‌ಎಲ್ ತನ್ನ ಎಲ್ಲಾ ಗ್ರಾಹಕರಿಗೆ ಸಂದೇಶ ರವಾನಿಸುತ್ತಿದೆ. ಇದಕ್ಕಾಗಿಯೇ ಬಿಎಸ್ಎನ್ಎಲ್ ಸೇವಾ ಕೇಂದ್ರದಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಖಾಸಗಿ ಕಂಪನಿಗಳು 5Gಗೆ ಬದಲಾವಣೆ ಆಗುತ್ತಿರುವ ಕಾರಣ ಕಾಲ್ ಡ್ರಾಪ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮಾತನಾಡುತ್ತಿರುವಾಗಲೇ ಕಾಲ್ ಕಟ್ ಆಗುತ್ತಿದೆ ಎಂದು ಗ್ರಾಹಕರು ಕಂಪ್ಲೇಂಟ್ ಮಾಡುತ್ತಿದ್ದಾರೆ.
BSNL Plan ನೋಡಿ Portಗೆ ಮುಂದಾದ Jio-Airtel ಗ್ರಾಹಕರು: 45 ದಿನದವರೆಗೆ ಪ್ರತಿದಿನ ಸಿಗುತ್ತೆ 2GB ಡೇಟಾ!
ಖಾಸಗಿ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನೀಡುತ್ತಿರುವ ಪ್ಲಾನ್‌ಗಿಂತ ಬಿಎಸ್ಎನ್‌ಎಲ್ ಬೆಲೆಗಳು ಶೇ.25ರಿಂದ ಶೇ.40ರಷ್ಟು ಕಡಿಮೆಯಾಗಿವೆ. ಟ್ಯಾರಿಫ್ ಏರಿಕೆಯಾದ ಜೂನ್ ತಿಂಗಳಲ್ಲಿ ಬಿಎಸ್ಎನ್ಎಲ್‌ಗೆ 10,000ದಷ್ಟು ಹೊಸ ಬಳಕೆದಾರರ ಆಗಮನವಾಗಿತ್ತು. ಜುಲೈನಲ್ಲಿ 66,321 ಮತ್ತು ಆಗಸ್ಟ್ ನಲ್ಲಿ 1,00,487 ಬಳಕೆದಾರರು ಬಿಎಸ್ಎನ್‌ಎಲ್ ಕುಟುಂಬವನ್ನು ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಪೋರ್ಟ್‌ಬಿಲಿಟಿಯ ಎಂಎನ್‌ಪಿ ಮೂಲಕ ಜುಲೈನಲ್ಲಿ 25,755 ಮತ್ತು ಆಗಸ್ಟ್‌ನಲ್ಲಿ 44,886 ಬಳಕೆದಾರು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ ಬದಲಾಗಿದ್ದಾರೆ. ಬಿಎಸ್‌ಎನ್ಎಲ್ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ 1 ಲಕ್ಷಕ್ಕೂ ಅಧಿಕ 4G ನೆಟ್‌ವರ್ಕ್ ಅಳವಡಿಸಲಾಗಿದೆ. ಏಪ್ರಿಲ್‌ನಿಂದಲೇ 4G ಬಿಟಿಎಸ್ (Base transceiver station) ಅಳವಡಿಕೆ ಕಾರ್ಯ ಆರಂಭಗೊಂಡಿತ್ತು.
ಅಂಬಾನಿಗೆ ಸವಾಲೆಸಯಲು ಬರ್ತಿದೆ ಆಫ್ರಿಕನ್ ಕಂಪನಿ; ಮಹಾ ಕಾಳಗಕ್ಕೆ ಸಾಕ್ಷಿಯಾಗಲಿದೆ ಭಾರತದ ಮಾರುಕಟ್ಟೆ