ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 24GB ಉಚಿತ 4G ಡೇಟಾ ನೀಡುತ್ತಿದೆ. ಈ ಆಫರ್ ನಿಮ್ಮದಾಗಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.
ನವದೆಹಲಿ: ಬಿಎಸ್‌ಎನ್‌ಎಲ್ ದಿನದಿಂದ ದಿನಕ್ಕೆ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಖಾಸಗಿ ಕಂಪನಿಗಳ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ಲಾಭವನ್ನಾಗಿ ಮಾಡಿಕೊಳ್ಳುವಲ್ಲಿ ಬಿಎಸ್‌ಎನ್‌ಎಲ್ ಯಶಸ್ವಿಯಾಗಿದೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮೂರು ಖಾಸಗಿ ಕಂಪನಿಗಳು ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಬೆಲೆಗಳನ್ನು ಶೇ.15ರಷ್ಟು ಹೆಚ್ಚಿಸಿವೆ. ಜನಸಾಮಾನ್ಯರ ಜೇಬಿಗೆ ಹಿತವಾಗುವ ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್ ನೀಡುತ್ತಿರೋದರಿಂದ ಗ್ರಾಹಕರ ಸಂಖ್ಯೆ ಏರಿಕೆಯಾಗುತ್ತಿದೆ.
ಇದೀಗ ಹೊಸ ಆಫರ್ ಬಿಡುಗಡೆ ಮಾಡಿರುವ ಬಿಎಸ್‌ಎನ್‌ಎಲ್ 24GB ಡೇಟಾ ಉಚಿತವಾಗಿ ನೀಡುವ ಘೋಷಣೆ ಮಾಡಿದೆ. 24 GB ಉಚಿತ ಡೇಟಾ ಹೇಗೆ ಆಕ್ಟಿವೇಟ್ ಮಾಡಿಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.
undefined
ಬಿಎಸ್‌ಎನ್ಎಲ್ ಈ ತಿಂಗಳು 25ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಬಎಸ್‌ಎನ್ಎಲ್ ಸಂಸ್ಥೆ ಹುಟ್ಟಿಕೊಂಡು 24 ವರ್ಷ ಕಳೆದಿದ್ದು, ತನ್ನ ಗ್ರಾಹಕರಿಗೆ 24 GB ಉಚಿತ ಡೇಟಾವನ್ನು 4G ಸ್ಪೀಡ್‌ನಲ್ಲಿ ನೀಡುತ್ತಿ ದೆ. ಈ ಆಫರ್ ಕೆಲ ಅರ್ಹ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ.
24GB ಹೆಚ್ಚುವರಿ ಡೇಟಾ ಪಡೆಯಲು ಬಯಸುವ BSNL ಬಳಕೆದಾರರು/ಚಂದಾದಾರರು ರೂ 500ಕ್ಕಿಂತ ಹೆಚ್ಚು ಮೌಲ್ಯದ ವೋಚರ್ ಪಡೆದು ರೀಚಾರ್ಜ್ ಮಾಡಿಕೊಳ್ಳಬೇಕು. ಅಕ್ಟೋಬರ್ 1 ಮತ್ತು ಅಕ್ಟೋಬರ್ 24 ರ ನಡುವೆ ರೀಚಾರ್ಜ್ ಅನ್ನು ಪೂರ್ಣಗೊಳಿಸಿಕೊಂಡಿರಬೇಕು. ಈ ವೋಚರ್ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಅಂದ್ರೆ 24 GB ಲಭ್ಯವಾಗುತ್ತದೆ.
3 ತಿಂಗಳು Free ಇಂಟರ್‌ನೆಟ್, 18 OTT, 150 ಚಾನೆಲ್ ಆಕ್ಸೆಸ್; Jio, Airtelಗೆ ಟಕ್ಕರ್ ಕೊಡ್ತಿರೋದು ದೇಶಿ ಕಂಪನಿ
ಕಳೆದ 24 ವರ್ಷಗಳಿಂದ ಗ್ರಾಹಕರ ನಂಬಿಕೆ ಉಳಿಸಿಕೊಂಡು ನಾವೀನ್ಯತೆಯೊಂದಿಗೆ ಸೇವೆಯನ್ನು ಸಲ್ಲಿಸುತ್ತಿದೆ. 24 ವರ್ಷಗಳಿಂದ ಬಿಎಸ್‌ಎನ್‌ಎಲ್ ಭಾರತವನ್ನು ಒಂದಾಗಿಸಿದೆ. ನೀವು ಇಲ್ಲದಿದ್ದರೆ ಇದ್ಯಾವೂದೂ ಸಾಧ್ಯವಾಗುತ್ತಿರಲಿಲ್ಲ. ಈ ಮೈಲಿಗಲ್ಲನ್ನು ನಮ್ಮೊಂದಿಗೆ ಆಚರಿಸಲು ಬಿಎಸ್ಎನ್‌ಎಲ್ ಇಷ್ಟಪಡುತ್ತದೆ. ₹ 500/- ಕ್ಕಿಂತ ಹೆಚ್ಚಿನ ರೀಚಾರ್ಜ್ ವೋಚರ್‌ಗಳಲ್ಲಿ 24 GB ಹೆಚ್ಚುವರಿ ಡೇಟಾವನ್ನು ಆನಂದಿಸಿ ಎಂದು ಬಿಎಸ್‌ಎನ್‌ಎಲ್ ಎಕ್ಸ್ ಖಾತೆ ಮೂಲಕ ಅಧಿಕೃತ ಮಾಹಿತಿಯನ್ನು ನೀಡಿದೆ.
ಸೆಪ್ಟೆಂಬರ್ 15, 2000 ರಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಸೇವೆಯನ್ನು ಆರಂಭಿಸಿತ್ತು. ಅಕ್ಟೋಬರ್ 1, 2000 ರಿಂದ BSNL ದೇಶಾದ್ಯಂತ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತಿದೆ. ಖಾಸಗಿ ಕಂಪನಿಗಳು ತೀವ್ರ ಸ್ಪರ್ಧೆಯ ನಡುವೆಯೂ ಬಿಎಸ್ಎನ್ಎಲ್ ತನ್ನದೇ ಆದ ಗ್ರಾಹಕರನ್ನು ಉಳಿಸಿಕೊಂಡು ಸೇವೆಯನ್ನು ನೀಡುತ್ತಾ ಬಂದಿದೆ. BSNL ವಿಶ್ವ ದರ್ಜೆಯ ISO 9000 ಪ್ರಮಾಣೀಕೃತ ಟೆಲಿಕಾಂ ತರಬೇತಿ ಸಂಸ್ಥೆಯನ್ನು ಹೊಂದಿದೆ.
ಜಿಯೋ-ಏರ್‌ಟೆಲ್‌ಗಿಂತ ಒಂದು ಹೆಜ್ಜೆ ಮುಂದಿಟ್ಟ BSNL; ಕಡಿಮೆ ಬೆಲೆಗೆ 3300 GB ಡೇಟಾ
24 Years of Trust, Service, and Innovation! has been for 24 years, and we couldn’t have done it without you. Celebrate this milestone with us and enjoy 24 GB extra data on recharge vouchers over ₹500/-. pic.twitter.com/PpnHGe5G3S
— BSNL India (@BSNLCorporate)