Foxconn Tamil Nadu: ಚೆನ್ನೈನ ಐಫೋನ್ ಕಾರ್ಖಾನೆ ಮೌಲ್ಯಮಾಪನಕ್ಕೆ ಅಧಿಕಾರಿ ನೇಮಿಸಿದ ಆ್ಯಪಲ್‌!

By Suvarna NewsFirst Published Dec 29, 2021, 3:51 PM IST
Highlights

ಚೆನ್ನೈನ ಫಾಕ್ಸ್‌ಕಾನ್ ಶ್ರೀಪೆರಂಬದೂರ್‌ನಲ್ಲಿ ಆಹಾರ ಸುರಕ್ಷತೆ ಮತ್ತು ವಸತಿ ಪರಿಸ್ಥಿತಿಗಳ ಹೆಚ್ಚುವರಿ ವಿವರವಾದ ಮೌಲ್ಯಮಾಪನಗಳನ್ನು ಕೈಗೊಳ್ಳಲು ಸ್ವತಂತ್ರ ಲೆಕ್ಕಪರಿಶೋಧಕರನ್ನು ಕಳುಹಿಸಿದೆ ಎಂದು ಆ್ಯಪಲ್‌ ಹೇಳಿದೆ

Tech Desk: ಈ ತಿಂಗಳ ಆರಂಭದಲ್ಲಿ ತಮಿಳುನಾಡಿನ್ ಚೆನ್ನೈ ಸಮೀಪವಿರುವ ಶ್ರೀಪೆರಂಬದೂರ್ ಪಟ್ಟಣದಲ್ಲಿ ಐಫೋನ್‌ಗಳನ್ನು (iPhone) ತಯಾರಿಸುವ ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿ (Foxconn Plant) ಕೆಲಸ ಮಾಡುವ ಮತ್ತು ವಸತಿ ನಿಲಯವೊಂದರಲ್ಲಿ ವಾಸಿಸುವ 250 ಕ್ಕೂ ಹೆಚ್ಚು ಮಹಿಳೆಯರು ಕಲುಷಿತ  ಆಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬೆನ್ನಲ್ಲೇ  ಸಿಬ್ಬಂದಿಗಳು ಹಾಗೂ ಕುಟುಂಬದವರು ಪ್ರತಿಭಟನೆ ಕೂಡ ನಡೆಸಿದ್ದರು. ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿ ದೈತ್ಯ ಘಟಕದಲ್ಲಿ ಉತ್ಪಾದನೆಯನ್ನು ಡಿಸೆಂಬರ್ 18 ರಂದು ಸ್ಥಗಿತಗೊಳಿಸಲಾಗಿತ್ತು. ಈ ಘಟನೆ ದೇಶಾದ್ಯಂತ ಚರ್ಚೆಯಾಗಿತ್ತು ಹಾಗೂ ಐಫೊನ್‌ ತಯಾರಕ ಆ್ಯಪಲ್‌ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆ ಐಫೋನ್-ತಯಾರಕ ಆ್ಯಪಲ್‌ (Apple) ತಾನು ಫಾಕ್ಸ್‌ಕಾನ್‌ನ ಶ್ರೀಪೆರಂಬದೂರ್ ಸೌಲಭ್ಯವನ್ನು ಪರೀಕ್ಷೆಗೆ ಒಳಪಡಿಸಿದೆ ಮತ್ತು ಫಾಕ್ಸ್‌ಕಾನ್ ಶ್ರೀಪೆರಂಬದೂರ್‌ನಲ್ಲಿ ಆಹಾರ ಸುರಕ್ಷತೆ ಮತ್ತು ವಸತಿ ಪರಿಸ್ಥಿತಿಗಳ ಹೆಚ್ಚುವರಿ ವಿವರವಾದ ಮೌಲ್ಯಮಾಪನಗಳನ್ನು ಕೈಗೊಳ್ಳಲು ಸ್ವತಂತ್ರ ಲೆಕ್ಕಪರಿಶೋಧಕರನ್ನು (Independent Auditors) ಕಳುಹಿಸಿದೆ ಎಂದು ಹೇಳಿದೆ. ಇನ್ನು ಈ ಬಗ್ಗೆ ಟ್ವೀಟ್‌ (Tweet) ಮಾಡಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ಇದೊಂದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ. " ಚೆನ್ನೈನ ಐಫೋನ್ ಕಾರ್ಖಾನೆಯಲ್ಲಿನ ಸಮಸ್ಯೆಗೆ ಶೀಘ್ರದಲ್ಲಿ ಆ್ಯಪಲ್‌ ಸ್ಪಂದಿಸಿದೆ. ಫಾಕ್ಸ್‌ಕಾನ್ ಆದಷ್ಟೂ ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ಹೂಡಿಕೆ ಆರಂಭಿಸಿ ಉದ್ಯಮದ ಬೆಳವಣಿಗೆಗೆ ಸಹಾಯ ಮಾಡಲಿದೆ ಎಂದು ಭಾವಿಸುತ್ತೇನೆ" ಎಂದು ರಾಜೀವ್ ಟ್ವೀಟ್‌ ಮಾಡಿದ್ದಾರೆ.

 

Gud decisin by - responsive to issue of workng envrnmnt - i hope will quickly set this right n invest n grow

Apple places Foxconn’s Sriperumbudur facility on probation; says plant doesn't meet required standardshttps://t.co/E1GMryWJqT

— Rajeev Chandrasekhar 🇮🇳 (@Rajeev_GoI)

 

ಮಾನದಂಡಗಳು ಪಾಲಿಸುವಂತೆ ನೋಡಿಕೊಳ್ಳುತ್ತೇವೆ:  ಆ್ಯಪಲ್‌!

"ನಾವು ನಮ್ಮ ಪೂರೈಕೆದಾರರು ಉದ್ಯಮದಲ್ಲಿನ ಅತ್ಯುನ್ನತ ಮಾನದಂಡಗಳು ಪಾಲಿಸುವಂತೆ ನೋಡಿಕೊಳ್ಳುತ್ತೇವೆ ಮತ್ತು ಇದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಮೌಲ್ಯಮಾಪನಗಳನ್ನು ನಡೆಸುತ್ತೇವೆ. ಉದ್ಯೋಗಿಗಳಿಗೆ ನೀಡಲಾಗಿದ್ದ ಕೆಲವು ರಿಮೋಟ್ ಡಾರ್ಮಿಟರಿ ಸೌಕರ್ಯಗಳು (Dormitory Accommodations) ಮತ್ತು ಊಟದ ಕೋಣೆಗಳು ನಮ್ಮ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಆ್ಯಪಲ್‌ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ

"ಈ ಬೆನ್ನಲ್ಲೇ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಹಾಗೂ ಈ ಕ್ರಮಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲಾಗುವುದು .ಐಫೋನ್‌ ಕಾರ್ಖಾನೆ ಮತ್ತೆ ತೆರೆಯುವ ಮೊದಲು ಕಂಪನಿಯು ತನ್ನ ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸುತ್ತದೆ. ನಾವು ಪರಿಸ್ಥಿತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ." ಎಂದು ಆ್ಯಪಲ್‌ ವಕ್ತಾರರು ತಿಳಿಸಿದ್ದಾರೆ.

ಸ್ಥಳೀಯ ನಿರ್ವಹಣಾ ತಂಡ ಪುನಾರಚನೆ!

ಕಾರ್ಯಾಚರಣೆಯನ್ನು ಪುನರಾರಂಭಿಸುವ ಮೊದಲು ಅಗತ್ಯ ಸುಧಾರಣೆಗಳನ್ನು ಕೈಗೊಳ್ಳುವ ಸಮಯದಲ್ಲಿ ಎಲ್ಲಾ ಉದ್ಯೋಗಿಗಳಿಗೆ ವೇತನವನ್ನು ಮುಂದುವರಿಸಲಾಗುವುದು ಎಂದು ಫಾಕ್ಸ್‌ಕಾನ್ ಹೇಳಿದೆ. ಸಿಬ್ಬಂದಿಗಳು ಕೆಲಸಕ್ಕೆ ಮರಳಿದಾಗ ಅವರಿಗೆ ಬೆಂಬಲವನ್ನು ನೀಡುವುದನ್ನು ಮುಂದುವರಿಸುವುದಾಗಿ ಫಾಕ್ಸ್‌ಕಾನ್ ತಿಳಿಸಿದೆ.

"ನಾವು ನಮ್ಮ ಸ್ಥಳೀಯ ನಿರ್ವಹಣಾ ತಂಡ ಮತ್ತು ನಮ್ಮ ನಿರ್ವಹಣಾ ವ್ಯವಸ್ಥೆಗಳನ್ನು ಪುನರ್ರಚಿಸುತ್ತಿದ್ದೇವೆ. ಅಗತ್ಯವಿರುವ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುತ್ತೇವೆ. ಅಗತ್ಯ ಸುಧಾರಣೆಗಳನ್ನು ಕೈಗೊಂಡಾಗ ಎಲ್ಲಾ ಉದ್ಯೋಗಿಗಳಿಗೆ ವೇತನವನ್ನು ಮುಂದುವರಿಸಲಾಗುವುದು. ಸಿಬ್ಬಂದಿಗಳು ಕೆಲಸಕ್ಕೆ ಮರಳಿದಾಗ ಅವರಿಗೆ ಬೆಂಬಲವನ್ನು ನೀಡುವುದನ್ನು ಮುಂದುವರಿಸುವುತ್ತೇವೆ" ಎಂದು ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ:

1) Alphabet Privacy lawsuit: ಗೌಪ್ಯತಾ ನೀತಿ ಉಲ್ಲಂಘನೆ ಆರೋಪ: ಸಿಇಓ ಸುಂದರ್ ಪಿಚೈ ವಿಚಾರಣೆ!

2) Brain Computer: ಮೆದುಳಿನಲ್ಲಿ ಅಳವಡಿಸಿದ ಮೈಕ್ರೋಚಿಪ್ ಬಳಸಿ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಟ್ವೀಟ್!

3) 5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್‌!

click me!