Alphabet Privacy lawsuit: ಗೌಪ್ಯತಾ ನೀತಿ ಉಲ್ಲಂಘನೆ ಆರೋಪ: ಸಿಇಓ ಸುಂದರ್ ಪಿಚೈ ವಿಚಾರಣೆ!

By Suvarna News  |  First Published Dec 29, 2021, 12:24 PM IST

ಜೂನ್ 2020 ರಲ್ಲಿ ದಾಖಲಾದ ಮೊಕದ್ದಮೆಯಲ್ಲಿ, ಗೂಗಲ್ ಕ್ರೋಮ್ ಬ್ರೌಸರ್‌ಗಳನ್ನು "Private" ಮೋಡ್‌ನಲ್ಲಿ ಬಳಸುವಾಗ ಇಂಟರ್ನೆಟ್ ಬಳಕೆಯನ್ನು ಟ್ರ್ಯಾಕ್ ಮಾಡುವ ಮೂಲಕ ಗೂಗಲ್ ತಮ್ಮ ಗೌಪ್ಯತಾ ನೀತಿಯನ್ನು ಉಲ್ಲಂಘಿಸಿದೆ ಎಂದು ಬಳಕೆದಾರರು ಆರೋಪಿಸಿದ್ದಾರೆ.


Tech Desk: ಟೆಜ್‌ ದೈತ್ಯ ಗೂಗಲ್‌ (Google) ಪ್ರಪಂಚಾದ್ಯಂತ ಅತಿ ಹೆಚ್ಚು ಬಳಕೆಯಾಗುವ ಸರ್ಚ್‌ ಇಂಜೀನ್‌ಗಳಲ್ಲಿ ಒಂದು. ಗೂಗಲ್‌ ತನ್ನ ಬಳಕೆದಾರರ ಸುರಕ್ಷಿತ ಬ್ರೌಸಿಂಗ್‌ ಮತ್ತು ಗೌಪ್ಯತೆ ಕಾಪಾಡಲು (Security and Privacy) ಹಲವು ಕ್ರಮಗಳನ್ನು ಕೈ ಗೊಂಡಿದೆ. ಆದಾಗ್ಯೂ "Incognito" ಬ್ರೌಸಿಂಗ್ ಮೋಡ್‌ನಲ್ಲಿರುವಾಗ ಆಲ್ಫಾಬೆಟ್ ಇಂಕ್‌ನ (Alpahabet Inc) ಗೂಗಲ್ ತಮ್ಮ ಇಂಟರ್ನೆಟ್ ಬಳಕೆಯನ್ನು ಕಾನೂನುಬಾಹಿರವಾಗಿ ಟ್ರ್ಯಾಕ್ ಮಾಡಿದೆ ಎಂದು ಬಳಕೆದಾರರು ಆರೋಪಿಸಿದ್ದಾರೆ.  ಈ ಬೆನ್ನಲ್ಲೇ ಮೊಕದ್ದಮೆ ಹೂಡಿದ ವ್ಯಕ್ತಿಗಳು ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ (CEO Sundar Pichai) ಅವರನ್ನು ಎರಡು ಗಂಟೆಗಳವರೆಗೆ ಪ್ರಶ್ನಿಸಬಹುದು ಎಂದು ಕ್ಯಾಲಿಫೋರ್ನಿಯಾ ಫೆಡರಲ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಜೂನ್ 2020 ರಲ್ಲಿ ದಾಖಲಾದ ಮೊಕದ್ದಮೆಯಲ್ಲಿ, ಗೂಗಲ್ ಕ್ರೋಮ್ ಬ್ರೌಸರ್‌ಗಳನ್ನು "ಖಾಸಗಿ" ಮೋಡ್‌ನಲ್ಲಿ ಬಳಸುವಾಗ ಇಂಟರ್ನೆಟ್ ಬಳಕೆಯನ್ನು ಟ್ರ್ಯಾಕ್ ಮಾಡುವ ಮೂಲಕ ಗೂಗಲ್ ತಮ್ಮ ಗೌಪ್ಯತೆಯನ್ನು ಅಕ್ರಮವಾಗಿ ಆಕ್ರಮಣ ಮಾಡಿದೆ ಎಂದು ಬಳಕೆದಾರರು ಆರೋಪಿಸಿದ್ದಾರೆ.  ಕ್ರೋಮ್ ಬ್ರೌಸರ್ ಮತ್ತು ಗೌಪ್ಯತೆ ಕಾಳಜಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪಿಚೈ ಅವರಿಗೆ ವೈಯುಕ್ತಿಕವಾಗಿ ತಿಳಿದಿದೆ  ಎಂದು ಆರೋಪಿಸಲಾಗಿದೆ ಎಂದು ಸೋಮವಾರದ ನ್ಯಾಯಾಲಯದ ಫೈಲಿಂಗ್ ತಿಳಿದುಬಂದಿದೆ.

Tap to resize

Latest Videos

undefined

ಸುಂದರ್ ಪಿಚೈಗೆ  ಎರಡು ಗಂಟೆಗಳವರೆಗೆ ಪ್ರಶ್ನೆ!

ಈ ಬೆನ್ನಲ್ಲೇ ಪ್ರತಿಕ್ರಿಯಿಸಿದ ಗೂಗಲ್ ವಕ್ತಾರ ಜೋಸ್ ಕ್ಯಾಸ್ಟನೆಡಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.  "ಈ ಪ್ರಕರಣದಲ್ಲಿ ನಾವು ಆರೋಪಗಳನ್ನು ಬಲವಾಗಿ ವಿರೋಧಿಸುತ್ತಿವೆ, ಜತೆಗೆ ನಾವು ಈಗಾಗಲೇ ಆರೋಪಿಸುತ್ತಿರುವವರ ಲೆಕ್ಕವಿಲ್ಲದಷ್ಟು ವಿನಂತಿಗಳಿಗೆ ಸಹಕರಿಸಿದ್ದೇವೆ. ಈ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ" ಎಂದು ಕ್ಯಾಸ್ಟನೆಡಾ ಹೇಳಿದ್ದಾರೆ. 

ಕಂಪನಿಯ ಇನ್‌ಕಾಗ್ನಿಟೋ ಬ್ರೌಸಿಂಗ್ ಮೋಡ್ ಅನ್ನು "ಖಾಸಗಿ" ಎಂದು ಹೇಳುವುದು ಸರಿಯಲ್ಲ ಎಂದು 2019 ರಲ್ಲಿ ಪಿಚೈ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಸೋಮವಾರದ ತನ್ನ ಆದೇಶದಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ US ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಸುಸಾನ್ ವ್ಯಾನ್ ಕೆಯುಲೆನ್, "ಕೆಲವು ದಾಖಲೆಗಳ ಪ್ರಕಾರ ಸಂಬಂಧಿತ ಮಾಹಿತಿಯನ್ನು ಪಿಚೈ ಅವರಿಗೆ ತಿಳಿಸಲಾಗಿದೆ " ಎಂದು ಹೇಳಿದರು ಮತ್ತು ಆದ್ದರಿಂದ ಸಿಇಓ ಪಿಚೈ ಅವರನ್ನು ಪ್ರಶ್ನಿಸುವ ಆರೋಪ ಮಾಡಿದ ವಕೀಲರ ವಿನಂತಿಯನ್ನು ಬೆಂಬಲಿಸಿದರು. ಮೊಕದ್ದಮೆ ಹೂಡಿದ ವ್ಯಕ್ತಿಗಳು ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ಅವರನ್ನು ಎರಡು ಗಂಟೆಗಳವರೆಗೆ ಗೌಪ್ಯತಾ ನೀತಿ ಉಲ್ಲಂಘಿಸಿದ ಬಗ್ಗೆ ಪ್ರಶ್ನಿಸಬಹುದಾಗಿದೆ.

ಇನ್‌ಕಾಗ್ನಿಟೋ ಮೋಡ್ ಬಳಕೆದಾರರ ಸಾಧನದಲ್ಲಿ ಡೇಟಾವನ್ನು ಉಳಿಸುವುದನ್ನು ಮಾತ್ರ ನಿಲ್ಲಿಸುತ್ತದೆ‌ ಎಂದು ಹೇಳುವ ಮೂಲಕ ಮೊಕದ್ದಮೆಯ ವಿರುದ್ಧ ಹೋರಾಡುತ್ತಿದೆ ಎಂದು ಗೂಗಲ್ ಈ ಹಿಂದೆ ಹೇಳಿದೆ.
ಆನ್‌ಲೈನ್ ಕಣ್ಗಾವಲು ಕುರಿತು ಹೆಚ್ಚುತ್ತಿರುವ ಸಾರ್ವಜನಿಕ ಕಳವಳಗಳ ನಡುವೆ ಬಳಕೆದಾರರು  ಇತ್ತೀಚಿನ ವರ್ಷಗಳಲ್ಲಿ ನಿಯಂತ್ರಕ ಮತ್ತು ಕಾನೂನು ಪರಿಶೀಲನೆಯ ಕ್ರಮಗಳು ಹೆಚ್ಚಾಗಿ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ:

1) 3D Printed Burgers: ಇಸ್ರೇಲ್‌ನ ಕಸ್ಟಮೈಸಡ್ ಪ್ರಿಂಟೆಡ್‌ ಬರ್ಗರ್‌ 6 ನಿಮಿಷದಲ್ಲಿ ಸವಿಯಲು ಸಿದ್ಧ!

2) Google Moves Karnataka HC: CCI ತನಿಖೆಯ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಗೂಗಲ್!

3) Google Rewards Rony Das: ಆ್ಯಂಡ್ರಾಯ್ಡ್‌ ದೋಷ ವರದಿ ಮಾಡಿದ ಭಾರತೀಯನಿಗೆ ₹3.5 ಲಕ್ಷ ಬಹುಮಾನ!

click me!