ಪಾರ್ಶ್ವವಾಯು ಪೀಡಿತ ವ್ಯಕ್ತಿ ಓ' ಕೀಫ್ ಕೇವಲ ಆಲೋಚನೆಯನ್ನು ಬಳಸಿಕೊಂಡು ಜಗತ್ತಿಗೆ ಸಂದೇಶವನ್ನು ಟ್ವಿಟ್ ಮಾಡಿದ ಮೊದಲ ವ್ಯಕ್ತಿಯಾಗಿದ್ದಾರೆ.
Tech Desk: ಪಾರ್ಶ್ವವಾಯು ಪೀಡಿತ (Paralysed) ವ್ಯಕ್ತಿಯೊಬ್ಬರು ನೇರ ಆಲೋಚನೆಯನ್ನು ಬಳಸಿಕೊಂಡು ಜಗತ್ತಿಗೆ ಸಂದೇಶವನ್ನು ಟ್ವಿಟ್ ಮಾಡಿದ ಮೊದಲ ವ್ಯಕ್ತಿಯಾಗಿದ್ದಾರೆ. ಫಿಲಿಪ್ ಓ' ಕೀಫ್ ಎಂಬ ವ್ಯಕ್ತಿ ಮೋಟಾರು ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದು ಮೈಕ್ರೋಚಿಪ್ ಇಂಪ್ಲಾಂಟ್ ಅನ್ನು ಬಳಸಿಕೊಂಡು ತನ್ನ ಮೆದುಳಿನ ಸಂಕೇತಗಳನ್ನು ನೀಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಮಿಸ್ಟರ್ ಓಕೀಫ್ ಅವರು ಮೆದುಳಿನ ಇಂಪ್ಲಾಂಟ್‌ಅನ್ನು ಬಳಸಿಕೊಂಡು "hello, world! Short tweet. Monumental progress." ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು "first direct thought twee" ಎಂದು ವಿವರಿಸಲಾಗಿದೆ.
ಕಂಪ್ಯೂಟರ್ ಕಂಪನಿ ಸಿಂಕ್ರಾನ್‌ನ, ಸೈಂಟೋಡ್ ಮೆದುಳಿನ (Stentrode Brain) ಕಂಪ್ಯೂಟರ್ ಇಂಟರ್ಫೇಸ್‌ನೊಂದಿಗೆ ಅಳವಡಿಸಲಾದ ರೋಗಿಗಳಲ್ಲಿ ಓಕೀಫ್ ಕೂಡ ಒಬ್ಬರಾಗಿದ್ದಾರೆ. ಈ ಮೂಲಕ ಅವರ ದೇಹದಲ್ಲಿನ ಮೈಕ್ರೋಚಿಪ್ ಅವರ ಮೆದುಳಿನ ಸಂಕೇತಗಳನ್ನು ಕಂಪ್ಯೂಟರ್ ವಿಶ್ಲೇಷಿಸುತ್ತದೆ ಮತ್ತು ಆಜ್ಞೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಚಿಂತನೆಯ ಮೂಲಕ ನೇರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಜಗತ್ತಿಗೆ ಯಶಸ್ವಿಯಾಗಿ ಸಂದೇಶ ನೀಡಿದ ಮೊದಲ ವ್ಯಕ್ತಿ ಓ ಕೀಫ್ ಎಂದು ಸಿಂಕ್ರಾನ್ ಹೇಳಿದೆ.
undefined
hello, world! Short tweet. Monumental progress.
— Thomas Oxley (@tomoxl)
ಈ ವ್ಯವಸ್ಥೆ ಆಶ್ಚರ್ಯಕರವಾಗಿದೆ: ಓಕೀಫ್
"ಈ ತಂತ್ರಜ್ಞಾನದ ಬಗ್ಗೆ ನಾನು ಮೊದಲು ಕೇಳಿದಾಗ, ಅದು ನನಗೆ ಎಷ್ಟು ಸ್ವಾತಂತ್ರವನ್ನು ನೀಡುತ್ತದೆ ಎಂದು ನನಗೆ ತಿಳಿದಿತ್ತು. ಈ ವ್ಯವಸ್ಥೆಯು ಆಶ್ಚರ್ಯಕರವಾಗಿದೆ, ಇದು ಬೈಕು ಸವಾರಿ ಮಾಡಲು ಕಲಿಯುವಂತಿದೆ - ಇದು ಸಮವಯನ್ನು ತೆಗೆದುಕೊಳ್ಳುತ್ತದೆ, ಆದರೆ ಒಮ್ಮೆ ನೀವು ಕಲಿತರೆ ಅದು ಸ್ವಾಭಾವಿಕವಾಗುತ್ತದೆ, ” ಎಂದು ಓಕೀಫ್ ಹೇಳಿದ್ದಾರೆ. "ಈಗ, ನಾನು ಕಂಪ್ಯೂಟರ್‌ನಲ್ಲಿ ಎಲ್ಲಿ ಕ್ಲಿಕ್ ಮಾಡಬೇಕೆಂದು ಯೋಚಿಸುತ್ತೇನೆ ಮತ್ತು ನಾನು ಇಮೇಲ್ ಮಾಡಬಹುದು, ಬ್ಯಾಂಕಿಂಗ್ ಮಾಡಬಹುದು, ಶಾಪಿಂಗ್ ಮಾಡಬಹುದು ಮತ್ತು ಈಗ ಟ್ವಿಟರ್ ಮೂಲಕ ಮೂಲಕ ಜಗತ್ತಿಗೆ ಸಂದೇಶ ಕಳುಹಿಸಬಹುದು.” ಎಂದು ಅವರು ಹೇಳಿದ್ದಾರೆ.
ಸಿಂಕ್ರಾನ್ ಸಿಇಒ ಥಾಮಸ್ ಆಕ್ಟ್ ( Thomas Oxley) ಅವರ ಟ್ವಿಟರ್ ಹ್ಯಾಂಡಲ್ ಅನ್ನು ಒಕೀಫ್ ಬಳಿಸಿದರು. ಸ್ವಾತಂತ್ರ್ಯವನ್ನು ಮರಳಿ ಪಡೆದ ಅನುಭವವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುವುದು ಮತ್ತು ಭವಿಷ್ಯಕ್ಕಾಗಿ ಸ್ಫೂರ್ತಿ ನೀಡುವುದು ಅವರ ಗುರಿಯಾಗಿತ್ತು. ಆಲೋಚನೆಗಳ ಮೂಲಕ ಜನರು ಟ್ವಿಟ್ ಮಾಡಲು ನಾನು ದಾರಿ ಮಾಡಿಕೊಡುತ್ತೇನೆ ಎಂಬುದು ನನ್ನ ಆಶಯ” ಎಂದು ಥಾಮಸ್ ಹೇಳಿದ್ದಾರೆ.
2020 ರಲ್ಲಿ ಈ ಚಿಪ್ ಪಡೆದಿದ್ದ ಓಕೀಫ್!
ಮೋಟಾರು ನ್ಯೂರಾನ್ ಕಾಯಿಲೆಯಿಂದ (motor neurone disease) ಉಂಟಾದ ಪಾರ್ಶ್ವವಾಯು ನಂತರ ಅವರಿಗೆ ಕೆಲಸಕ್ಕೆ ಸಂಬಂಧಿಸಿದ ಅಥವಾ ಇತರ ಸ್ವತಂತ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಒ'ಕೀಫ್ ಅವರು ಏಪ್ರಿಲ್ 2020 ರಲ್ಲಿ ಈ ಚಿಪ್ ಅನ್ನು ಪಡೆದಿದ್ದರು. ಅಂದಿನಿಂದ ಅವರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ ಮತ್ತು ವ್ಯಾಪಾರ ಸಹೋದ್ಯೋಗಿಗಳ ಜತೆಗೆ ಇಮೇಲ್ ವಿನಿಮಯವನ್ನು ಮುಂದುವರೆಸುತ್ತಿದ್ದಾರೆ. ಅಲ್ಲದೇ ಅವರ ಸಲಹಾ ಮತ್ತು ಇತರ ವ್ಯಾಪಾರ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
"ಈ ಫನ್ ಟ್ವೀಟ್‌ಗಳು ವಾಸ್ತವವಾಗಿ ಮೆದುಳಿನ ಕಂಪ್ಯೂಟರ್ ಇಂಟರ್ ಫೇಸ್‌ಗಳ ಕ್ಷೇತ್ರದಲ್ಲಿ ಪುಮುಖ ಬೆಳವಣಿಗೆಯಾಗಿದೆ. BCT ಗಳು (ಮೆದುಳಿನ ಕಂಪ್ಯೂಟರ್ ಇಂಟರ್‌ಫೇಸ್‌ಗಳು) ಪಾರ್ಶ್ವವಾಯುದಿಂದಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿರುವ ಫಿಲ್‌ನಂತಹ ಜನರಿಗೆ ನೀಡುವ ಸಂಪರ್ಕ, ಭರವಸೆ ಮತ್ತು ಸ್ವಾತಂತ್ರ್ಯವನ್ನು ಎತ್ತಿ ತೋರಿಸುತ್ತವೆ, "ಎಂದು ಸಿಂಕ್ರಾನ್ ಸಿಇಒ ಥಾಮಸ್ ಆಕ್ಟ್ ಹೇಳಿದ್ದಾರೆ. ಬ್ರೈನ್-ಕಂಪ್ಯೂಟರ್ ಇಂಟರ್‌ಫೇಸ್‌ಗಳು (BCI) ಮೆದುಳಿನ ಸಂಕೇತಗಳನ್ನು ಪಡೆದುಕೊಳ್ಳುತ್ತವೆ, ಅವುಗಳನ್ನು ವಿಶ್ಲೇಷಿಸುತ್ತವೆ ಮತ್ತು ಅಪೇಕ್ಷಿತ ಕ್ರಿಯೆಗಳನ್ನು ನಡೆಸುವ ಔಟ್‌ಪುಟ್ ಸಾಧನಗಳಿಗೆ ಪ್ರಸಾರ ಮಾಡಲಾದ ಆದೇಶಗಳಾಗಿ ಬದಲಾಯಿಸುತ್ತದೆ ಎಂದು NCBI ವರದಿ ಹೇಳುತ್ತದೆ.
ಇದನ್ನೂ ಓದಿ:
1) 3D Printed Burgers: ಇಸ್ರೇಲ್‌ನ ಕಸ್ಟಮೈಸಡ್ ಪ್ರಿಂಟೆಡ್ ಬರ್ಗರ್ 6 ನಿಮಿಷದಲ್ಲಿ ಸವಿಯಲು ಸಿದ್ಧ!
2) Alphabet Privacy lawsuit: ಗೌಪ್ಯತಾ ನೀತಿ ಉಲ್ಲಂಘನೆ ಆರೋಪ: ಸಿಇಓ ಸುಂದರ್ ಪಿಚೈ ವಿಚಾರಣೆ!
3) 5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್!