
ಕ್ಯಾಲಿಫೋರ್ನಿಯಾ(ಜ.07): ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಆಪಲ್ ಸಂಸ್ಥೆಯ ಐಫೋನ್`ಗಳ ಮಾರಾಟ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ ಸಿಇಓ ಟಿಮ್ ಕುಕ್ ಸಂಬಳದಲ್ಲಿ ಶೇ.15ರಷ್ಟು ಕಡಿತಗೊಳಿಸಿದೆ. ಈಗಲೂ ಕುಕ್ 8.7 ಮಿಲಿಯನ್ ಡಾಲರ್ ಸಂಬಳ ಪಡೆಯುತ್ತಿದ್ದು, ಈ ಹಿಂದೆ 10.3 ಮಿಲಿಯನ್ ಡಾಲರ್ ಪಡೆಯುತ್ತಿದ್ದರು.
ಐಫೋನ್ ಮಾರಾಟದ ಆದಾಯದಲ್ಲಿ ಕುಸಿತ ಕಂಡಿರುವುದರಿಂದ ಆಪಲ್ ಸಿಇಓ ಸೇರಿ ಇತರ ಉನ್ನತ ಹುದ್ದೆಯಲ್ಲಿರುವವರ ಸಂಬಳವನ್ನ ಕಡಿತಗೊಳಿಸಲಾಗಿದೆ. ಆಪಲ್`ನ ಆದಾಯ ಶೇ.8ರಷ್ಟು ಕುಸಿದಿದ್ದು, 216 ಬಿಲಿಯನ್ ಡಾಲರ್`ಗೆ ಕುಸಿದಿದೆ. ಆಪರೇಟಿಂಗ್ ಪ್ರಾಫಿಟ್ ಶೇ.16ರಷ್ಟು ಕುಸಿದಿದೆ. 2001ರಿಂದೀಚೆಗೆ ಅಂದರೆ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಪಲ್ ಕಂಪನಿ ಆದಾಯದಲ್ಲಿ ಕುಸಿತ ಕಂಡಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.