ನಿಯಮ ಉಲ್ಲಂಘನೆ: ಫೇಸ್ಬುಕ್ ರಿಸರ್ಚ್ ಆ್ಯಪ್‌ಗೆ ನಿಷೇಧ

By Web DeskFirst Published Feb 1, 2019, 8:32 PM IST
Highlights

ಡಿಜಿಟಲ್ ಯುಗದಲ್ಲಿ ವ್ಯಕ್ತಿಯ ಖಾಸಗಿ ಮಾಹಿತಿಗೆ ಭಾರೀ ಬೇಡಿಕೆಯಿದೆ. ಆದುದರಿಂದ ಬಳಕೆದಾರರ ಮಾಹಿತಿಯನ್ನು ಕಲೆ ಹಾಕಲು ಕಂಪನಿಗಳು ಬೇರೆ ಬೇರೆ ವಿಧಾನಗಳನ್ನು ನೆಚ್ಚಿಕೊಂಡಿವೆ. ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ಫೇಸ್ಬುಕ್ ರಿಸರ್ಚ್ ಆ್ಯಪನ್ನು ಬ್ಲಾಕ್ ಮಾಡಲಾಗಿದೆ. 
 

ಟೆಕ್ ಕ್ರಂಚ್ ಎಂಬ ಸಂಸ್ಥೆ ಫೇಸ್ಬುಕ್‌ನಿಂದ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂದು ವರದಿ ಮಾಡಿದ ಬೆನ್ನಲ್ಲೇ ಆ್ಯಪಲ್ ಫೇಸ್ಬುಕ್‌ನ ಸಂಶೋಧನಾ ಆ್ಯಪ್‌ವೊಂದನ್ನು ನಿಷೇಧಿಸಿದೆ.

ತಮ್ಮ ಪೋನ್ ಮೂಲಕ ವಿನಿಮಯವಾಗುವ ಎಲ್ಲಾ ಮಾಹಿತಿ ನೋಡಲು ಫೇಸ್ಬುಕ್‌ನ ರಿಸರ್ಚ್ VPN ಆ್ಯಪ್, ಆ್ಯಪಲ್ ಬಳಕೆದಾರರ ಬಳಿ ಅನುಮತಿ ಪಡೆದುಕೊಂಡಿದ್ದು, ಅದರ ಬದಲಾಗಿ ಬಳಕೆದಾರರಿಗೆ $20ನ್ನು ನೀಡುವುದಾಗಿ ಹೇಳಿತ್ತು. ಈ ಬಗ್ಗೆ ಟೆಕ್ ಕ್ರಂಚ್ ಸವಿವರವಾದ ಸಂಶೋಧನಾ ವರದಿಯನ್ನು ಪ್ರಕಟಿಸಿತ್ತು.

ಇದನ್ನೂ ಓದಿ: ಎಚ್ಚರ... ನಿಮ್ಮ ವಾಟ್ಸಪ್ ಚಟುವಟಿಕೆ ಬಗ್ಗೆ ಲೆಕ್ಕ ಇಡಲಾಗುತ್ತಿದೆ!

ಅದರ ಬೆನ್ನಲ್ಲೇ ಆ್ಯಪಲ್ ಫೇಸ್ಬುಕ್‌ನ ರಿಸರ್ಚ್ ಆ್ಯಪನ್ನು ಕಿತ್ತುಹಾಕಲು ಮುಂದಾಗಿದೆ. ಆದರೆ ಅದಕ್ಕಿಂದ ಮುನ್ನವೇ, ಫೇಸ್ಬುಕ್ ತನ್ನ ಆ್ಯಪನ್ನು ಆ್ಯಪ್ ಸ್ಟೋರ್‌ನಿಂದ ತೆಗೆದುಹಾಕಿದೆ. 

ಫೇಸ್ಬುಕ್‌ನ ರಿಸರ್ಚ್ ಆ್ಯಪ್ 2016ರಿಂದ iOS ಮತ್ತು ಆ್ಯಂಡ್ರಾಯಿಡ್ ಫೋನ್‌ಗಳಲ್ಲಿ ಪ್ರಾಜೆಕ್ಟ್ ಅಟ್ಲಾಸ್ ಹೆಸರಿನಲ್ಲಿ ಸದ್ದಿಲ್ಲದೇ ಕಾರ್ಯಾಚರಿಸುತ್ತಿದ್ದು, 35 ವರ್ಷದ ಯುವಜನರಿಗೆ ಟಾರ್ಗೆಟ್ ಮಾಡಲಾಗಿತ್ತು.  ಆ ಆ್ಯಪ್ ಮೂಲಕ ಅವರ ಅಮೆಜಾನ್ ಆರ್ಡರ್ ಹಿಸ್ಟರಿ ಸೇರಿದಂತೆ, ಬ್ರೌಸಿಂಗ್ ಪರಿಪಾಠ, ಇತರ ಆ್ಯಪ್‌ ವಿವರ, ಅವುಗಳ ಬಳಕೆ, ಮುಂತಾದ ಮಾಹಿತಿಗಳನ್ನು ಕಲೆಹಾಕಲಾಗುತಿತ್ತು ಎಂದು ಟೆಕ್ ಕ್ರಂಚ್ ವರದಿ ಮಾಡಿದೆ. 

ಇದನ್ನೂ ಓದಿ: ಫೇಸ್‌ಬುಕ್‌ ಬಳಕೆದಾರರೇ ಗಮನಿಸಿ : ನಿಮ್ಮ ಅಕೌಂಟ್ ರದ್ದಾಗಬಹುದು

ಆ್ಯಪಲ್ ಹೊಸ ನಿಯಮಗಳ ಪ್ರಕಾರ, ಕಳೆದ ಆಗಸ್ಟ್ನಲ್ಲೂ ಒನಾವೋ ಪ್ರೊಟೆಕ್ಟ್ ಆ್ಯಪ್ ಎಂಬ ಇಂತಹ ಮತ್ತೊಂದು ಆ್ಯಪನ್ನು ಫೇಸ್ಬುಕ್ ತೆಗೆದುಹಾಕಿತ್ತು.  ಆದರೆ,  ರಿಸರ್ಚ್ ಆ್ಯಪನ್ನು ಫೇಸ್ಬುಕ್ ತೆಗೆದು ಹಾಕಿರಲಿಲ್ಲ. 
 

click me!