ಚಂದಾದಾರರನ್ನು ಖುಷಿಯಾಗಿಟ್ಟುಕೊಳ್ಳುವುದೇ ಟೆಲಿಕಾಂ ಕಂಪನಿಗಳ ಸಕ್ಸಸ್ ಮಂತ್ರ. ಪೋರ್ಟೆಬಿಲಿಟಿ ಆಯ್ಕೆ ಬಂದ ಬಳಿಕವಂತೂ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಟೆಲಿಕಾಂ ಕಂಪನಿಗಳು ಒಳ್ಳೊಳ್ಳೆ ಪ್ಲಾನ್ ಹಾಗೂ ಆಫರ್‌ಗಳನ್ನು ನೀಡುತ್ತಿರುವುದು ಸಾಮಾನ್ಯ. ಈಗ ವೊಡಾಫೋನ್ ತನ್ನ ಬಳಕೆದಾರರಿಗೆ ಹೊಸ ಪ್ಲಾನ್‌ವೊಂದನ್ನು ಪರಿಚಯಿಸಿದೆ.
ಭಾರೀ ಪೈಪೋಟಿ ಇರುವ ಟೆಲಿಕಾಂ ಮಾರುಕಟ್ಟೆಯಲ್ಲಿ, ದರಸಮರದ ವಿಚಾರದಲ್ಲಿ ತಾನು ಯಾರಿಗಿಂತಲೂ ಕಮ್ಮಿಯಿಲ್ಲವೆಂದು ಜನಪ್ರಿಯ ಟೆಲಿಕಾಂ ಕಂಪನಿ ವೊಡಾಫೋನ್ ಸಾಬೀತುಪಡಿಸಿದೆ.
ಐಡಿಯಾ ಸೆಲ್ಯುಲರ್ ಕಂಪನಿ ಜೊತೆ ವಿಲೀನವಾದ ಬಳಿಕ, ವೊಡಾಫೋನ್ ಹಲವಾರು ಹೊಸ ಪ್ಲಾನ್‌ಗಳನ್ನು ಪ್ರಕಟಿಸಿದೆ. ಈಗ ಮತ್ತೊಂದು ಹೊಸ ಪ್ಲಾನ್ ಪ್ರಕಟಿಸಿರುವ ವೊಡಾಪೋನ್, ₹1699ನಲ್ಲಿ ವಾರ್ಷಿಕ ವ್ಯಾಲಿಡಿಟಿಯೊಂದಿಗೆ ಕರೆ ಹಾಗೂ ಡೇಟಾ ಸೌಲಭ್ಯಗಳನ್ನು ನೀಡುತ್ತಿದೆ.
ಮೇಲೆ ತಿಳಿಸಿದಂತೆ, ಇದೊಂದು ವಾರ್ಷಿಕ ಪ್ಲಾನ್ ಆಗಿದ್ದು, ₹1699 ಪಾವತಿಸುವ ಮೂಲಕ ಅನ್ಲಿಮಿಟೆಡ್ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಮಾಡಬಹುದಾಗಿದೆ. ಜೊತೆಗೆ ಪ್ರತಿ ದಿನ 100 ಎಸ್ಸೆಮ್ಮೆಸ್‌ಗಳನ್ನು ಕಳುಹಿಸುವ ಅವಕಾಶವಿದೆ.
ಇದನ್ನೂ ಓದಿ: ಎಚ್ಚರ... ನಿಮ್ಮ ವಾಟ್ಸಪ್ ಚಟುವಟಿಕೆ ಬಗ್ಗೆ ಲೆಕ್ಕ ಇಡಲಾಗುತ್ತಿದೆ!
ಡೇಟಾ ಬಗ್ಗೆ ಹೇಳೋದಾದರೆ, ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿದಿನ 1GB 3G/4G ಡೇಟಾ ಸಿಗುವುದು. ಈ ಮಿತಿ ಮುಗಿದ ಬಳಿಕ ಪ್ರತಿ MBಗೆ 50 ಪೈಸೆ ದರದಲ್ಲಿ ಹೈಸ್ಪೀಡ್ ಇಂಟರ್ನೆಟ್ ಬಳಸಬಹುದು.
ಈ ಪ್ಲಾನ್ ಜೊತೆಗೆ ಬಳಕೆದಾರರಿಗೆ ವೊಡಾಫೋನ್ ಪ್ಲೇಗೆ ಆ್ಯಕ್ಸೆಸ್ ಕೂಡಾ ಸಿಗುವದರಿಂದ ಲೈವ್ ಟಿವಿ ಅಥವಾ ಮೂವಿಗಳನ್ನು ವೀಕ್ಷಿಸಿಬಹುದು.
ವೊಡಾಫೋನ್ ಇತ್ತೀಚೆಗೆ 3 ಟಾಪ್-ಅಪ್ ರಿಚಾರ್ಜ್ ಪ್ಲಾನ್‌ಗಳನ್ನು ಕೂಡಾ ಪರಿಚಯಿಸಿತ್ತು. ₹50ಗೆ ₹39.7ರ ಟಾಕ್ ಟೈಮ್, ಹಾಗೂ ₹100 ಮತ್ತು ₹500 ಟಾಪ್-ಅಪ್ ನಲ್ಲಿ ಫುಲ್ ಟಾಕ್ ಟೈಮ್ ವೊಡಾಫೋನ್ ನೀಡುತ್ತಿದೆ.
ಇದನ್ನೂ ಓದಿ: ಫೇಸ್‌ಬುಕ್ ಬಳಕೆದಾರರೇ ಗಮನಿಸಿ : ನಿಮ್ಮ ಅಕೌಂಟ್ ರದ್ದಾಗಬಹುದು
ಅದೇ ರೀತಿ ₹24 ರೀಚಾರ್ಜ್ ಮಾಡುವ ಮೂಲಕ ಪ್ರಿಪೇಯ್ಡ್ ವ್ಯಾಲಿಡಿಟಿಯನ್ನು 28 ದಿನಗಳ ಮಟ್ಟಿಗೆ, ₹154 ರೀಚಾರ್ಜ್ ಮಾಡುವ ಮೂಲಕ ವ್ಯಾಲಿಡಿಟಿಯನ್ನು 6 ತಿಂಗಳುಗಳ ಮಟ್ಟಿಗೆ ವಿಸ್ತರಿಸುವ ಸೌಲಭ್ಯವನ್ನು ನೀಡಿದೆ.