
Multiple Enabled Profiles: ಒಂದೇ ಫೋನ್‌ನಲ್ಲಿ ಎರಡು ಸಿಮ್ ಕಾರ್ಡ್‌ಗಳನ್ನು ಬಳಸುವವರಿಗೆ ಗೇಮ್ ಚೇಂಜರ್ ಆಗಬಹುದಾದ ಆಂಡ್ರಾಯ್ಡ್ 13 (Android 13) ಹೊಸ ವೈಶಿಷ್ಟ್ಯವೊಂದರಲ್ಲಿ ಗೂಗಲ್ (Google) ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ವೈಶಿಷ್ಟ್ಯವು ಆಂಡ್ರಾಯ್ಡ್ 13ನೊಂದಿಗೆ ಬಿಡುಗಡೆಯಾಗಲಿದ್ದರೂ , ಇದು ಆಂಡ್ರಾಯ್ಡ್‌ಗೆ ಮಾತ್ರ ಸೀಮಿತವಾಗಿರದೇ, ಐಓಎಸ್ ಮತ್ತು ವಿಂಡೋಸ್‌ನಲ್ಲಿ ಸಹ ಕಾರ್ಯಗತಗೊಳಿಸಬಹುದು.
ಎಸ್ಪರ್ ವರದಿಯ ಪ್ರಕಾರ, ಮಲ್ಟಿಪಲ್ ಎನೇಬಲ್ಡ್ ಪ್ರೊಫೈಲ್‌ಗಳು (MEP) ಎಂಬ ವೈಶಿಷ್ಟ್ಯದ ಮೂಲಕ, ಸರ್ಚ್ ದೈತ್ಯ ಗೂಗಲ್ ಒಂದೇ ಇ-ಸಿಮ್‌ಗೆ (eSIM) ಎರಡು ಪ್ರೊಫೈಲ್‌ಗಳನ್ನು ನಿಯೋಜಿಸಲು ಮತ್ತು ಸುಲಭವಾಗಿ ಎರಡೂ ನೆಟ್‌ವರ್ಕ್‌ಗಳ ನಡುವೆ ಬದಲಾಯಿಸಲು ಅನುಮತಿಸಲಿದೆ.
ಇದನ್ನೂ ಓದಿ: UPI Tap to Pay: ಗೂಗಲ್ ಪೇ ಹೊಸ ಫೀಚರ್: ಹಣ ಪಾವತಿ ಈಗ ಇನ್ನೂ ಸುಲಭ!
ಸಿಮ್ ಕಾರ್ಡ್ ಸ್ಲಾಟ್ ಇರೋದಿಲ್ಲ: ಗೂಗಲ್‌ನ ಈ ಹೊಸ ವೈಶಿಷ್ಟ್ಯ 2020ರಲ್ಲಿ ಸಲ್ಲಿಸಿದ ಪೇಟೆಂಟ್ ಆಧರಿಸಿದೆ ಎಂದು ವರದಿಯಾಗಿದೆ, ಇದು ಅಸ್ತಿತ್ವದಲ್ಲಿರುವ ಸಿಮ್ ಇಂಟರ್ಫೇಸನ್ನು ಎರಡು ಡಿಜಿಟಲ್ ಸಂಪರ್ಕಗಳಾಗಿ ವಿಭಜಿಸುವುದನ್ನು ವಿವರಿಸುತ್ತದೆ. ಗೂಗಲ್ ಇದನ್ನು ಎಂಜಿನಿಯರಿಂಗ್ ಪಿಕ್ಸೆಲ್ ಹಾರ್ಡ್‌ವೇರ್‌ನಲ್ಲಿ ಪರೀಕ್ಷಿಸುತ್ತಿದೆ ಎಂಬ ವರದಿಗಳು ಈ ಹಿಂದೆ ಇದ್ದವು. ಇದು ತಯಾರಕರು ಸಿಮ್ ಕಾರ್ಡ್ ಸ್ಲಾಟನ್ನು ತೊಡೆದುಹಾಕಲು ಅನುವು ಮಾಡಿಕೊಡುತ್ತದೆ, ಅಲ್ಲದೇ ಈ ಮೂಲಕ ಕೆಲವು ಹೆಚ್ಚುವರಿ ಹಾರ್ಡ್‌ವೇರ್‌ಗಳಿಗೆ ಸ್ಥಳಾವಕಾಶವನ್ನು ನೀಡುತ್ತದೆ.
ಆಂಡ್ರಾಯ್ಡ್ 13 ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ಮೊದಲು ಮೇ ತಿಂಗಳಲ್ಲಿ ಗೂಗಲ್‌ನ ಡೆವಲಪರ್ ಕಾನ್ಫರೆನ್ಸ್ Google I/O 2022 ನಲ್ಲಿ ಸಂಪೂರ್ಣವಾಗಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ, ಕಂಪನಿಯು ಆಂಡ್ರಾಯ್ಡ್ 13 ಡೆವಲಪರ್ ಪ್ರಿವೀವ್ 1 ಅನ್ನು ಬಿಡುಗಡೆ ಮಾಡಿದ್ದು, ಇದು ಬಹಳಷ್ಟು ಗೌಪ್ಯತೆ-ಕೇಂದ್ರಿತ ಬದಲಾವಣೆಗಳನ್ನು ಹೊಂದಿದೆ.
ಹಲವು ಹೊಸ ವೈಶಿಷ್ಟ್ಯಗಳು: ಡೆವಲಪರ್ ಪ್ರಿವೀವ್ ಸಿಸ್ಟಂ ಫೋಟೋ ಪಿಕ್ಕರ್, ನಿಯರ್‌ಬಾಯ್ ವೈ-ಫೈ ಡಿವೈಸ್ ವೈಶಿಷ್ಟ್ಯ, ಥೀಮಡ್ ಅಪ್ಲಿಕೇಶನ್ ಐಕಾನ್‌ಗಳು, ಪ್ರತಿ-ಅಪ್ಲಿಕೇಶನ್ ಭಾಷೆಯ ಆದ್ಯತೆಗಳು, ತ್ವರಿತ ಸೆಟ್ಟಿಂಗ್‌ಗಳ ಪ್ಲೇಸ್‌ಮೆಂಟ್ API ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ತೋರಿಸಿದೆ. ಇತರ Android 13 ವೈಶಿಷ್ಟ್ಯವು Apple Handoff-ಶೈಲಿಯ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ, ಅಲ್ಲಿ ಬಳಕೆದಾರರು ಪ್ಲೇಬ್ಯಾಕನ್ನು ವರ್ಗಾಯಿಸಲು ಟ್ಯಾಪ್ ಮಾಡಬಹುದು.
ಇದನ್ನೂ ಓದಿ: ಗೂಗಲ್ ಹೋಮ್ ಪೇಜ್‌ನಲ್ಲೇ ಸುಲಭವಾಗಿ ಇಂಟರ್ನೆಟ್ ಸ್ಪೀಡ್ ಪರೀಕ್ಷಿಸುವುದು ಹೇಗೆ?
ಟ್ಯಾಪ್ ಟು ಟ್ರಾನ್ಸಫರ್ ಸಾಧನಗಳ ನಡುವೆ ಮೀಡಿಯಾ ಪ್ಲೇಬ್ಯಾಕನ್ನು ಚೇಂಜ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಈ ವೈಶಿಷ್ಟ್ಯವು ಆಪಲ್‌ನ ಹ್ಯಾಂಡ್‌ಆಫ್ ವೈಶಿಷ್ಟ್ಯದಂತೆಯೇ ಇದೇ ರೀತಿಯ ಕಾರ್ಯವನ್ನು ನೀಡಬಹುದು ಅದು ಐಫೋನ್ ಮಾಲೀಕರಿಗೆ ಮೀಡಿಯಾವನ್ನು ಕಂಪನಿಯ ಹೋಮ್‌ಪಾಡ್ ಸ್ಪೀಕರ್‌ಗಳಿಗೆ ವರ್ಗಾಯಿಸಲು ಅನುಮತಿಸುತ್ತದೆ.
ಉನ್ನು ಆಪಲ್‌ನ iPhone 14 ಮತ್ತು iPhone 15 ಮಾದರಿಗಳು ಕೂಡ ಸಿಮ್ ಸ್ಲಾಟ್ ಬದಲಾಗಿ ಇ-ಸಿಮ್ ಜತೆಗೆ ಬಿಡುಗಡೆಯಾಗಲಿವೆ ಎಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಹೊಸ ಫೋನುಗಳಿಗೆ ಸಿಮ್‌ಕಾರ್ಡ್‌ಗಳನ್ನು ಅಳವಡಿಸಲು ಸಾಧ್ಯವಿರುವುದಿಲ್ಲ. ಬದಲಾಗಿ ಸಿಮ್ ಕಾರ್ಡ್‌ಗಳ ಸೇವೆಯನ್ನು ನೀಡುವ ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಸಕ್ರ್ಯೂಟ್ ಕಾರ್ಡನ್ನು ಅಳವಡಿಸಲಾಗಿರುತ್ತದೆ. ಈ ಎಲೆಕ್ಟ್ರಾನಿಕ್ ಡಿವೈಸ್ ಸಿಮ್ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಇ-ಸಿಮ್‌ನೊಂದಿಗೆ ಪೆರಿಸ್ಕೋಪ್ ಆಕಾರದ ಲೆನ್ಸ್ ಅನ್ನು ಈ ಫೋನಿನ ಕ್ಯಾಮೆರಾಗೆ ಅಳವಡಿಸಲಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.