ಏರೋ ಇಂಡಿಯಾ 2019: ಅಮೆರಿಕ ಪಾರ್ಟ್ನರ್‌ಶಿಪ್ ಪೆವಿಲಿಯನ್ ಉದ್ಘಾಟನೆ!

Published : Feb 21, 2019, 06:50 PM IST
ಏರೋ ಇಂಡಿಯಾ 2019: ಅಮೆರಿಕ ಪಾರ್ಟ್ನರ್‌ಶಿಪ್ ಪೆವಿಲಿಯನ್ ಉದ್ಘಾಟನೆ!

ಸಾರಾಂಶ

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋನಲ್ಲಿ ಅಮೆರಿಕ ಯುದ್ಧ ವಿಮಾನಗಳ ಪ್ರದರ್ಶನ ನಡೆಯುತ್ತಿದೆ. ಅಧಿಕೃತ ಅಮೆರಿಕಾ ಪಾರ್ಟ್ನರ್‌ಶಿಪ್ ಪೆವಿಲಿಯನ್ ಉದ್ಘಾಟಿಸಿದ ಅಮೆರಿಕಾ ರಾಯಭಾರಿ, ಇದೀಗ ಭಾರತೀಯ ಸೇನೆ ಜೊತೆ ಕೈಜೋಡಿಸಲು ಉತ್ಸುಕತೆ ತೋರಿದ್ದಾರೆ.

ಬೆಂಗಳೂರು(ಫೆ.21): ಯಲಹಂಕಾದ ವೈಮಾನಿಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋನಲ್ಲಿ ಅಮೆರಿಕ ನಿರ್ಮಿತ ಯುದ್ಧವಿಮಾನಗಳ ಅಧಿಕೃತ ಪ್ರದರ್ಶನ ಪೆವಿಲಿಯನ್ ತೆರೆಯಲಾಗಿದೆ. ಪಾರ್ಟ್ನರ್ ಪೆವಿಲಿಯನ್‌ನಲ್ಲಿ ಅಮೆರಿಕಾದ ಫೈಟಿಂಗ್ ಪಾಲ್ಕಾನ್, ಸೂಪರ್ ಹಾರ್ನೆಟ್ ಸೇರಿದೆಂತೆ ಹಲವು ಯುದ್ಧವಿಮಾನಗಳನ್ನ ಪ್ರದರ್ಶನಕ್ಕಿಟ್ಟಿದೆ.

ಇದನ್ನೂ ಓದಿ: ಮೈಲ್‌ಸ್ಟೋನ್‌ನಿಂದ ಹೆಲಿಕಾಪ್ಟರ್ ಪಡೆದ ಮುಂಬೈ ಮೂಲದ ಹೆಲಿಗೋ!

ಭಾರತದಲ್ಲಿರುವ ಅಮೇರಿಕಾದ ರಾಯಭಾರಿ ಜಸ್ಟರ್ ಕೆನ್ನಿತ್ ಪಾರ್ಟ್ನರ್ ಪೆವಿಲಿಯನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಕೆನ್ನಿತ್, ಏರೋ ಇಂಡಿಯಾ ಶೋನಲ್ಲಿ ಅಮೆರಿಕಾದ ಅತ್ಯಾಧುನಿಕ ಯುದ್ಧವಿಮಾನಗಳ ಪ್ರದರ್ಶನಕ್ಕಿಟ್ಟಿದ್ದೇವೆ. F-16 Fighting Falcon, F/A-18 Super Hornet, C-17 Globemaster, P-8I Poseidon, ಹಾಗೂ  B-52 Stratofortress bomber ಯುದ್ಧವಿಮಾನಗಳ ಪ್ರದರ್ಶನವಿದೆ. ಈ ವಿಮಾನಗಳು ಭಾರತದ ಸೇನೆಯ ಶಕ್ತಿಯನ್ನ ಇಮ್ಮಡಿಗೊಳಿಸಲಿದೆ ಎಂದರು.

ಇದನ್ನೂ ಓದಿ: ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ: ಇಲ್ಲಿದೆ ಏರೋ ಇಂಡಿಯಾ 2019 ಫೋಟೋಗಳು

ಭಾರತೀಯ ಸೇನೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಅಮೆರಿಕಾ ಯುದ್ದವಿಮಾನಗಳನ್ನ ಸೇರಿಸಿಕೊಳ್ಳೋ ಮೂಲಕ ಮಿಲಿಟರಿ ಶಕ್ತಿಯನ್ನ ವೃದ್ಧಿಸಲು ಸಾಧ್ಯವಿದೆ. ಭಾರತೀಯ ಸೇನೆ ಜೊತೆ ಮಾತುಕತೆ ನಡೆಸಿದ್ದೇವೆ. ಭಾರತದ ಜೊತೆ ಸಹಭಾಗಿತ್ವ ಹೊಂದುವುದೆ ನಮ್ಮ ಹೆಮ್ಮೆ ಎಂದು ಕೆನ್ನಿತ್ ಹೇಳಿದ್ದಾರೆ.

ಇದನ್ನೂ ಓದಿ: ಪೈಲಟ್‌ ನೆರವಿಗೆ ಧಾವಿಸಿದ ಯುವಕರಿಗೆ ಆರ್‌ಸಿ ಅಭಿನಂದನೆ

ಏರೋ ಇಂಡಿಯಾದಲ್ಲಿ ಅಮೆರಿಕಾದ ಅತ್ಯುತ್ತಮ ಹಾಗೂ ಶ್ರೇಷ್ಠ ಯುದ್ಧವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುವುದು. ಅಮೆರಿಕಾದ 28 ಕಂಪೆನಿಗಳು ಏರೋ ಇಂಡಿಯಾ ಶೋನಲ್ಲಿ ಪಾಲ್ಗೊಳ್ಳುತ್ತಿದೆ. 19 ಕಂಪನಿಗಳು ಪಾರ್ಟ್ನರ್‌ಶಿಪ್ ಪೆವಿಲಿಯನ್ ಜೊತೆ ಕೈಜೋಡಿಸಿದೆ ಎಂದು ಕೆನ್ನಿತ್ ಹೇಳಿದರು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?