Amazon Prime Membership: ದುಬಾರಿಯಾಗಲಿದೆ ಅಮೆಝಾನ್ ಪ್ರೈಮ್‌ : 999‌ ಆಫರ್‌ಗೆ ಇಂದು ಕೊನೆಯ ದಿನ!

Published : Dec 13, 2021, 11:33 AM ISTUpdated : Dec 13, 2021, 11:40 AM IST
Amazon Prime Membership: ದುಬಾರಿಯಾಗಲಿದೆ ಅಮೆಝಾನ್ ಪ್ರೈಮ್‌ : 999‌ ಆಫರ್‌ಗೆ ಇಂದು ಕೊನೆಯ ದಿನ!

ಸಾರಾಂಶ

*999‌ ಆಫರ್‌ ಪಡೆಯಲು ಇಂದು ಕೊನೆಯ ದಿನ *ನಾಳೆಯಿಂದ ₹1499ಗೆ ವಾರ್ಷಿಕ ಸದಸ್ಯತ್ವ *ಮೂರೂ ಪ್ಯಾಕ್‌ಗಳ ಮೇಲೆ ದರ ಪರಿಷ್ಕರಣೆ ಪ್ರಭಾವ

ನವದೆಹಲಿ(ಡಿ. 13): ಒಟಿಟಿ ಪ್ಲಾಟ್‌ಫಾರ್ಮ್ ಬಳಕೆದಾರರ ಫೇವರೇಟ್‌ ಅಮೆಝಾನ್‌ ಪ್ರೈಮ್‌ ಮೆಂಬರ್‌ಶಿಪ್ (Amazon Prime Membership) ಮಂಗಳವಾರದಿಂದ (ಡಿ. 14) ದುಬಾರಿಯಾಗಲಿದೆ. ದರ ಪರಿಷ್ಕರಣೆಯ ಬಳಿಕ ಅಮೆಝಾನ್‌ ಪ್ರೈಮ್‌ ವಾರ್ಷಿಕ ಸದಸ್ಯತ್ವದ  ₹1499 ಆಗಲಿದೆ.  ಸೋಮವಾರ (ಡಿ. 13) ಮಧ್ಯರಾತ್ರಿಯಿಂದ  999 ವಾರ್ಷಿಕ ಸದಸ್ಯತ್ವ ಯೋಜನೆಯು ಕೊನೆಗೊಳ್ಳಲಿದೆ. ಹೀಗಾಗಿ ಭಾರತದಲ್ಲಿ ಅಮೆಝಾನ್‌ ಪ್ರೈಮ್‌  ಸದಸ್ಯತ್ವದ ಹೊಸ ಬೆಲೆಯಲ್ಲಿ  ₹500 ಏರಿಕೆಯಾಗಲಿದೆ. 

ಅಮೆಝಾನ್‌ ಪ್ರೈಮ್‌ನ ಹೊಸ ಬೆಲೆ ಪರಿಷ್ಕರಣೆಯಿಂದ ಮಾಸಿಕ, ತ್ರೈಮಾಸಿಕ ಸೇರಿದಂತೆ ವಾರ್ಷಿಕ ಪ್ಯಾಕ್‌ಗಳಲ್ಲಿ ಬದಲಾವಣೆಯಾಗಲಿದೆ.  ಅಮೆಝಾನ್‌ ಪ್ರೈಮ್‌ನ ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಸದಸ್ಯತ್ವದ ಪರಿಷ್ಕೃತ ದರಗಳು ಈ ಕೆಳಗಿನಂತಿವೆ:

*ಮಾಸಿಕ (Monthly): ₹179

*ತ್ರೈಮಾಸಿಕ (Quarterly): ₹459

*ವಾರ್ಷಿಕ (Yearly): ₹1499

ಅಮೆಜಾನ್ ಅಕ್ಟೋಬರ್‌ನಲ್ಲಿ ಪ್ರೈಮ್ ಸದಸ್ಯತ್ವ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. ಅದರೆ ಇ-ಕಾಮರ್ಸ್ (E Commerce) ದೈತ್ಯ ಅಮೆಝಾನ್‌ ಆಗ ಬೆಲೆ ಏರಿಕೆಯ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಅಮೆಝಾನ್‌ನ ಪ್ರೈಮ್ ಸದಸ್ಯರಿಗೆ ವೇಗವಾದ ಡೆಲಿವರಿ (Fast Delivery) ಸೇವೆ ಲಭ್ಯವಿದ್ದು ಜತೆಗೆ ಅಮೆಝಾನ್‌ನ ವಿವಿಧ ಸೆಲ್‌ಗಳಿಗೆ (Amazon Sale) ಒಂದು ದಿನ ಮುಂಚೆಯೇ ಆ್ಯಕ್ಸಸ್‌ ಸಿಗುತ್ತದೆ.  ಪ್ರೈಮ್‌ ಸದಸ್ಯರಿಗೆ ಅಮೆಝಾನ್‌ ಪ್ರೈಮ್‌ನ ಪ್ರಮುಖ ಸೇವೆಯಾದ ಚಲನಚಿತ್ರಗಳು ವೆಬ್‌ ಸಿರೀಸ್‌ (Web Series) ಮತ್ತು ಸಂಗೀತ ಸ್ಟ್ರೀಮಿಂಗ್ ಸೇವೆ ಲಭ್ಯವಿದೆ. 

ಭಾರತದಲ್ಲಿ 5 ವರ್ಷಗಳ ಹಿಂದೆ ಪ್ರಾರಂಭವಾದಾಗಿನಿಂದ ಪ್ರೈಮ್ ಸದಸ್ಯತ್ವಕ್ಕೆ ಅಮೆಝಾನ್‌  ಮೌಲ್ಯವನ್ನು ಹೆಚ್ಚಿಸುವುದನ್ನು ಮುಂದುವರೆಸಿದೆ. "ಪ್ರೈಮ್‌, ಶಾಪಿಂಗ್, ಉಳಿತಾಯ ಮತ್ತು ಮನರಂಜನಾ ಪ್ರಯೋಜನಗಳ ಸೇವೆ ನೀಡುತ್ತದೆ. ಇದು ಜೀವನವನ್ನು  ಪ್ರತಿದಿನ ಮನರಂಜನೆಯಿಂದ (Entertainment) ಕೂಡಿರುವಂತೆ ಮಾಡುತ್ತದೆ. ನಾವು ಗ್ರಾಹಕರಿಗೆ ಪ್ರೈಮ್ ಅನ್ನು ಇನ್ನಷ್ಟು ಮೌಲ್ಯಯುತವಾಗಿಸುವಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ." ಎಂದು ಅಮೆಝಾನ್‌ ತಮ್ಮ ವೆಬ್‌ಸೈಟ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ:  Paperless Government: Dubai ವಿಶ್ವದ ಮೊದಲ ಕಾಗದರಹಿತ ಸರ್ಕಾರ : ಯುವರಾಜ ಶೇಖ್‌ ಹಮದ್‌!

ಪ್ರಸ್ತುತ ಅಮೆಝಾನ್‌  ಸದಸ್ಯರು ತಮ್ಮ ಸದಸ್ಯತ್ವದ ಅವಧಿ ಮುಗಿಯುವವರೆಗೆ ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರಿಸಬಹುದು ಎಂದು ಕಂಪನಿ ಸ್ಪಷ್ಟಪಡಿಸಿದೆ. ಅಸ್ತಿತ್ವದಲ್ಲಿರುವ ಅಮೆಜಾನ್ ಪ್ರೈಮ್ ಸದಸ್ಯರು ಡಿಸೆಂಬರ್ 14 ರ ನಂತರ ತಮ್ಮ ಯೋಜನೆ ಅವಧಿ ಮುಗಿಯುವವರೆಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದರೆ ಪ್ರೈಮ್ ಸದಸ್ಯರು ತಮ್ಮ ಅಸ್ತಿತ್ವದಲ್ಲಿರುವ ಪ್ರೈಮ್ ಸದಸ್ಯತ್ವ ಮುಗಿದ ನಂತರ ಹೊಸ ಬೆಲೆಯನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿLargest Smartphone Brand: ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ Realme!

ಹಾಗಾಗಿ ನಿಮ್ಮ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ನವೀಕರಿಸಲು ನೀವು ಯೋಚಿಸುತ್ತಿದ್ದರೆ ಇಂದೇ ಅದನ್ನು ರಿನ್ಯೂವ್‌ (Renew) ಮಾಡಿದರೆ ಉತ್ತಮ.  ಒಮ್ಮೆ ಒಂದು ವರ್ಷದ ಚಂದಾದಾರಿಕೆಯು ಕೊನೆಗೊಂಡರೆ, ನಂತರ ಪ್ರೈಮ್ ಸದಸ್ಯತ್ವ ಪಡೆಯಲು  1499 ಬೆಲೆ ನೀಡಬೇಕಾಗಿದೆ . ಇತ್ತೀಚೆಗೆ, ಡಿಸ್ನಿ+ ಹಾಟ್‌ಸ್ಟಾರ್ (Disney + Hotstar) ಕೂಡ  ಪರಿಚಯಿಸಿದ್ದ ಹೊಸ ಯೋಜನೆಗಳು ಪ್ರಿಪೇಯ್ಡ್ ಯೋಜನೆಗಳ ಮೇಲೆ ಪರಿಣಾಮ ಬೀರಿತ್ತು. ಡಿಸ್ನಿ+ ಹಾಟ್‌ಸ್ಟಾರ್‌ನ ಹೊಸ ಯೋಜನೆಗಳು ಈಗ ರೂ 499 ರಿಂದ ಪ್ರಾರಂಭವಾಗುತ್ತವೆ. ನೆಟ್‌ಫ್ಲಿಕ್ಸ್‌ನ (Netflix) ಅತ್ಯಂತ ಕಡಿಮೆ ಬೆಲೆಯ ಸದಸ್ಯತ್ವವು ರೂ 200 ಆಗಿದೆ ಮತ್ತು ವಾರ್ಷಿಕ ಸದಸ್ಯತ್ವವು ರೂ 2,000 ಕ್ಕಿಂತ ಹೆಚ್ಚಾಗಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ