Crypto Users in India: ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ 28 ವರ್ಷಕ್ಕಿಂತ ಚಿಕ್ಕವರೇ ಜಾಸ್ತಿ!

By Suvarna NewsFirst Published Dec 29, 2021, 10:51 AM IST
Highlights

CoinSwitch ವರದಿ ಪ್ರಕಾರ ಬಳಕೆದಾರರು 2021 ರಲ್ಲಿ ಅಪ್ಲಿಕೇಶನ್‌ನಲ್ಲಿ ಸರಾಸರಿ 27 ನಿಮಿಷಗಳ ಸಮಯವನ್ನು ಕಳೆದಿದ್ದಾರೆ.  ಕ್ರಿಪ್ಟೋ  ಬಳಕೆದಾರರಲ್ಲಿ 60 ಪ್ರತಿಶತದಷ್ಟು ಜನರು 28 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ವರದಿ ಹೇಳಿದೆ.

Tech Desk: ಕ್ರಿಪ್ಟೋಕರೆನ್ಸಿ (Cryptocurrency) ಬಗ್ಗೆ ಪ್ರಪಂಚದಾದ್ಯಂತೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಭಾರತ ಹೋರತೇನಲ್ಲ.ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ನಿಯಂತ್ರಣದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹಲವು  ಚರ್ಚೆಗಳು ನಡೆದಿವೆ. ಈ ಮಧ್ಯೆ ಕ್ರಿಪ್ಟೋ ವ್ಯವಹಾರವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವಂತೆ ತೋರುತ್ತಿದೆ, ಯುವಕರು ಮತ್ತು ಯುವತಿಯರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯೊಂದು ಹೇಳಿದೆ. ತನ್ನ ಇತ್ತೀಚಿನ ವರದಿಯಲ್ಲಿ, ಭಾರತೀಯ ಕ್ರಿಪ್ಟೋ ವಿನಿಮಯ ಕಾಯಿನ್‌ಸ್ವಿಚ್ ಕುಬೆರ್ (CoinSwitch Kuber) ತನ್ನ 14 ಮಿಲಿಯನ್ ಭಾರತೀಯರ ಬಳಕೆದಾರರಲ್ಲಿ 15 ಪ್ರತಿಶತ ಮಹಿಳೆಯರು ಎಂದು ಹೇಳಿಕೊಂಡಿದೆ. 

ಕ್ರಿಪ್ಟೋ ಚಟುವಟಿಕೆಗಳು ಮತ್ತು ವ್ಯಾಪಾರದಿಂದ ಬರುವ ಆದಾಯವನ್ನು ನಿಯಂತ್ರಿಸುವ ಮತ್ತು ಇದರಿಂದ ಆದಾಯ ಮೇಲೆ ತೆರಿಗೆ ವಿಧಿಸುವ ಮಾರ್ಗಗಳನ್ನು ಭಾರತವು ಇನ್ನೂ ನಿರ್ಧರಿಸುತ್ತಿರುವ ಸಮಯದಲ್ಲಿ ಈ ಅಂಕಿ ಸಂಖ್ಯೆಗಳು ಬಹಿರಂಗಗೊಂಡಿವೆ. ಕ್ವಾಯಿನ್‌ಸ್ವಿಚ್ ಕುಬೆರ್‌ನ ವರದಿಯು ಭಾರತದಲ್ಲಿ ಅದರ ಹೆಚ್ಚಿನ ಬಳಕೆದಾರರು ಯುವಕರು ಎಂದು ಬಹಿರಂಗಪಡಿಸಿದೆ.

 13 ನಿಮಿಷಗಳಿಷ್ಟಿದ್ದ ಸರಾಸರ 27ಕ್ಕೆ ಜಂಪ್!

ಬಳಕೆದಾರರು ಕ್ವಾಯಿನ್‌ಸ್ವಿಚ್ ಅಪ್ಲಿಕೇಶನ್‌ನಲ್ಲಿ ಕ್ರಿಪ್ಟೋ ಸ್ವತ್ತುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಥವಾ ಪ್ಲಾಟ್‌ಫಾರ್ಮ್‌ನಿಂದ ಕ್ರಿಪ್ಟೋ ಬಗ್ಗೆ ಕಲಿಯಲು ಸರಾಸರಿಯಾಗಿ,  27 ನಿಮಿಷಗಳ ಸಮಯವನ್ನು ಕಳೆದಿದ್ದಾರೆ. ಈ ವರ್ಷದ ಆರಂಭದಲ್ಲಿ, ಸರಾಸರಿ ಸಮಯವು ಪ್ರತಿ ಬಳಕೆದಾರರಿಗೆ 13 ನಿಮಿಷಗಳಿಷ್ಟಿತ್ತು ಎಂದು ವರದಿ ಹೇಳಿದೆ

ಕ್ವಾಯಿನ್‌ಸ್ವಿಚ್ ಕುಬೆರ್‌ನ ಒಟ್ಟು ಬಳಕೆದಾರರ ಸಂಖ್ಯೆಯಲ್ಲಿ 60 ಪ್ರತಿಶತದಷ್ಟು ಜನರು 28 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು ಮುಖ್ಯವಾಗಿ ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ, ಲಕ್ನೋ ಮತ್ತು ಪಾಟ್ನಾ ಸೇರಿದಂತೆ ಭಾರತೀಯ ಮೆಟ್ರೋ ನಗರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.‌

ವಹಿವಾಟಿನಲ್ಲಿ 3,500 ಪ್ರತಿಶತದಷ್ಟು ಏರಿಕೆ!

"ಕ್ರಿಪ್ಟೋ ವ್ಯವಹಾರವು ಈಗ ಭಾರತದ ಸಣ್ಣ ನಗರಗಳಲ್ಲಿಯೂ ಹರಡುತ್ತಿದೆ" ಎಂದು ಕ್ವಾಯಿನ್‌ಸ್ವಿಚ್ ಕುಬೆರ್‌ನ ನ ಸಂಸ್ಥಾಪಕ ಮತ್ತು CEO ಆಶಿಶ್ ಸಿಂಘಾಲ್ ಹೇಳಿದ್ದಾರೆ ಗ್ಯಾಜೆಟ್‌ಗಳು 360 ವರದಿ ಮಾಡಿದೆ.  ಕ್ವಾಯಿನ್‌ಸ್ವಿಚ್ ವರದಿಯಲ್ಲಿ,  ಬಿಟ್‌ಕಾಯಿನ್, ಡಾಗ್‌ಕಾಯಿನ್, ಈಥರ್ ಮತ್ತು ಪಾಲಿಗಾನ್ ಹೆಚ್ಚು ವ್ಯಾಪಾರದ ಸ್ವತ್ತುಗಳಾಗಿ ಹೊರಹೊಮ್ಮುವುದರೊಂದಿಗೆ ವಹಿವಾಟಿನ ಪರಿಮಾಣಗಳಲ್ಲಿ 3,500 ಪ್ರತಿಶತದಷ್ಟು ಏರಿಕೆಯನ್ನು ದಾಖಲಿಸಿದೆ ಎಂದು ಹೇಳಿಕೊಂಡಿದೆ.

ಕ್ರಿಪ್ಟೋ ಮಾರುಕಟ್ಟೆಯನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ!

ಸಂಸತ್ತಿನ ಚಳಿಗಾಲದ ಅಧಿವೇಶನದ ಚರ್ಚೆಯಿಂದ ಹೊರಗುಳಿದಿರುವ ಕ್ರಿಪ್ಟೋ ಮಸೂದೆಯು ಪ್ರಸ್ತುತ ಕ್ಯಾಬಿನೆಟ್ ಅನುಮೋದನೆಗೆ ಕಾಯುತ್ತಿದೆ. ಕೈಗಾರಿಕೆಗಳು ಬೆಂಬಲಿತವಾ  ಕ್ರಿಪ್ಟೋಕರೆನ್ಸಿಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹಾಗಾಗಿ ಈ ಮಾರುಕಟ್ಟೆಯನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಪ್ರಕಟವಾದ ಬ್ಯಾಂಕ್ ಆಫ್ ಅಮೇರಿಕಾ (BofA) ವರದಿ ಹೇಳಿದೆ.

ಕ್ರಿಪ್ಟೋ ವ್ಯವಹಾರದಲ್ಲಿ ವಿಲೀನಗಳು ಮತ್ತು ಸ್ವಾಧೀನಗಳು 2020 ರಲ್ಲಿ $ 940 ಮಿಲಿಯನ್ (ಸುಮಾರು ರೂ. 7,025 ಕೋಟಿ) ನಿಂದ 2021 ರಲ್ಲಿ $ 4.2 ಶತಕೋಟಿ (ರೂ. 31,390 ಕೋಟಿ) ಗೆ ಏರಿದೆ ಎಂದು BoFA ವರದಿ ತಿಳಿಸಿದೆ. ಕ್ರಿಪ್ಟೋ-ಸಂಬಂಧಿತ ಸಂಸ್ಥೆಗಳು 2021 ರಲ್ಲಿ $30 ಶತಕೋಟಿ (ಸುಮಾರು ರೂ. 2,27,617 ಕೋಟಿ) ಗಿಂತ ಹೆಚ್ಚು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ, ಇದು ಸಾರ್ವಕಾಲಿಕ ಗರಿಷ್ಠವಾಗಿದೆ.

ಇದನ್ನೂ ಓದಿ:

1) Whatsapp New Feature: ವಾಟ್ಸಾಪ್‌ ಹೊಸ ಫೀಚರ್ಸ್ ಮೂಲಕ ಹತ್ತಿರದ ಹೊಟೇಲ್, ದಿನಸಿ, ಬಟ್ಟೆ ಅಂಗಡಿ ಹುಡುಕಿ!

2) Intel Unit In India: ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಪೂರಕ ಸ್ಪಂದನೆ

3) MIUI 13 Unveiled: ಸುಧಾರಿತ ಪ್ರೈವಸಿ ವೈಶಿಷ್ಟ್ಯಗಳೊಂದಿಗೆ ಶಾಓಮಿಯ ಹೊಸ ಆಂಡ್ರಾಯ್ಡ್ ಸ್ಕಿನ್ ಬಿಡುಗಡೆ!

click me!