ಬಂದಿದೆ ಸಾಲ ಪಡೆದು ಬಿಲ್‌ ಪಾವತಿಸುವ, ರೀಚಾರ್ಜ್ ಮಾಡುವ ಆ್ಯಪ್!

By Web DeskFirst Published May 9, 2019, 6:03 PM IST
Highlights

ಮೊಬೈಲ್‌ ಬಿಲ್‌ನಿಂದ ಹಿಡಿದು ಗ್ಯಾಸ್‌, ಎಲೆಕ್ಟ್ರಿಸಿಟಿ ಬಿಲ್‌ ಕೂಡಾ ಪಾವತಿ ಸೌಲಭ್ಯ | 70 ಮಿಲಿಯನ್‌ ಜನರು ಬಳಕೆದಾರರು  | ಮೊಬೈಲ್‌ ರಿಚಾರ್ಜ್ ಮಾಡಲು ಟ್ರ್ಯೂ ಬ್ಯಾಲೆನ್ಸ್‌ ಆ್ಯಪ್‌
 

ಬಿಲ್‌ ಪೇ, ರೀಚಾರ್ಜ್, ಗ್ಯಾಸ್‌ ಬುಕ್‌, ಗಿಫ್ಟ್‌ ಕಾರ್ಡ್‌ ಹೀಗೆ ಹಲವು ರೀತಿಲ್ಲಿ ಆನ್‌ಲೈನ್‌ನಲ್ಲೇ ಎಲ್ಲಾ ರೀತಿಯ ವಹಿವಾಟು ನಡೆಸುವುದು ಈಗ ಇನ್ನಷ್ಟುಸುಲಭ. ಸ್ಮಾರ್ಟ್‌ಫೋನ್‌ ಮೂಲಕ ವಹಿವಾಟು ನಡೆಸುವ ಗ್ರಾಹಕರಿಗೆ ಸರಳವಾಗಲು ಹೊಸ ಮೊಬೈಲ್‌ ಅಪ್ಲಿಕೇಷನ್‌ ಅನ್ನು ಪರಿಚಯಿಸಲಾಗಿದೆ. ಅದರ ಹೆಸರು ‘ಟ್ರ್ಯೂ ಬ್ಯಾಲೆನ್ಸ್‌’ ಆ್ಯಪ್‌.

ಇದು ಆ್ಯಂಡ್ರಾಯ್ಡ್‌ ರೀಚಾರ್ಜ್ ಆ್ಯಪ್‌ ಆಗಿದ್ದು, ಮೊಬೈಲ್‌ ಬಿಲ್‌ನಿಂದ ಹಿಡಿದು ಗ್ಯಾಸ್‌, ಎಲೆಕ್ಟ್ರಿಸಿಟಿ ಬಿಲ್‌ವರೆಗೂ ಪಾವತಿಸಬಹುದಾಗಿದೆ. ಒಂದು ವೇಳೆ ಆ್ಯಪ್‌ನ ನಿಮ್ಮ ವ್ಯಾಲೆಟ್‌ನಲ್ಲಿ ಹಣವಿಲ್ಲದಿದ್ದರೂ ಟ್ರೂ ಬ್ಯಾಲೆನ್ಸ್‌ ಆ್ಯಪ್‌ನಲ್ಲಿ ಸಾಲ ಪಡೆದು ಬಿಲ್‌ ಪಾವತಿಸಬಹುದು. ಆಮೇಲೆ ನೀವು ಆ ಸಾಲವನ್ನು ತುಂಬಬಹುದು.

ಇದನ್ನೂ ಓದಿ: ಇನ್ಮುಂದೆ ನಿಮ್ಮ ಪೋಸ್ಟ್‌ಗೆ ಸಿಕ್ಕಿರುವ ಲೈಕ್ ಲೆಕ್ಕ ಸಿಗಲ್ಲ?

ಚಿಕಾಗೋದ ಮಿಸ್ಟರ್‌ ಚಾರ್ಲಿ ಲೀ ಈ ಆ್ಯಪ್‌ ಅನ್ನು ಪರಿಚಯಿಸಿದ್ದು, ಈವರೆಗೂ ಸುಮಾರು 70 ಮಿಲಿಯನ್‌ ಜನರು ಇದನ್ನು ಬಳಸುತ್ತಿದ್ದಾರೆ. ಟ್ರ್ಯೂ ಆ್ಯಪ್‌ ಮೂಲಕ ನೀರು, ಡಿಟಿಎಚ್‌, ಫೋನ್‌ ರೀಚಾಜ್‌ರ್‍, ಎಕ್ಟ್ರಿಸಿಟಿ ಪೇಮೆಂಟ್‌ ಮಾಡಬಹುದು. ಜೊತೆಗೆ ವೊಡಾಫೋನ್‌, ಐಡಿಯಾ, ಏರ್‌ಟೆಲ್‌ ನೆಟ್‌ವರ್ಕ್ನ ಪ್ರೀಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಬಳಕೆದಾರರು ಬಿಲ್‌ ಮ್ಯಾನೇಜ್‌ಮೆಂಟ್‌ ಮತ್ತು ಪೇಮೆಂಟ್‌ ಸಹ ಮಾಡಬಹುದು.

ಬಳಕೆದಾರರ ಬಳಿ ಕಡಿಮೆ ಬ್ಯಾಲೆನ್ಸ್‌ ಅಥವಾ ಕಡಿಮೆ ಡಾಟಾ ಇದ್ದರೆ ರೀಚಾರ್ಜ್ ಮಾಡಿಸಬೇಕೆಂದು ಸ್ವತಃ ಈ ಆ್ಯಪ್‌ ನೋಟಿಫಿಕೇಷನ್‌ ಮೂಲಕ ನೆನಪಿಸುತ್ತದೆ. ಹೀಗಾಗಿ ಪ್ಲೇಸ್ಟೋರ್‌ನ ಲೈಫ್‌ಸ್ಟೈಲ್‌ ಆ್ಯಪ್‌ ಕ್ಯಾಟಗರಿಯಲ್ಲಿ ಟ್ರ್ಯೂ ಬ್ಯಾಲೆನ್ಸ್‌ ಮೊದಲ ಸ್ಥಾನ ಪಡೆದಿದೆ. ಈ ಆ್ಯಪ್‌ ಮೂಲಕ ವಹಿವಾಟು ನಡೆಸಲು ಯುಪಿಐ ಸೇರಿ ಇತರೆ ಆಪ್ಷನ್‌ ಮೂಲಕ ನಡೆಸಬಹುದು. ಇದರೊಂದಿಗೆ ಪ್ರೀತಿ ಪಾತ್ರರಿಗೆ ಗಿಫ್ಟ್‌ ಕಾರ್ಡ್‌, ಟ್ರ್ಯೂ ಪೇ ಲೇಟರ್‌ ಸೌಲಭ್ಯವೂ ಇದೆ. ವಹಿವಾಟು ನಡೆಸಿದಾಗ ರಿವಾರ್ಡ್‌ ಹಾಗೂ ಪಾಯಿಂಟ್ಸ್‌ ಸಹ ಸಿಗಲಿದೆ.

click me!