ಈ ವರ್ಷ ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ 5 ಕಾರುಗಳು ಯಾವುದು?

First Published Jun 24, 2018, 8:10 PM IST
Highlights

ಭಾರತದಲ್ಲಿ ಜನಪ್ರೀಯವಾಗಿರೋ ಮಾರುತಿ ಸುಜುಕಿ ಕಾರುಗಳು ಇದೀಗ ಗ್ರಾಹಕರಿಗೆ ಮತ್ತಷ್ಟು ಕೊಡುಗೆ ನೀಡಲು ಸಜ್ಜಾಗಿದೆ. ಈ ವರ್ಷ ಮಾರುತಿ 5 ಕಾರುಗಳನ್ನ ಬಿಡುಗಡೆಗೊಳುತ್ತಿದೆ. ಹಾಗಾದರೆ ಆ ನೂತನ ಕಾರು ಯಾವುದು? ಅದರ ವಿಶೇಷತೆ ಏನು? ಇಲ್ಲಿದೆ ವಿವರ

ಬೆಂಗಳೂರು(ಜೂ.24): ಭಾರತದ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲು ಹೊಂದಿರುವ ಮಾರುತಿ ಸುಜುಕಿ ಗ್ರಾಹಕರ ಬೇಡಿಕೆ ತಕ್ಕಂತೆ ಕಾರುಗಳನ್ನ  ಬಿಡುಗಡೆ ಮಾಡುತ್ತಿದೆ. ಆಕರ್ಷಕ  ವಿನ್ಯಾಸ, ಕೈಗೆಟುಕುವ ಬೆಲೆಯಲ್ಲಿರುವ ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಹೆಚ್ಚು ಜನಪ್ರೀಯವಾಗಿದೆ.

2018-19ರ ಸಾಲಿನಲ್ಲಿ ಮಾರುತಿ ಸುಜುಕಿ 5 ಕಾರುಗಳನ್ನ ಬಿಡುಗಡೆಗೊಳಿಸಲಿದೆ. ಆಧುನಿಕ ತಂತ್ರಜ್ಞಾನ, ವಿನ್ಯಾಸಗಳೊಂದಿಗೆ ಮಾರುತಿಯ ನೂತನ ಕಾರುಗಳು ಶೀಘ್ರದಲ್ಲೇ  ಭಾರತದ ಮಾರುಕಟ್ಟೆ ಪ್ರವೇಶಿಲಿದೆ.

ಮಾರುತಿ ಸುಜುಕಿ ಸಿಯಾಜ್
ಬಿಡುಗಡೆ ದಿನಾಂಕ: ಆಗಸ್ಟ್, 2018

ಮಾರತಿ ಸುಜುಕಿ ಸಿಯಾಜ್ ಫೇಸ್‌ಲಿಫ್ಟ್ ಕಾರು, ಬಹುತೇಕ ಟೆಸ್ಟ್‌ಗಳನ್ನ ಪೂರೈಸಿದೆ. ಸದ್ಯದ ಸಿಯಾಜ್‌ ಕಾರಿಗಿಂತ ವಿಭಿನ್ನವಾಗಿರೋ ನೂತನ ಸಿಯಾಜ್ ಫೇಸ್‌ಲಿಫ್ಟ್ ಕಾರು ಗ್ರಾಹಕರನ್ನ ಆಕರ್ಷಿಸದೇ ಇರಲ್ಲ. ಮಾರುತಿ ಸಂಸ್ಥೆ ಪ್ರಕಾರ ಆಗಸ್ಟ್ 2018 ರಲ್ಲಿ ಬಿಡುಗಡೆಯಾಗಲಿದೆ.

ಮಾರುತಿ ಎರ್ಟಿಗಾ
ಬಿಡುಗಡೆ ದಿನಾಂಕ: ಸೆಪ್ಟೆಂಬರ್,2018

ಮಾರುತಿ ಸುಜುಕಿಯ ನೂತನ ಎರ್ಟಿಗಾ ಈಗಾಗಲೇ ಇಂಡೋನೇಷಿಯಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದೇ ಕಾರು ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್ ಕಾರುಗಳು  ಅಟೋಮೆಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ವಿಟಾರ ಬ್ರೀಝಾ ಪೆಟ್ರೋಲ್
ಬಿಡುಗಡೆ ದಿನಾಂಕ: 2019

ಎಸ್‌ಯುವಿ ಇಂಜಿನ್ ಕಾರಿನಲ್ಲಿ ಗ್ರಾಹಕರ ಮನ ಗೆದ್ದಿರುವ ಮಾರುತಿ ವಿಟಾರ ಬ್ರೀಝಾ ಸದ್ಯ ಡೀಸೆಲ್ ಇಂಜಿನ್ ಮಾತ್ರ ಲಭ್ಯವಿದೆ. ಆದೆ 2019ರ ವೇಳೆಗೆ ವಿಟಾರ ಬ್ರೀಝಾ ಪೆಟ್ರೋಲ್ ಕಾರು ಮಾರುಕಟ್ಟೆ ಪ್ರವೇಶಿಲಿದೆ. ಇದು ಡೀಸೆಲ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ.


ಮಾರುತಿ ವ್ಯಾಗನರ್
ಬಿಡುಗಡೆ ದಿನಾಂಕ: 2019

ನೂತನ ಮಾರುತಿ ವ್ಯಾಗನರ್ ಕಾರು ಹಳೇ ವ್ಯಾಗನರ್ ಕಾರಿನ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಹೊರ ಹಾಗೂ ಒಳ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. 1.0 ಲೀಟರ್ ಇಂಜಿನ್ ಹೊಂದಿರುವ ನೂತನ್ ವ್ಯಾಗನರ್ 67 ಬಿಹೆಚ್‌ಪಿ ಹಾಗೂ 90 ಎನ್ಎಮ್ ಹೊಂದಿದೆ. 2019ರ ಆರಂಭದಲ್ಲಿ ನೂತನ ವ್ಯಾಗನರ್ ಬಿಡುಗಡೆಯಾಗಲಿದೆ.

ಮಾರುತಿ ಅಲ್ಟೋ
ಬಿಡುಗಡೆ ದಿನಾಂಕ: 2019

ಭಾರತೀಯ ಸಣ್ಣ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಆಲ್ಟೋ ಇದೀಗ ನೂತನ ಅವತಾರದಲ್ಲಿ ಮತ್ತೆ ಬಿಡುಗಡೆಯಾಗಲಿದೆ. 2019ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಆಲ್ಟೋ ಹೊಸ ವಿನ್ಯಾಸ ಹೊಂದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅನುಗುಣವಾಗಿ ನೂತನ ಆಲ್ಟೋ ಗ್ರಾಹಕರ ಮನಗೆಲ್ಲಲಿದೆ ಅನ್ನೋದು ಸಂಸ್ಥೆ ವಿಶ್ವಾಸ. ನೂತನ ಆಲ್ಟೋ 660 ಸಿಸಿ ಇಂಜಿನ್ ಹೊಂದಿದೆ.

click me!