7ರ ಪೋರಿಗೆ ಗೂಗಲ್‌ನಿಂದ 54 ಲಕ್ಷ ರೂ. ಬಹುಮಾನ!

Published : Jun 24, 2018, 06:59 PM ISTUpdated : Jun 25, 2018, 11:15 AM IST
7ರ ಪೋರಿಗೆ ಗೂಗಲ್‌ನಿಂದ 54 ಲಕ್ಷ ರೂ. ಬಹುಮಾನ!

ಸಾರಾಂಶ

ಸುಮಾರು 1 ಲಕ್ಷದ 80 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದ ‘ಡೂಡಲ್ 4 ಗೂಗಲ್’ ಸ್ಪರ್ಧೆ 7 ವರ್ಷ ಪ್ರಾಯದ 1ನೇ ತರಗತಿ ವಿದ್ಯಾರ್ಥಿನಿ ಸಾರಾ ಬಿಡಿಸಿರುವ ಚಿತ್ರ ಡೂಡಲ್‌ಗಾಗಿ ಆಯ್ಕೆ

ಬೆಂಗಳೂರು: ಸಾಫ್ಟ್‌ವೇರ್ ದೈತ್ಯ ಗೂಗಲ್‌ನ 10ನೇ ವಾರ್ಷಿಕ ‘ಡೂಡಲ್ 4 ಗೂಗಲ್’ ಸ್ಪರ್ಧೆಯಲ್ಲಿ 7 ವರ್ಷ ಪ್ರಾಯದ ಸಾರಾ ಗೊಮೆಜ್ ಲೇನ್ ವಿಜೇತರಾಗಿದ್ದಾರೆಂದು ಗೂಗಲ್ ಪ್ರಕಟಿಸಿದೆ.

ಅಮೆರಿಕಾದ ವರ್ಜಿನಿಯಾದಲ್ಲಿ 1ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಾರಾ ಬಿಡಿಸಿರುವ ಡೂಡಲ್ ಚಿತ್ರವನ್ನು ತನ್ನ ಹೋಮ್ ಪೇಜ್‌ನಲ್ಲಿ ಪ್ರಕಟಿಸುವುದಾಗಿ ಗೂಗಲ್ ಹೇಳಿದೆ.

ಸುಮಾರು 1 ಲಕ್ಷದ 80 ಸಾವಿರ ಅಮೆರಿಕನ್ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈವರೆಗೆ ವಿಜೇತರಾದವರ ಪೈಕಿ ಸಾರಾ ಅತೀ ಕಿರಿಯಳು ಎಂದು ಹೇಳಲಾಗಿದೆ.

ಗೂಗಲ್ ಕಂಪನಿಯು ಸಾರಾ ಕಾಲೇಜು ಶಿಕ್ಷಣಕ್ಕಾಗಿ $30000 ಹಾಗೂ ಶಾಲೆಗೆ $50000 ಬಹುಮಾನ ನೀಡಲಿದೆ. ಜೊತೆಗೆ, ಸಾರಾಗೆ ‘ಮೌಂಟನ್ ವೀವ್’ಗೆ ಪ್ರವಾಸದ ಬಹುಮಾನವನ್ನೂ ಗೂಗಲ್ ನೀಡಿದೆ.  2014ರಿಂದ ಪ್ರತಿವರ್ಷ ಸ್ಪರ್ಧಾ ವಿಜೇತರಿಗೆ ಗೂಗಲ್ $80000 ಬಹುಮಾನ ನೀಡುತ್ತಾ ಬಂದಿದೆ.  

ನನ್ನಿಷ್ಟದ ಡೈನೋಸರ್‌ಗಳು ಡೂಡಲ್‌ನ ಭಾಗವಾಗಿವೆ. ನಾನು ಪಳಯುಳಿಕೆ ತಜ್ಞಳಾಗಬಯಸುತ್ತೇನೆ, ಅದಕ್ಕೆ ಹೆಚ್ಚೆಚ್ಚು ಓದಲು ಈ ಡೈನೋಸರ್‌ಗಳೇ ಸ್ಫೂರ್ತಿ, ಎಂದು ಸಾರಾ ಈ ಸಂದರ್ಭದಲ್ಲಿ ಹೇಳಿದ್ದಾರೆ.

ತಾನು ಬಿಡಿಸಿರುವ ಈ ಚಿತ್ರದಲ್ಲಿರುವ ಕಾಣುವ ಸಲಿಕೆಯು ತನ್ನ ಭವಿಷ್ಯದ ಉದ್ಯೋಗಕ್ಕಾಗಿ ಎಂದು ಸಾರಾ ಅಂಬೋಣ.

1998ರಲ್ಲಿ ಗೂಗಲ್ ತನ್ನ ಹೋಮ್ ಪೇಜಿನಲ್ಲಿ ಡೂಡಲ್‌ಗಳನ್ನು ಬಳಸಲು ಆರಂಭಿಸಿತ್ತು. ಮೊದಲ ಬಾರಿಗೆ ಲೋಗೋವನ್ನು ಬಳಸಲಾಗಿತ್ತು,  ಬಳಿಕದ ವರ್ಷಗಳಲ್ಲಿ ಅದಕ್ಕೆ ಕಲಾ ಮೆರುಗನ್ನು ನೀಡಲಾಯಿತು.  ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಗೂಗಲ್ ಕಂಪನಿಯು,  ಡೂಡಲ್ 4 ಗೂಗಲ್ ಸ್ಪರ್ಧೆಯನ್ನು ಆಯೋಜಿಸುತ್ತದೆ. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ಒಪ್ಪೊ ಫೈಂಡ್ X9 ಸೀರಿಸ್, ಪ್ರೋ ಲೆವಲ್ ಕ್ಯಾಮೆರಾ,AI ಟೂಲ್ಸ್ ಜೊತೆ ಸುದೀರ್ಘ ಸಮಯದ ಬ್ಯಾಟರಿ ಸ್ಮಾರ್ಟ್‌ಫೋನ್