
ಬೆಂಗಳೂರು(ಜೂ.23): ಭಾರತದ ಲಕ್ಸುರಿ ಕಾರು ಮಾರಾಟದಲ್ಲಿ ಆಡಿ ಸಂಸ್ಥೆ ಮುಂಚೂಣಿಯಲ್ಲಿದೆ. ಗ್ರಾಹಕರ ನೆಚ್ಚಿನ ಆಡಿ ಕ್ಯೂ5 ಇದೀಗ ಪೆಟ್ರೋಲ್ ಇಂಜಿನ್ ಬಿಡುಗಡೆ ಮಾಡುತ್ತಿದೆ. ಇದೇ ಜೂನ್ 28 ರಂದು ಭಾರತದಲ್ಲಿ ಆಡಿ ಕ್ಯೂ5 ಪೆಟ್ರೋಲ್ ಇಂಜಿನ್ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ನೂತನ ಆಡಿ ಕ್ಯೂ ಪ್ರೆಟ್ರೋಲ್ ಇಂಜಿನ್ ಕಾರಿನ ಬೆಲೆ 52 ಲಕ್ಷ ರೂಪಾಯಿ(ಎಕ್ಸ್ ಶೋರೂಮ್). ಸದ್ಯ ಆಡಿ ಕ್ಯೂ5ನಲ್ಲಿ ಡೀಸೆಲ್ ಇಂಜಿನ ಲಭ್ಯವಿದೆ. ಇದೀಗ ಪೆಟ್ರೋಲ್ ಇಂಜಿನ್ ಕೂಡ ಗ್ರಾಹಕರಿಗೆ ಸಿಗಲಿದೆ. ಆದರೆ ಪೆಟ್ರೋಲ್ ಇಂಜಿನ್ ಆಡಿ ಕ್ಯೂ5 ಕುರಿತು ಯಾವುದೇ ಮಾಹಿತಿಯನ್ನ ಆಡಿ ಸಂಸ್ಥೆ ಬಹಿರಂಗ ಪಡಿಸಿಲ್ಲ. ಆದರೆ ಈಗಾಗಲೇ ಆಡಿ ಕ್ಯೂ5 ಪೆಟ್ರೋಲ್ ಕಾರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೇ ಕಾರನ್ನ ಭಾರತದ ಬೇಡಿಕೆಗೆ ಅನುಗುಣವಾಗಿ ತಯಾರಿಸಲಾಗಿದೆ.
ನೂತನ ಆಡಿ ಕ್ಯೂ5 ಕಾರು 2.0 ಲೀಟರ್, 252 ಪಿಎಸ್ ಪೆಟ್ರೋಲ್ ಇಂಜಿನ್ ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಆಡಿ 8 ಏರ್ ಬ್ಯಾಗ್, 18 ಇಂಚಿನ ಆಲೋಯ್ ವೀಲ್ಸ್, ಪನೋರಮಿಕ್ ಸನ್‌ರೂಫ್, ಪಾರ್ಕಿಂಗ್ ಕ್ಯಾಮರಾ, ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕಲ್ ಎಡ್ಜಸ್ಟ್‌ಮೆಂಟ್ ಸೀಟ್, ಟಚ್ ಸ್ಕ್ರೀನ್ ಸೇರಿದಂತೆ ಹಲವು ಫೀಚರ್ ನೀಡಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.