Covid Victims Compensation : ಸಿಎಂ ಬೊಮ್ಮಾಯಿಗೆ ಶಾಸಕ ಜಮೀರ್ ಮನವಿ

Suvarna News   | Asianet News
Published : Dec 27, 2021, 03:15 PM IST
Covid Victims Compensation : ಸಿಎಂ ಬೊಮ್ಮಾಯಿಗೆ ಶಾಸಕ ಜಮೀರ್ ಮನವಿ

ಸಾರಾಂಶ

ಬೆಂಗಳೂರಿನಲ್ಲಿಂದು ನಡೆದ ಕೊವೀಡ್ ಮೃತರಿಗೆ ಪರಿಹಾರ ವಿತರಣೆ ಕಾರ್ಯಕ್ರಮ ಎಪಿಎಲ್ ಕಾರ್ಡುದಾರರಿಗೂ ಒಂದು ಲಕ್ಷ ನೆರವು ನೀಡಬೇಕು ಎಂದು  ಸಿಎಂ ಬಸವರಾಜ ಬೊಮ್ಮಾಯಿಗೆ ಜಮೀರ್ ಮನವಿ

ಬೆಂಗಳೂರು (ಡಿ.27): ಬೆಂಗಳೂರಿನಲ್ಲಿಂದು (Bengaluru) ನಡೆದ ಕೊವೀಡ್ (Covid) ಮೃತರಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ (Zameer ahmed) ಎಪಿಎಲ್ (APL Card) ಕಾರ್ಡುದಾರರಿಗೂ ಒಂದು ಲಕ್ಷ ನೆರವು ನೀಡಬೇಕು ಎಂದು   ಸಿಎಂ ಬಸವರಾಜ ಬೊಮ್ಮಾಯಿಗೆ (CM Basavaraj Bommai) ಮನವಿ ಮಾಡಿದರು. 

ಬೆಂಗಳೂರಿನ (Bengaluru) ಬಸವನಗುಡಿಯಲ್ಲಿ ಇಂದು ಸಿಎಂ ಬೊಮ್ಮಾಯಿ ಪರಿಹಾರ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ್ದು, ಅನೇಕರಿಗೆ ಚೆಕ್ ವಿತರಣೆ ಮಾಡಿದರು. ಈ ವೇಳೆ ಶಾಸಕ ಜಮೀರ್ ಅಹಮದ್ ಬಿಪಿಎಲ್ (BPL) ಕಾರ್ಡ್ ಕುಟುಂಬಕ್ಕೆ ಒಂದು‌ ಲಕ್ಷ ಪರಿಹಾರವನ್ನ ರಾಜ್ಯ ಸರ್ಕಾರ ಕೊಡುತ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಐವತ್ತು ಸಾವಿರ ಪರಿಹಾರ ನೀಡುತ್ತಿದ್ದಾರೆ. ಆದರೆ ಎಪಿಎಲ್ (APL) ಕಾರ್ಡ್ ಕುಟುಂಬಕ್ಕೆ ರಾಜ್ಯ ಸರ್ಕಾರ ಐವತ್ತು ಸಾವಿರ ಮಾತ್ರ ಪರಿಹಾರ ನೀಡುತ್ತಿದೆ. ಎಪಿಎಲ್ ಕಾರ್ಡ್ ದಾರರಿಗೂ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದರು. 

ಹೊದ ಪ್ರಾಣ ಒಂದು ಕೋಟಿ‌ ಕೊಟ್ಟರೂ ಬರುವುದಿಲ್ಲ. ಹಾಗಾಗಿ ಎಪಿಎಲ್ ಕಾರ್ಡ್ ಕುಟುಂಬಕ್ಕೆ ಒಂದು‌ ಲಕ್ಷ ಪರಿಹಾರ ನೀಡಿ. ಇದರಲ್ಲಿ ಕಾರ್ಡುದಾರರ  ಆಧರಿಸಿ ಹಂಚಿಕೆಯಲ್ಲಿ ಅಸಮಾನತೆ ಬೇಡ ಎಂದು ವೇದಿಕೆಯಲ್ಲಿಯೇ ಸಿಎಂಗೆ ಶಾಸಕ ಜಮೀರ್ ಅಹ್ಮದ್ ಮನವಿ ಮಾಡಿದರು.

ಚೆಕ್ ವಿತರಣೆ :  ಸಿಎಂ  ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತಪಟ್ಟರ ವಾರಸುದಾರ ಕುಟುಂಬದವರಿಗೆ ಇಂದು ಚೆಕ್ ವಿತರಣೆ ಮಾಡಿದರು.  ಸಾಂಕೇತಿಕವಾಗಿ ಪರಿಹಾರ ವಿತರಣೆಗೆ ಚಾಲನೆ ನೀಡಿದ್ದು ಕೊರೋನಾದಿಂದ ಮೃತಪಟ್ಟ ಎಲ್ಲ ವರ್ಗಗಳ ಕುಟುಂಬಗಳಿಗೆ ತಲಾ‌ 50 ಸಾವಿರ ರೂ ಕೇಂದ್ರದ ಪರಿಹಾರ. ಬಿಪಿಎಲ್ ಕುಟುಂಬಗಳಲ್ಲಿ ಕೋವಿಡ್ ಮೃತವರಿಗೆ ರಾಜ್ಯ ಸರ್ಕಾರದಿಂದ ತಲಾ 1 ಲಕ್ಷ ರೂ ಪರಿಹಾರ ವಿತರಣೆ ಮಾಡಲಾಯಿತು. 

ಬಿಪಿಎಲ್ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟು 1.50 ಲಕ್ಷ ರೂ ಪರಿಹಾರ ವಿತರಣೆ ಮಾಡಲಾಗುತ್ತಿದ್ದು ಹಿಂದಿನ ಸಿಎಂ ಯಡಿಯೂರಪ್ಪ ಬಿಪಿಎಲ್ ಕುಟುಂಬಗಳಿಗೆ ತಲಾ 1 ಲಕ್ಷ ಪರಿಹಾರ ಘೋಷಣೆ ‌ಮಾಡಿದ್ದರು. ಇದೀಗ ಘೋಷಣೆಯಾದ ಏಳು ತಿಂಗಳ ‌ಬಳಿಕ ಯೋಜನೆ ಜಾರಿಗೆ ತಂದ ರಾಜ್ಯ ಸರ್ಕಾರದಿಂದ ಇಂದು ಸಾಂಕೇತಿಕ ವಿತರಣೆ ನಡೆಯಿತು.  ಬಿಪಿಎಲ್ ಕುಟುಂಬಗಳೂ ಸೇರಿದಂತೆ ರಾಜ್ಯದ 23,733 ಸಾವಿರ ಕುಟುಂಬಗಳಿಗೆ ತಲಾ 50 ಸಾವಿರ ರೂ ಪರಿಹಾರ. ರಾಜ್ಯದ 12,276 ಬಿಪಿಎಲ್ ಕುಟುಂಬಗಳಿಗೆ ರಾಜ್ಯದಿಂದ ತಲಾ 1 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ.

7000ಕ್ಕೂ ಹೆಚ್ಚು ಐಸಿಯು ಬೆಡ್ :  ರಾಜ್ಯದಲ್ಲಿ(Karnataka) ಒಮಿಕ್ರೋನ್‌ ನಿರೀಕ್ಷೆಗೂ ಮೀರಿ ವೇಗವಾಗಿ ಹರಡುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಐಸಿಯು ಬೆಡ್‌ಗಳ ಸಂಖ್ಯೆಯನ್ನು 3860ರಿಂದ 7,051ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ 30 ಸಾವಿರ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ. ಒಮಿಕ್ರೋನ್‌(Omicron) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು  ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್‌, ‘ರಾಜ್ಯದಲ್ಲಿ ಕೊರೋನಾ(Coronavirus) ನಿರೀಕ್ಷೆಗೂ ಮೀರಿ ಹರಡುತ್ತಿದೆ. ಹೀಗಾಗಿ ಸೋಂಕು ತಡೆಯುವ ಕ್ರಮಗಳು, ಲಸಿಕೆ, ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳ ಕುರಿತು ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಎರಡನೇ ಅಲೆ ವೇಳೆಯಲ್ಲೇ 3,860 ಐಸಿಯು ಬೆಡ್‌(ICU Bed) ವ್ಯವಸ್ಥೆ ಮಾಡಲಾಗಿತ್ತು. ಇದೀಗ 3,191 ಬೆಡ್‌ ಹೆಚ್ಚಿಸಿದ್ದು ಒಟ್ಟು 7,051 ಬೆಡ್‌ಗಳನ್ನು ಐಸಿಯು ಬೆಡ್‌ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಉಳಿದಂತೆ 30 ಸಾವಿರ ಆಕ್ಸಿಜನ್‌ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ. ಜತೆಗೆ ಆಕ್ಸಿಜನ್‌ ಲಭ್ಯತೆ, ಔಷಧಗಳ ಬಗ್ಗೆಯೂ ವ್ಯವಸ್ಥೆ ಮಾಡಿದ್ದೇವೆ. ಒಮಿಕ್ರೋನ್‌ ಸೋಂಕಿನ ಚಿಕಿತ್ಸೆ(Treatment) ಬಗ್ಗೆ ಈಗಾಗಲೇ ವೈದ್ಯಕೀಯ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ವೈದ್ಯರಿಗೂ ಸೂಕ್ತ ಮಾಹಿತಿ ಒದಗಿಸಲಾಗಿದೆ. ಹೀಗಾಗಿ ರಾಜ್ಯವು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ