ಭದ್ರತಾ ಲೋಪ: ಅಮಿತ್‌ ಶಾ ಕಾರಿಗೆ ಬೈಕಲ್ಲಿ ಅಡ್ಡ ಬಂದ ಯುವಕರು!

Published : Mar 27, 2023, 09:40 PM IST
ಭದ್ರತಾ ಲೋಪ: ಅಮಿತ್‌ ಶಾ ಕಾರಿಗೆ ಬೈಕಲ್ಲಿ ಅಡ್ಡ ಬಂದ ಯುವಕರು!

ಸಾರಾಂಶ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜ್ಯ ಭೇಟಿ ಹೆಚ್ಚಾಗಿದೆ. ಈ ನಡುವೆ ಅವರು ಭೇಟಿ ನೀಡಿದ ಕಡೆ ಭದ್ರತಾ ಲೋಪಗಳು ಮರುಕಳಿಸುತ್ತಿವೆ. ಭಾನುವಾರ ರಾತ್ರಿ ಅಮಿತ್‌ ಶಾ ಅವರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳುವಾಗ ಭದ್ರತಾಲೋಪವಾಗಿದೆ.

ಬೆಂಗಳೂರು (ಮಾ.27) : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜ್ಯ ಭೇಟಿ ಹೆಚ್ಚಾಗಿದೆ. ಈ ನಡುವೆ ಅವರು ಭೇಟಿ ನೀಡಿದ ಕಡೆ ಭದ್ರತಾ ಲೋಪಗಳು ಮರುಕಳಿಸುತ್ತಿವೆ. ಭಾನುವಾರ ರಾತ್ರಿ ಅಮಿತ್‌ ಶಾ(Amit shah) ಅವರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳುವಾಗ ಭದ್ರತಾಲೋಪವಾಗಿದೆ.

ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮಿತ್‌ ಶಾ ರಾತ್ರಿ 10.45ರ ಸುಮಾರಿಗೆ ದೆಹಲಿಗೆ ವಾಪಸ್‌ ತೆರಳುತ್ತಿದ್ದರು. ಹೀಗಾಗಿ ರಾಜಭವನ(Rajbhavana road) ರಸ್ತೆಯಿಂದ ಎಚ್‌ಎಎಲ್‌ ವಿಮಾನ ನಿಲ್ದಾಣ(HAL Airport)ಕ್ಕೆ ಹೋಗುವ ಮಾರ್ಗ ಮಧ್ಯೆ ಮಣಿಪಾಲ್‌ ಸೆಂಟರ್‌(Manipal center) ಎದುರು ಏಕಾಏಕಿ ನಾಲ್ವರು ಯುವಕರು ಬೈಕ್‌ನಲ್ಲಿ ಅಮಿತ್‌ ಶಾ ವಾಹನಕೆæ್ಕ ಅಡ್ಡ ಬಂದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ, ಎಳೆಯಲು ಯತ್ನಿಸಿದ್ದಾರೆ. ಬಳಿಕ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಶನಿವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದಾವಣಗೆರೆಯಲ್ಲಿ ರೋಡ್‌ ಶೋ ಮಾಡುವಾಗ ಯುವಕನೊಬ್ಬ ಏಕಾಏಕಿ ಪ್ರಧಾನಿ ಅವರ ಕಾರು ಬಳಿ ತೆರಳಲು ಓಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಧಾನಸೌಧದೆದುರು ಬಸವಣ್ಣ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಅಮಿತ್ ಶಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!