ನಿಮ್ಹಾನ್ಸ್‌ನಿಂದ 2 ತಾಲೂಕಲ್ಲಿ ಯೋಗ ಚಿಕಿತ್ಸಾ ಕೇಂದ್ರ: ಮಾನಸಿಕ ಕಾಯಿಲೆಗಳಿಗೆ ಯೆಸ್‌ ಯೋಜನೆ

Kannadaprabha News   | Kannada Prabha
Published : Jun 13, 2025, 10:35 AM ISTUpdated : Jun 13, 2025, 10:38 AM IST
Nimhans

ಸಾರಾಂಶ

ಮಾನಸಿಕ ಆರೋಗ್ಯ ಸಮಸ್ಯೆಯನ್ನು ಯೋ ಗದ ಮೂಲಕ ಪರಿಹರಿಸುವ ಚಿಕಿತ್ಸಾ ಪದ್ಧತಿ ಯನ್ನು ವ್ಯಾಪಕವಾಗಿಸಲು ಮುಂದಾಗಿರುವ ನಿಮ್ಹಾನ್ಸ್ ಆರಂಭಿಕವಾಗಿ ರಾಜ್ಯದ ಎರಡು ತಾಲೂಕುಗಳಲ್ಲಿ ಸಮುದಾಯ ಮಟ್ಟದಲ್ಲಿ ಯೋಗ ಚಿಕಿತ್ಸೆ ಪ್ರಯೋಗಕ್ಕೆ ಮುಂದಾಗಿದೆ.

• ಮಯೂರ್ ಹೆಗಡೆ

ಬೆಂಗಳೂರು (ಜೂ.13): ಮಾನಸಿಕ ಆರೋಗ್ಯ ಸಮಸ್ಯೆಯನ್ನು ಯೋ ಗದ ಮೂಲಕ ಪರಿಹರಿಸುವ ಚಿಕಿತ್ಸಾ ಪದ್ಧತಿ ಯನ್ನು ವ್ಯಾಪಕವಾಗಿಸಲು ಮುಂದಾಗಿರುವ ನಿಮ್ಹಾನ್ಸ್ ಆರಂಭಿಕವಾಗಿ ರಾಜ್ಯದ ಎರಡು ತಾಲೂಕುಗಳಲ್ಲಿ ಸಮುದಾಯ ಮಟ್ಟದಲ್ಲಿ ಯೋಗ ಚಿಕಿತ್ಸೆ ಪ್ರಯೋಗಕ್ಕೆ ಮುಂದಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ಶಿವಮೊಗ್ಗದ ತೀರ್ಥಹಳ್ಳಿ, ತುಮಕೂರಿನ ತುರುವೇಕೆರೆಯಲ್ಲಿ ಮುಂದಿನ ಮೂರು ವರ್ಷ ಯೋಗ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ನಡೆಸಲಿದೆ. ಇದಕ್ಕಾಗಿ 'ಯೆಸ್‌' (ಯೋಗ ಬೇಸ್ಟ್ ಎಕ್ಸ್‌ಟೆನ್ಸನ್ ಸರ್ವೀಸಸ್) ಎಂಬ ಯೋಜನೆ ರೂಪಿಸಿದೆ. ಭವಿಷ್ಯದಲ್ಲಿ ಇತರೆಡೆಗೆ ನಿರ್ಧರಿಸಿದೆ.

10 ವರ್ಷದಿಂದ ನಿಮ್ಹಾನ್ಸ್ ಮಾನಸಿಕ ಕಾಯಿಲೆಗಳಿಗೆ ಯೋಗ ಚಿಕಿತ್ಸೆ ಕುರಿತು ಸಂಶೋಧನೆ ನಡೆಯುತ್ತಿದೆ. ಭಾವನೆ, ವರ್ತನೆ ಮೇಲೆ ಪರಿಣಾಮ ಬೀರುವ ಸ್ಕಿಜೋಫೋನಿಯಾ, ಉದ್ವೇಗ, ಖಿನ್ನತೆ ಸೇರಿ ಸಾಕಷ್ಟು ಸಮಸ್ಯೆಗೆ ವಿಶೇಷ ಯೋಗ ಚಿಕಿತ್ಸೆ ಸಂಯೋಜಿಸಿದೆ. ಪ್ರತಿ ತಿಂಗಳು ಸುಮಾರು 3000 ಮಾನಸಿಕ ಸಮಸ್ಯೆಯುಳ್ಳವರು ಈ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ಹಂತದಿಂದ ಸಮುದಾಯ ಮಟ್ಟದಲ್ಲಿ ಯೋಗ ಚಿಕಿತ್ಸೆಯ ಪ್ರಯೋಗ ನಡೆಸಲು ಮುಂದಾಗಿದೆ. 2009 ರಿಂದ ತುರುವೇಕೆರೆ, ತೀರ್ಥಹಳ್ಳಿ ತಾಲೂಕಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಾ ಯೋಜನೆಗಳು ನಡೆಯುತ್ತಿವೆ.

ತೀರ್ಥಹಳ್ಳಿಯಲ್ಲಿ 325 ಸ್ಕಿಜೋಫ್ರೆನಿಯಾ ಸೇರಿ 2000 ಜನರಿಗೆ ಚಿಕಿತ್ಸೆ ನೀಡಲಾಗಿದೆ. ತುರುವೇಕೆರೆಯಲ್ಲಿ 3500ಕ್ಕೂ ಹೆಚ್ಚಿನವರಿಗೆ ಚಿಕಿತ್ಸೆ ಒದಗಿಸ ಲಾಗಿದೆ. ಇವೆರಡು ತಾಲೂಕಲ್ಲಿ ಇದೀಗ ಯೋಗ ಚಿಕಿತ್ಸೆ ಪ್ರಯೋಗ ನಡೆಸಲಿದೆ. ನಿಮ್ಹಾನ್ಸ್ ಯೋಗ ವಿಭಾಗದ ಸಹ ಸಂಶೋಧಕ ಡಾ.ಹೇಮಂತ್ ಭಾರ್ಗವ್ ಮಾತನಾಡಿ, ಯೋಗ ಯಾವ ರೀತಿ ಮೆದುಳಿನ ರಾಸಾಯನಿಕ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತಿದೆ ಎಂಬುದರ ಮೇಲೆ ಹತ್ತು ವರ್ಷ ದಿಂದ ಸಂಶೋಧನೆ ನಡೆಸಿದ್ದೇವೆ. ಸಾಮಾನ್ಯ ಯೋಗಕ್ಕಿಂತ ನಾವು ಚಿಕಿತ್ಸಾ ರೂಪದಲ್ಲಿ ಮಾಡಿಸುವ ಯೋಗ ಭಿನ್ನ ಸ್ವರೂಪದಲ್ಲಿದೆ.

ಯೋಗವನ್ನು ಟ್ಯಾಬ್ಲೆಟ್‌ನಂತೆ ಗುಣವಾದ ಬಳಿಕ ಬಿಟ್ಟುಬಿಡುತ್ತೇವೆ ಎಂದರಾಗಲ್ಲ, ಬದಲಾಗಿ ಜೀವನ ಪದ್ಧತಿಯ ಭಾಗವಾಗಿ ಮುಂದುವರಿಸಬೇಕಾಗುತ್ತದೆ ಎಂದರು. ಸಂಶೋಧನೆ ಆಧರಿಸಿ ಮಾನಸಿಕ ಆರೋಗ್ಯದಲ್ಲಿ ವಿಜ್ಞಾನ ಮತ್ತು ಯೋಗ ಎಂಬ ಗ್ರಂಥ ರೂಪಿಸಲಾಗಿದೆ. ಉದಾಹರಣೆಯಾಗಿ ಖಿನ್ನತೆಗೆ ಕಪಾಲಬಾತಿ, ಓಂಕಾರ ಪಠಣ, ಉದ್ವೇಗಕ್ಕೆ ಭ್ರಮರಿ ಪ್ರಾಣಾಯಾಮ, ಸ್ಕಿಜೋಫೋನಿಯಾಗೆ ಸೂರ್ಯನಮಸ್ಕಾರ, ಪಾದಹಸ್ತಾಸನ ರೀತಿಯ ಪ್ರಾಣಾಯಾಮ ಸಂಯೋಜಿಸಲಾಗಿದೆ ಎಂದು ವಿವರಿಸಿದರು.

ಯೋಜನೆಯ ಮುಖ್ಯಸ್ಥೆ ಡಾ.ಆರತಿ ಜಗನ್ನಾಥನ್‌ ಮಾತನಾಡಿ, ಪ್ರಾಥಮಿಕವಾಗಿ ಮೊದಲ 6 ತಿಂಗಳು ಒಂದು ತಾಲೂಕಿನ ಕಾಯಿಲೆಯುಳ್ಳವರಿಗೆ ಮಾತ್ರ ನೀಡಿ, ಇನ್ನೊಂದು ತಾಲೂಕನ್ನು ಹಾಗೆ ಬಿಡ ಲಾಗುವುದು. ನಂತರ ಇನ್ನೊಂದು ತಾಲೂಕಿ ನಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು. ಚಿಕಿತ್ಸೆಯನ್ನು ವ್ಯಕ್ತಿಗತವಾಗಿ ಕಲಿಸಿಕೊಡ ಬೇಕೇ ಅಥವಾ ಟೆಲಿ ಯೋಗ ಮಾದರಿ ಅನುಸರಿಸಬೇಕೇ ಎಂದು ಶೀಘ್ರ ನಿರ್ಧರಿಸುತ್ತೇವೆ. 6 ಸೆಷನ್‌ಗಳಲ್ಲಿ ಚಿಕಿತ್ಸೆ ಕೊಡಲಾಗು ವುದು. ತಿಂಗಳಿಗೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗೆ ರೋಗಿಗಳನ್ನು ಕರೆಸಿ ಮುಖಾಮುಖಿ ಸಮಾಲೋಚನೆ ನಡೆಸಿ ಆರೋಗ್ಯದ ಅಪ್‌ಡೇಟ್ ಪಡೆಯುತ್ತೇವೆ ಎಂದು ಹೇಳಿದರು.

ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಯೋಗ ಚಿಕಿತ್ಸೆ ಪರಿಣಾಮಕಾರಿ. ಈವರೆಗೆ ಇದು ಆಸ್ಪತ್ರೆ ಮಟ್ಟದಲ್ಲಿ ನಡೆಸಲಾಗುತ್ತಿತ್ತು. ಶೀಘ್ರ ತೀರ್ಥಹಳ್ಳಿ, ತುರುವೇಕೆರೆಯಲ್ಲಿ ಯೋಗ ಚಿಕಿತ್ಸೆಯ ಪ್ರಯೋಗ ಆರಂಭಿಸಿ ಬಳಿಕ ರಾಜ್ಯದ ಇತರೆಡೆ ವಿಸ್ತರಿಸಲಾಗುವುದು.
-ಡಾ. ಆರತಿ ಜಗನ್ನಾಥನ್ ಪ್ರಧಾನ ಸಂಶೋಧಕಿ, ಯೆಸ್ ಯೋಜನೆ, ನಿಮ್ಹಾನ್ಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ