‘ಆಪರೇಷನ್ ಕಾವೇರಿ’ ಮೂಲಕ ಸೂಡಾನ್‌ನ ರಾಜಧಾನಿ ಖಾರ್ಟೂಮ್‌ನ ಕಂಪನಿಗಳಲ್ಲಿ, ಕಾರ್ಖಾನೆಗಳ ಮಾಲೀಕರಿಂದ ಹಣ ಪಡೆದು, ಅಲ್ಲಿಂದ 4 ಬಸ್ಸುಗಳಲ್ಲಿ ಕೆಲಸಗಾರರನ್ನು ಕರೆದೊಯ್ದಿದ್ದಾರೆ. ಹಕ್ಕಿಪಿಕ್ಕಿ ಜನರೂ ಅಲ್ಲಿಂದ ಹೋಗಿದ್ದಾರೆ. ಆದರೆ, ಅಲ್ಬಶೇರ್, ಗಿನಿನಾ, ಗದಾರಿ, ಕಸಾಲ, ಚಾಟ್ ಬಾರ್ಡರ್ ಸೇರಿ ಹಲವಾರು ಗ್ರಾಮಗಳಲ್ಲಿ ಇನ್ನೂ 500ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಜನರು ಅತಂತ್ರರಾಗಿದ್ದೇವೆ.
ದಾವಣಗೆರೆ(ಏ.30): ‘ಆಪರೇಷನ್ ಕಾವೇರಿ’ಯಿಂದ ನಮಗಾರಿಗೂ ನೆರವು ಸಿಗುತ್ತಿಲ್ಲ. ನಾವೆಲ್ಲರೂ ತೀವ್ರ ಕಷ್ಟದಲ್ಲೇ ಕ್ಷಣ ಕಳೆಯುತ್ತಿದ್ದೇವೆ. ಮಧುಮೇಹ, ಕೈ-ಕಾಲು ನೋವು, ಲೋ ಬಿಪಿ, ಖಿನ್ನತೆ...ಹೀಗೆ ನಾನಾ ಆರೋಗ್ಯ ಸಮಸ್ಯೆಗಳಿಗೂ ತುತ್ತಾಗುತ್ತಿದ್ದೇವೆ. ಖಾರ್ತೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೆ, ಹೇಗಾದರೂ ಬಸ್ಸನ್ನು ಮಾಡಿಕೊಂಡು, ಪೋರ್ಚ್ ಸೂಡಾನ್‌ಗೆ ಬನ್ನಿ ಎನ್ನುತ್ತಿದ್ದಾರೆ. ನಾವೆಲ್ಲರೂ ಕಳೆದ 2-3 ದಿನದಿಂದ ಅಲ್ಬಶೇರ್ ನಗರದ ಬಸ್ಸು ನಿಲ್ದಾಣ ಮೋಗಾಫ್‌ಗೆ ಬಂದಿದ್ದೇವೆ. ಆದರೆ, ಬಸ್ಸುಗಳ ಸುಳಿವಿಲ್ಲ. ಹೆಚ್ಚು ಬಾಡಿಗೆ ಕೊಡುತ್ತೇವೆ ಎಂದರೂ ಬಸ್ಸುಗಳು ಬರುತ್ತಿಲ್ಲ. ನಮ್ಮಲ್ಲಿ ಈಗ ಯಾರ ಬಳಿಯೂ ಹಣವಿಲ್ಲ’. ಇದು ಸೂಡಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತ್ರಸ್ತ, ಹಕ್ಕಿಪಿಕ್ಕಿ ಜನಾಂಗದ ಗೋಪನಾಳ್ ಪ್ರಭು ಎಂಬುವರ ಅಳಲು.
‘ಆಪರೇಷನ್ ಕಾವೇರಿ’ ಮೂಲಕ ಸೂಡಾನ್‌ನ ರಾಜಧಾನಿ ಖಾರ್ಟೂಮ್‌ನ ಕಂಪನಿಗಳಲ್ಲಿ, ಕಾರ್ಖಾನೆಗಳ ಮಾಲೀಕರಿಂದ ಹಣ ಪಡೆದು, ಅಲ್ಲಿಂದ 4 ಬಸ್ಸುಗಳಲ್ಲಿ ಕೆಲಸಗಾರರನ್ನು ಕರೆದೊಯ್ದಿದ್ದಾರೆ. ಹಕ್ಕಿಪಿಕ್ಕಿ ಜನರೂ ಅಲ್ಲಿಂದ ಹೋಗಿದ್ದಾರೆ. ಆದರೆ, ಅಲ್ಬಶೇರ್, ಗಿನಿನಾ, ಗದಾರಿ, ಕಸಾಲ, ಚಾಟ್ ಬಾರ್ಡರ್ ಸೇರಿ ಹಲವಾರು ಗ್ರಾಮಗಳಲ್ಲಿ ಇನ್ನೂ 500ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಜನರು ಅತಂತ್ರರಾಗಿದ್ದೇವೆ. ಅಲ್ಭಶೇರ್ ನಗರದಿಂದ ಪೋರ್ಚ್ ಸೂಡಾನ್‌ಗೆ ಹೋಗುವುದಕ್ಕೆ ಬಸ್ಸುಗಳು ಸಿಗುತ್ತಿಲ್ಲ. ಅಲ್ಬಶೇರ್ ನಗರದಲ್ಲೇ ವಿಮಾನ ನಿಲ್ದಾಣ ಇದ್ದು, ಇಲ್ಲಿಂದಲೇ ನಮ್ಮನ್ನು ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಬೇಕು. ನಾವೆಲ್ಲರೂ ತೀವ್ರ ಆತಂಕದಲ್ಲಿ ದಿನ ಕಳೆಯುವ ಸ್ಥಿತಿ ಇಲ್ಲಿದೆ. ಯಾವಾಗ ಏನಾಗುತ್ತದೋ ಎಂಬ ಆತಂಕ ಇದೆ ಎನ್ನುತ್ತಾರೆ ಪ್ರಭು.
ಸೂಡಾನ್‌ನಲ್ಲಿ ಇನ್ನೂ 500 ಹಕ್ಕಿಪಿಕ್ಕಿಗಳು ಅತಂತ್ರ: ಖಾರ್ಟೂಮ್‌ನಲ್ಲಿದ್ದ 561 ಮಂದಿ ರಕ್ಷಣೆ
ಖಾರ್ಟೂಮ್ ಬಿಟ್ಟರೆ ಇತರ ಭಾಗದಲ್ಲಿ ರಕ್ಷಣಾಕಾರ್ಯವಿಲ್ಲ:
ಕಳೆದ 15-16 ದಿನಗಳಿಂದಲೂ ಸೂಡಾನ್, ಸೇನಾ ಪಡೆ ಹಾಗೂ ಅರೆಸೇನಾ ಪಡೆ ನಡುವಿನ ಘರ್ಷಣೆಯಲ್ಲಿ ನಲುಗಿದೆ. ಈ ಮಧ್ಯೆ, ಗಿಡಮೂಲಿಕೆ ಔಷಧಿ, ನಾಟಿ ಔಷಧಿ ವ್ಯಾಪಾರಕ್ಕೆಂದು ಹೋಗಿದ್ದ ಹಕ್ಕಿಪಿಕ್ಕಿ ಜನಾಂಗ ಸೇರಿ ಭಾರತದ ಅನೇಕರು ಅಲ್ಲಿಯೇ ಸಿಲುಕಿದ್ದರು. ಈ ಮಧ್ಯೆ ಭಾರತ, 2 ವಿಮಾನ, 1 ಹಡಗನ್ನು ಸೂಡಾನ್‌ಗೆ ಕಳಿಸಿ, ‘ಆಪರೇಷನ್ ಕಾವೇರಿ’ ಮೂಲಕ ರಕ್ಷಣಾಕಾರ್ಯ ಕೈಗೊಂಡಿತ್ತು. ಆದರೆ, ಸೂಡಾನ್‌ನ ಭಾರತೀಯ ರಾಯಭಾರ ಕಚೇರಿ, ಖಾರ್ಟೂಮ್ ಬಿಟ್ಟರೆ ಇತರ ಭಾಗದಲ್ಲಿ ಸಿಲುಕಿದವರ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಅಸಮಾಧಾನ ಕೇಳಿ ಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪನಾಳ್ ಗ್ರಾಮದ 15 ಜನ, ಶಿವಮೊಗ್ಗ ಜಿಲ್ಲೆಯ 15 ಮಂದಿ, ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಪಕ್ಷರಾಜಪುರ ಗ್ರಾಮದ 38 ಸೇರಿ 68 ಮಂದಿ ಹಕ್ಕಿಪಿಕ್ಕಿಗಳು ಅಲ್ಬಶೇರ್‌ನಲ್ಲಿ ಅತಂತ್ರರಾಗಿದ್ದಾರೆ. ಕೈಯಲ್ಲಿದ್ದ ಹಣ ಖಾಲಿಯಾಗಿದ್ದು, ಅನ್ನ, ಆಹಾರ, ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಹಕ್ಕಿಪಿಕ್ಕಿಗಳು ವಾಸವಾಗಿದ್ದ ಮನೆಯ ಮಾಲೀಕ ಬಾಡಿಗೆ ಕೊಟ್ಟಿಲ್ಲವೆಂದು ಸ್ಥಳೀಯ ಪೊಲೀಸರನ್ನು ಕರೆಸಿ, ಎಲ್ಲರನ್ನೂ ಮನೆಯಿಂದ ಹೊರಗೆ ಹಾಕಿಸಿದ್ದು, ಎಲ್ಲರೂ ಮನೆಯ ಬಳಿಯೇ ಭಯದಿಂದ ದಿನ ಕಳೆಯುತ್ತಿದ್ದಾರೆ.
Operation Kaveri: ಸೂಡಾನ್‌ನಿಂದ ಕರ್ನಾಟಕದ 210 ಹಕ್ಕಿಪಿಕ್ಕಿಗಳ ರಕ್ಷಣೆ ಶುರು..!
ಅಲ್ಭಶೇರ್‌ನ ಬಸ್ ನಿಲ್ದಾಣ, ಮಾರುಕಟ್ಟೆ, ಕೈಗಾರಿಕೆಗಳು, ಕಚೇರಿಗಳು ಸ್ತಬ್ಧಗೊಂಡಿವೆ. ಇಡೀ ಊರಿನಲ್ಲಿ ಸ್ಮಶಾನ ಛಾಯೆ ಆವರಿಸಿದೆ. ಸ್ಥಳೀಯ ಸೂಡಾನ್ ನಿವಾಸಿಗಳು, ಅದರಲ್ಲೂ ಏಕರೂಪದ ಶ್ವೇತ ವರ್ಣದ ವಸ್ತ್ರ, ತಲೆಗೊಂದು ಬಿಳಿ ರುಮಾಲು ಕಟ್ಟಿಕೊಂಡ ಸೂಡಾನಿಗಳು, ಭಾರತದ ಹಕ್ಕಿಪಿಕ್ಕಿ ಜನರಿಗೆ ಬಸ್ಸು ಬರುವುದಿಲ್ಲ. ಯಾವ ವಾಹನಗಳೂ ಜಾಗ ಬಿಟ್ಟು ಕದಲುತ್ತಿಲ್ಲ. ನಿಮ್ಮ ಭಾರತ ಸರ್ಕಾರಕ್ಕೆ ಮನವಿ ಮಾಡಿ, ನೇರವಾಗಿ ಅಲ್ಭಶೇರ್ ವಿಮಾನ ನಿಲ್ದಾಣಕ್ಕೆ ವಿಮಾನ ತರಿಸಿಕೊಂಡು, ಭಾರತಕ್ಕೆ ವಾಪಸ್ಸಾಗಿ. ಸದ್ಯದ ಸ್ಥಿತಿಯಲ್ಲಿ ರಸ್ತೆ ಮಾರ್ಗವಾಗಿ ನೀವು ಪೋರ್ಚ್ ಸೂಡಾನ್ ತಲುಪುದು ಅಸಾಧ್ಯ ಎಂದು ಸಲಹೆ ನೀಡುತ್ತಿದ್ದು, ಇದು ಇವರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿದೆ.
ಊರಿನಲ್ಲಿ ನಮ್ಮ ಮಕ್ಕಳು ಉಣ್ಣಲು, ಉಡಲು ಸಮಸ್ಯೆಯಾಗಿ ಪರದಾಡುತ್ತಿದ್ದಾರೆ. ಇತ್ತ ಸೂಡಾನ್‌ನಲ್ಲೂ ನಮ್ಮದು ಅದೇ ಸ್ಥಿತಿ. ಪೋರ್ಟ್ ಸೂಡಾನ್‌ಗೆ ಹೋಗಲು ಬಸ್ಸು ನಿಲ್ದಾಣಕ್ಕೆ ಬಂದರೆ ಬಿಕೋ ಎನ್ನುತ್ತಿದೆ. ಅಲ್ಬಶೇರ್‌ಗೆ ವಿಮಾನ ಕಳಿಸಿ, ನಮ್ಮನ್ನು ರಕ್ಷಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಅಂತ ಸಂತ್ರಸ್ತ ಕನ್ನಡಿಗ ಪ್ರಭು ತಿಳಿಸಿದ್ದಾರೆ.