
ಬೆಂಗಳೂರು: ಗೊಂಡಾ–ಗೋರಖ್ಪುರ ವಿಭಾಗದಲ್ಲಿ ನಡೆಯುತ್ತಿರುವ ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆ, ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12592) ನ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.
ರೈಲ್ವೆ ಪ್ರಕಟಣೆಯ ಪ್ರಕಾರ, ಮಾರ್ಚ್ 2 ಹಾಗೂ ಮಾರ್ಚ್ 9ರಂದು ಯಶವಂತಪುರದಿಂದ ಹೊರಡುವ ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು, ತನ್ನ ನಿಯಮಿತ ಮಾರ್ಗ ಬದಲಾಗಿ ಗೊಂಡಾ ಜಂಕ್ಷನ್, ಬರ್ಹ್ನಿ ಮತ್ತು ಗೋರಖ್ಪುರ ಜಂಕ್ಷನ್ ಮಾರ್ಗವಾಗಿ ಸಂಚರಿಸಲಿವೆ.
ಈ ಮಾರ್ಗ ಬದಲಾವಣೆಯ ಪರಿಣಾಮವಾಗಿ, ಸಾಮಾನ್ಯವಾಗಿ ನಿಗದಿತ ನಿಲ್ದಾಣಗಳಾಗಿರುವ ಮಂಕಾಪುರ ಜಂಕ್ಷನ್ ಹಾಗೂ ಓರ್ವಾರಾ ನಿಲ್ದಾಣಗಳಲ್ಲಿ ಈ ರೈಲು ನಿಲ್ಲುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಂಜಿನಿಯರಿಂಗ್ ಕಾಮಗಾರಿಗಳು ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ರೈಲ್ವೆಯ ಅಧಿಕೃತ ಮಾಹಿತಿಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದ್ದು, ಮಾರ್ಗ ಬದಲಾವಣೆಯಿಂದ ಉಂಟಾಗುವ ಅಸೌಕರ್ಯಕ್ಕೆ ರೈಲ್ವೆ ಇಲಾಖೆಯು ವಿಷಾದ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ, ರೈಲು ತನ್ನ ಮೂಲ ಮಾರ್ಗದಲ್ಲಿ ಸಂಚರಿಸಲಿದೆ.
ಈ ರೈಲು ವಾರಕ್ಕೆ ಒಮ್ಮೆ ಸೇವೆ ಒದಗಿಸುತ್ತಿದ್ದು, ಯಶವಂತಪುರ, ಹಿಂದೂಪುರ, ಧರ್ಮಾವರಂ, ಗುಂತಕಲ್, ಮಂತ್ರಾಲಯಂ ರಸ್ತೆ, ರಾಯಚೂರು, ಸಿಕಂದರಾಬಾದ್, ಕಾಜಿಪೇಟ್, ಸಿರ್ಪುರ್ ಕಾಗಜ್‌ನಗರ, ಬಲ್ಹರ್ಷಾ, ನಾಗ್ಪುರ, ಇಟಾರ್ಸಿ, ಭೋಪಾಲ್, ಝಾನ್ಸಿ, ಗೋಖ್‌ಪುರ ಸೆಂಟ್ರಲ್‌ನಲ್ಲಿ ಹಾದು ಹೋಗುತ್ತದೆ. ಒಟ್ಟು 3 ದಿನಗಳ ಕಾಲ ಸಂಚರಿಸಿ ಗೋರಖ್ಪುರ ತಲುಪುತ್ತದೆ. ಸುಮಾರು 2,535 ಕಿ.ಮೀ ದೂರ ಸಂಚಾರ ಇದ್ದು, ಸುಮಾರು 46 ಗಂಟೆಗಳ ಪ್ರಯಾಣ ಇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ