Bagalkote Dalit Social Boycott Row: ತಮದಡ್ಡಿ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ‌ ಬಹಿಷ್ಕಾರ ವಿವಾದ ಸುಖಾಂತ್ಯ

Published : Feb 24, 2026, 06:33 PM IST
Bagalkote Dalit Social Boycott Row Ends Peace

ಸಾರಾಂಶ

ಬಾಗಲಕೋಟೆ ಜಿಲ್ಲೆಯ ತಮದಡ್ಡಿ ಗ್ರಾಮದಲ್ಲಿ ದಲಿತರ ಮೇಲೆ ಹೇರಲಾಗಿದ್ದ ಸಾಮಾಜಿಕ ಬಹಿಷ್ಕಾರದ ಆರೋಪವು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿದೆ. ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಮತ್ತು ಪೊಲೀಸರ ಸಮ್ಮುಖದಲ್ಲಿ ನಡೆದ ಸಭೆಯ ನಂತರ, ದಲಿತರಿಗೆ ಊರಿನಲ್ಲೇ ಕ್ಷೌರ ಮಾಡುವ ಮೂಲಕ ವಿವಾದ ಬಗೆಹರಿಸಲಾಯಿತು.

ಬಾಗಲಕೋಟೆ (ಫೆ.24): ಬಾಗಲಕೋಟೆ ಜಿಲ್ಲೆಯ ತಮದಡ್ಡಿ ಗ್ರಾಮದಲ್ಲಿ ಕೇಳಿ ಬಂದಿದ್ದ ಸಾಮಾಜಿಕ‌ ಬಹಿಷ್ಕಾರದ ಆರೋಪದ ವಿವಾದ ಸುಖಾಂತ್ಯವಾಗಿದೆ. ಹೌದು, ಜಿಲ್ಲೆಯ ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಗ್ರಾಮಸ್ಥರ ಜೊತೆಗಿನ ಸಭೆಯಿಂದ ವಿವಾದ ಅಂತ್ಯವಾಗಿದೆ.

ದಲಿತರಿಗೆ ಬಹಿಷ್ಕಾರ ಹಾಕಿದ್ದ ಗ್ರಾಮಸ್ಥರು

ಗ್ರಾಮದಲ್ಲಿ ಇತ್ತೀಚಿನ ಕಾರ್ಯಕ್ರಮಗಳಿಗೆ ದಲಿತರಿಗೆ ಪ್ರವೇಶ ನೀಡಿರಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಸಮುದಾಯದ ಮಧ್ಯೆ ಅಸಮಾಧಾನ ಉಂಟಾಗಿತ್ತು.

ಇದನ್ನೂ ಓದಿ: Bangalore: ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆ, ಸ್ಕೂಟರ್ ಪಲ್ಟಿ, ಜಸ್ಟ್ ಮಿಸ್ ಆದ ಶಾಲಾ ಮಕ್ಕಳು! ಇದೇನಾ ಬ್ರ್ಯಾಂಡ್ ಬೆಂಗಳೂರು?

ಹೀಗಾಗಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಮತ್ತು ದಲಿತರಿಗೆ ಕ್ಷೌರ ಕೂಡ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಸವರ್ಣೀಯರು ಹಾಗೂ ದಲಿತರ ಸಭೆ ಕರೆದು ಅಧಿಕಾರಿಗಳು ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಮಾತುಕತೆಯಿಂದಾಗಿ ದಲಿತರಿಗೆ ಊರಲ್ಲೇ ಇರುವ ಕಟಿಂಗ್ ಅಂಗಡಿಯಲ್ಲಿ ಕ್ಷೌರ ಮಾಡಿಸುವ ಮೂಲಕ ಸುಖಾಂತ್ಯ ಹಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ಮಕ್ಕಳಿಗೆ ಫ್ರೀ ನೋಟ್‌ಬುಕ್‌ ಪ್ರಸ್ತಾವ ಜೀವಂತ, 50 ಲಕ್ಷ ಮಕ್ಕಳಿಗೆ ನೋಟ್‌ಬುಕ್‌ ನೀಡಲು ಬೇಕು 75 ಕೋಟಿ ರು.
ಹಿಗ್ಗಿದ ಧಾರವಾಡ ಉದ್ಯೋಗಾಂಕ್ಷಿಗಳ ಹೋರಾಟ, ಬಗ್ಗಿದ ಸಿದ್ದರಾಮಯ್ಯ; ನೇಮಕಾತಿ ವಯೋಮಿತಿ 5 ವರ್ಷ ಸಡಿಲಿಕೆ ಮಾಡಿ ಘೋಷಣೆ!