Yadgiri Congress: ಕಾಂಗ್ರೆಸ್‌ ಟಿಕೆಟ್ ವಿಚಾರ 2 ಕಡೆ ಕ್ಲಿಯರ್‌, 2 ಕಡೆ ಟೆನ್ಷನ್..!

By Santosh Naik  |  First Published Oct 26, 2022, 4:23 PM IST

ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ ಸಿದ್ಧತೆ ಆರಂಭವಾಗಿರುವ ನಡುವೆಯೇ ಟಿಕೆಟ್‌ ಫೈಟ್‌ ಕೂಡ ಈಗಾಗಲೇ ಆರಂಭವಾಗಿದೆ. ಯಾದಗಿರಿ ಕ್ಷೇತ್ರದಲ್ಲಿ ಎರಡು ಕಡೆ ಟಿಕೆಟ್‌ ಟೆನ್ಷನ್‌ ಕಡಿಮೆಯಿದ್ದರೆ, ಇನ್ನೆರಡು ಕಡೆ ಟಿಕೆಟ್‌ಗಾಗಿ ನಾಯಕರುಗಳಿಂದ ಹೋರಾಟ ಆರಂಭವಾಗಿದೆ.


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಅ. 26): ರಾಜ್ಯ ವಿಧಾನಸಭೆ ಚುನಾವಣೆಗಳು ಇನ್ನು ಕೆಲವೇ ತಿಂಗಳು ಬಾಕಿಯಿವೆ. ಆದ್ರೆ ರಾಜಕೀಯ ಪಕ್ಷಗಳು ಯಾತ್ರೆ ಮೇಲೆ ಯಾತ್ರೆ ನಡೆಸುತ್ತಿವೆ. ಕಾಂಗ್ರೆಸ್‌ ಯುವರಾಜ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿ ದೇಶದಲ್ಲಿ ಪಕ್ಷ ಸಂಘಟನೆಗೆ ಮುಂದಾಗುತ್ತಿದ್ದರೆ,  ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಜನ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಆದರೆ, ಪಕ್ಷಗಳಿಗೆ ಈ ಬಾರಿ ಟಿಕೆಟ್ ನೀಡುವುದೇ ಒಂದು ಟೆನ್ಷನ್ ಆಗಿದೆ.  ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಮತಕ್ಷೇತ್ರಗಳಿವೆ. 2018 ರಲ್ಲಿ ಕಾಂಗ್ರೆಸ್‌ ಕೇವಲ ಒಂದರಲ್ಲಿ ಮಾತ್ರ ಗೆಲುವು ಪಡೆದಿತ್ತು. ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರಲು 'ಕೈ' ಪಡೆ ನಾನಾ ರೀತಿಯ ಕಸರತ್ತು ನಡೆಸುತ್ತಿದೆ. ಹಾಗಾಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಿದ್ದು, 'ಕೈ' ಟಿಕೆಟ್ ಆಕಾಂಕ್ಷಿಗಳಿಗೆ ಎದೆಯಲ್ಲಿ ಢವಢವ ಶುರುವಾಗಿದೆ. ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರ ಪೈಕಿ ನಾಲ್ಕರಲ್ಲೂ ಗೆಲುವು ಸಾಧಿಸಲು ಕಾಂಗ್ರೆಸ್‌ ಭಾರಿ ಸರ್ಕಸ್ ನಡೆಸುತ್ತಿದೆ. ಸುರಪುರ ಹಾಗೂ ಶಹಾಪುರ ಮತಕ್ಷೇತ್ರದಲ್ಲಿ ಟಿಕೆಟ್ ನೀಡುವುದು ಯಾವುದೇ ಸಮಸ್ಯೆಯಿಲ್ಲ. ಸುರಪುರ ಮತಕ್ಷೇತ್ರದಿಂದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಟಿಕೆಟ್ ಸಿಗುವುದು ನಿಶ್ಚಿತ. ಶಹಾಪುರ ಮತಕ್ಷೇತ್ರದಿಂದ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಟಿಕೆಟ್‌ ಬಹುತೇಕ ಫಿಕ್ಸ್‌. ಆದರೆ, ಈಗ  ಗುರಮಿಠಕಲ್ ಹಾಗೂ ಯಾದಗಿರಿ ಮತಕ್ಷೇತ್ರದ್ದೆ ಕಾಂಗ್ರೆಸ್‌ಗೆ ದೊಡ್ಡ ಚಿಂತೆಯಾಗಿದೆ. 

Tap to resize

Latest Videos

undefined

ಗುರಮಿಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆಲವು ಆಕಾಂಕ್ಷಿಗಳಿದ್ದಾರೆ, ಶರಣಪ್ಪ ಮಾನೇಗಾರ್, ಬಸರೆಡ್ಡಿ ಅನಪುರ, ಶ್ರೇಣಿಕುಮಾರ್ ದೋಖಾ ಇವರು ಪ್ರಮುಖ ಆಕಾಂಕ್ಷಿಗಳಿದ್ದಾರೆ. ಆದರೆ, ಯಾದಗಿರಿ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳೇ ದಂಡೇ ಕಾಣುತ್ತಿದೆ. ಡಾ.ಎಸ್.ಬಿ.ಕಾಮರೆಡ್ಡಿ ಇತ್ತೀಚೆಗೆ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿ ಬಂದಿದ್ದಾರೆ. ಚೆನ್ನಾರೆಡ್ಡಿ ತುನ್ನೂರು, ಎ.ಸಿ.ಕಾಡ್ಲೂರ್, ಡಾ.ಭೀಮಣ್ಣ ಮೇಟಿ, ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ ಇನ್ನು ಹಲವು ಆಕಾಂಕ್ಷಿಗಳಿದ್ದು ಟಿಕೆಟ್ ನೀಡುವುದೇ ಹೈಕಮಾಂಡ್ ಗೆ ತಲೆನೋವು ಶುರುವಾಗಿದೆ.

ಯಾದಗಿರಿ: ಇಬ್ರು ಸತ್ತ ಮೇಲೆ ಅಧಿಕಾರಿಗಳು ಓಡಿ ಬಂದ್ರು..!

ನಾನು ಪ್ರಬಲ ಆಕಾಂಕ್ಷಿ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಡಾ.ಎಸ್.ಬಿ.ಕಾಮರೆಡ್ಡಿ
ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ (Dr S.B. Kamareddy) ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‌ (Congress Ticket) ಟಿಕೆಟ್ ಮೇಲೆ ಕಣ್ಣಿಟ್ಟಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ನಮಗೆ ಪಕ್ಷದ ಹೈಕಮಾಂಡ್ ಇದೆ, ನಾನು ಕೂಡ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ಅದರಲ್ಲಿ ಎರಡನೇ ಮಾತಿಲ್ಲ. ಪಕ್ಷ ಹಾಗೂ ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ಕೊಟ್ಟಲ್ಲಿ ಸಂಘಟನೆ ಮಾಡಿ ಯಾದಗಿರಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವಂತೆ ಮಾಡುತ್ತೇನೆ ಎಂದಿದ್ದಾರೆ.

ಯಾದಗಿರಿ: ಕಾಲುವೆಯಲ್ಲಿ ಯುವಕನ ಶವ ಪತ್ತೆ, ಸಂಶಯಾಸ್ಪದ ಸಾವು

ಗುರಮಿಠಕಲ್ ಗೆ ನಾನೂ ಆಕಾಂಕ್ಷಿ: ಶರಣಪ್ಪ ಮಾನೇಗಾರ್
ಮಲ್ಲಿಕಾರ್ಜುನ ಖರ್ಗೆಯವರ ರಾಜಕಾರಣದಲ್ಲಿ ಬೆಳಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದು ಗುರಮಿಠಕಲ್ (gurmitkal ) ಮತಕ್ಷೇತ್ರ. ಬರೊಬ್ಬರಿ 8 ಬಾರಿ ಗುರಮಿಠಕಲ್ ಕ್ಷೇತ್ರದಿಂದ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಈಗ ಗುರಮಿಠಕಲ್ ಮತಕ್ಷೇತ್ರದಲ್ಲಿಯೂ ಮೂರು ಜನ ಆಕಾಂಕ್ಷಿಗಳಿದ್ದು, ಅದರಲ್ಲಿ ಕೋಲಿ ಸಮುದಾಯಕ್ಕೆ ಸೇರಿದ ಶರಣಪ್ಪ ಮಾನೇಗಾರ್ (Sharanappa Manager) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಪ್ತರಲ್ಲಿ ಒಬ್ಬರಾರಾಗಿದ್ದು, ಇವರು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಶರಣಪ್ಪ ಮಾನೇಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ನಾನು ಎನ್.ಎಸ್.ಯು.ಐ, ಯೂತ್ ಕಾಂಗ್ರೆಸ್‌, ಪೇರೆಂಟ್ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದೇನೆ. ನಾವು ಸತತವಾಗಿ ಬೇರು ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಿದವರು. ನಮ್ಮ ಅನುಭವ, ರಾಜಕೀಯ ಹಿನ್ನೆಲೆಯುಳ್ಳವರು ನಮ್ಮ ತಂದೆಯವರು ಪಕ್ಷಕ್ಕಾಗಿ ದುಡಿದವರು. ನಾನು ಪ್ರಬಲ ಆಕಾಂಕ್ಷಿ. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ಒಂದು ಶಿಸ್ತು ಇದೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಕೊನೆಗೆ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದರು.
 

click me!