ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಜನ ಸಾಹಿತ್ಯ ಸಮ್ಮೇಳನ ಆಯೋಜಿಸಿರುವ ಬಗ್ಗೆ ಮಾತನಾಡಿರುವ ಚಿಂತಕ ಪುರುಷೋತ್ತಮ ಬಿಳಿಮಲೆ ಜೊತೆಗೆ ಈಗಿನ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಸಾಹಿತಿಗಳು ಅಲ್ಲ. ಸಾಹಿತ್ಯವನ್ನ ಒಗ್ಗೂಡಿಸಿದವರು ಕೂಡ ಅಲ್ಲ. ಸಾಹಿತ್ಯ ಪರಿಷತ್ ಸಮ್ಮೇಳನದಿಂದ ಕೆಲವು ಧರ್ಮದವರನ್ನ ದೂರವಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಜ.7): ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಪರಂಪರೆ ಹಾಗೂ ಅಲ್ಪಸಂಖ್ಯಾತರ ಅವಗಣನೆಯ ಉದ್ದೇಶ ಹೊಂದಿದೆ ಎಂದು ಆರೋಪಿಸಿ, ಪರ್ಯಾಯವಾಗಿ ಸಮಾನ ಮನಸ್ಕ ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರಿಂದ ಜ.8ರಂದು ನಗರದ ಕೆ.ಆರ್.ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ‘ಜನ ಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿರುವ ಪ್ರಸಿದ್ದ ಚಿಂತಕ, ಜೆಎನ್ ಯು ಕನ್ನಡ ವಿಭಾಗದ ವಿಶ್ರಾಂತ ಪ್ರೋಫೆಸರ್ ಪುರುಷೋತ್ತಮ ಬಿಳಿಮಲೆ ಇತಿಹಾಸದಲ್ಲಿ ಐತಿಹಾಸಿಕವಾಗಿ ಸಾಹಿತ್ಯ ಸಮ್ಮೇಳನ, ವಿಶ್ವವಿದ್ಯಾಲಯಗಳನ್ನ ಸ್ಥಾಪಿಸಲಾಯ್ತೋ ಅದನ್ನ ಈ ಸಂಸ್ಥೆಗಳು ಸಂಪೂರ್ಣವಾಗಿ ಉಲ್ಲಂಘನೆ ಮಾಡಿವೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಸಾಕಷ್ಟು ಕೆಲಸ ಮಾಡಿದೆ. ಆದ್ರೆ ಇತ್ತೀಚೆಗೆ ಸಾಹಿತಿಗಳನ್ನ ದೂರವಿಡುವ ಕೆಲಸ ಮಾಡುತ್ತಿದೆ. ಸರ್ಕಾರದ ವತಿಯಿಂದ ಸಾಕಷ್ಟು ಅನುದಾನವನ್ನ ತೆಗೆದುಕೊಳ್ಳುತ್ತಿದೆ. ಅನುದಾನ ತೆಗೆದುಕೊಳ್ಳುವ ಜೊತೆಗೆ ತನ್ನ ಸ್ವಾಯತ್ತತೆಯನ್ನ ಕಳೆದುಕೊಳ್ಳುತ್ತಿದೆ ಎಂದಿದ್ದಾರೆ.
ಜೊತೆಗೆ ಈಗಿನ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಸಾಹಿತಿಗಳು ಅಲ್ಲ. ಸಾಹಿತ್ಯವನ್ನ ಒಗ್ಗೂಡಿಸಿದವರು ಕೂಡ ಅಲ್ಲ. ಸಾಹಿತ್ಯ ಪರಿಷತ್ ಸಮ್ಮೇಳನದಿಂದ ಕೆಲವು ಧರ್ಮದವರನ್ನ ದೂರವಿಟ್ಟಿದ್ದಾರೆ. ಅದೇ ಜನಸಾಹಿತ್ಯ ಸಮ್ಮೇಳನ ಮಾಡಲು ಪ್ರಮುಖ ಕಾರಣವಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ ಅದ್ಬುತ ಕೆಲಸ ಮಾಡಿದೆ. ಸಮಯ ಕಳೆದಂತೆ ಸಾಹಿತಿಗಳನ್ನ ದೂರ ತಳ್ಳುವ ಕೆಲಸ ಆಗ್ತಾಯಿದೆ. ಈಗ ಅದು ಸರ್ಕಾರದ ಅನುದಾನಿತ ಸಂಸ್ಥೆಯಾಗಿ ಬದಲಾಗಿದೆ. ಸರ್ಕಾರದಿಂದ ಅನುದಾನ ಪಡೆದು ತನ್ನ ಸ್ವಾಯತ್ತತೆ ಬಿಟ್ಟುಕೊಡುತ್ತಿದೆ. ಸಾಹಿತ್ಯ ಪರಿಷತ್ ಆರಂಭವಾದ ಮೂಲ ಉದ್ದೇಶ ಈಗ ಈಡೇರುತ್ತಿಲ್ಲ. ಈಗಿನ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಾಹಿತಿಗಳು ಅಲ್ಲ ಬರಹಗಾರರು ಅಲ್ಲ. ಪಥನಮುಖಿ ಸಾಹಿತ್ಯ ಸಂಘಟನೆಯನ್ನ ಎಚ್ಚರಿಸಬೇಕು. ಹೀಗಾಗಿ ಪರ್ಯಾಯವಾಗಿ ಜನಸಾಹಿತ್ಯ ಸಮ್ಮೇಳನವನ್ನ ಮಾಡಲಾಗುತ್ತಿದೆ ಎಂದಿದ್ದಾರೆ.
Jana sahitya sammelana: ಹಾವೇರಿಗೆ ಪರ್ಯಾಯವಾಗಿ ಜ.8ಕ್ಕೆ ಬೆಂಗಳೂರಲ್ಲಿ ಜನ ಸಾಹಿತ್ಯ ಸಮ್ಮೇಳನ
ಕರ್ನಾಟಕ ರಾಜ್ಯದಲ್ಲಿ 77 ಭಾಷೆಗಳಿವೆ. 2011 ರ ಜನಗಣತಿ ಪ್ರಕಾರ ಕೊಡವ ಭಾಷೆ ಮಾತನಾಡುವವರ ಸಂಖ್ಯೆ 1.30 ಲಕ್ಷ. ಅಂದ್ರೆ ದಿನಕಳೆದಂತೆ ಭಾಷೆಗಳು ಪಥನವಾಗುತ್ತಿವೆ. ಇಂತಹ ಸಮಯದಲ್ಲಿ ಸಾಹಿತ್ಯ ಪರಿಷತ್ ಗಳು ಭಾಷೆ ಉಳಿಸಲು ಹೋರಾಡಬೇಕಿದೆ. ಈ ಸಮ್ಮೇಳನದ ನಂತ್ರ ಉತ್ತರ ಕರ್ನಾಟಕದಲ್ಲಿ ದೊಡ್ಡಮಟ್ಟದ ಸಮ್ಮೇಳನ ಮಾಡಲು ತೀರ್ಮಾನಿಸಲಾಗಿದೆ. ನಂತ್ರ ಪ್ರತಿ ಜಿಲ್ಲೆಯಲ್ಲಿ ಸಮ್ಮೇಳನ ಮಾಡುತ್ತೇವೆ. ನಾವು ಯಾವುದೇ ರಾಜಕೀಯ ಪಕ್ಷ ಕಟ್ಟಲು ಹೊರಟಿಲ್ಲ. ನಮ್ಮ ಸಾಹಿತ್ಯ ಬೆಳೆಯಬೇಕು ಅಷ್ಟೇ. ಇದು ಸಾಹಿತ್ಯ ಪರಿಷತ್ತಿನ ವಿರುದ್ದವಲ್ಲ. ಸರ್ಕಾರದಿಂದ ಅನುದಾನ ಪಡೆಯದೆ ನಿರುಪಯುಕ್ತವಾಗಿರುವ ಸಂಸ್ಥೆಗಳ ವಿರುದ್ದ ಈ ಸಮ್ಮೇಳನ. ಇದು ಎಷ್ಟು ಯಶಸ್ಸು ಕಾಣುತ್ತೇ ಅನ್ನೋದನ್ನ ಕಾದುನೋಡಬೇಕು ಎಂದಿದ್ದಾರೆ.
ಜೈಪುರದಲ್ಲಿ ಜನವರಿ 19ರಿಂದ ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಸುಧಾಮೂರ್ತಿ
ಮಹೇಶ್ ಜೋಶಿ ಕೋಮುವಾದಿ: ಈಗ ಇರುವ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮಹೇಶ್ ಜೋಶಿ ಕೋಮುವಾದಿ. ಇಂತಹ ಕೋಮುವಾದ ಸರ್ಕಾರಕ್ಕೆ ಸರಿಯಾಗುತ್ತೆ. ವಿಶ್ವವಿದ್ಯಾಲಯದಲ್ಲಿ ಇವತ್ತು ಆರ್.ಎಸ್.ಎಸ್ ಚಡ್ಡಿ ಹಾಕಿಕೊಂಡು ಬಂದು ಫೋಟೋ ತೆಗೆದುಕೊಂಡಿದ್ದಾರೆ. ಇದನ್ನ ನೋಡಿದ್ರೆ ಯಾವ ಮಟ್ಟಕ್ಕೆ ಅವರು ಹೋಗಿದ್ದಾರೆ ಅನ್ನೋದು ಗೊತ್ತಾಗುತ್ತೆ. ಸಾಹಿತ್ಯ ಸಮ್ಮೇಳನದಲ್ಲಿ ಮಹೇಶ್ ಜೋಶಿ ಮಗಳು ಮಾನಸ ಜೋಶಿ ಡ್ಯಾನ್ಸ್ ಕಾರ್ಯಕ್ರಮವಿದೆ. ಅವರೇ ಅಧ್ಯಕ್ಷರಾಗಿ ಅವರ ಮಗಳ ಕಾರ್ಯಕ್ರಮವಿಟ್ಟಿದ್ದಾರೆ. ಅದು ಹೇಗೆ ಅಧ್ಯಕ್ಷರಾಗಿ ಮಗಳಿಗೆ ಹಣವನ್ನ ಪಾವತಿ ಮಾಡುತ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಜೆಎನ್ ಯು ಕನ್ನಡ ವಿಭಾಗದ ವಿಶ್ರಾಂತ ಪ್ರೋಫೆಸರ್ ಚಿಂತಕ ಪುರುಷೋತ್ತಮ ಬಿಳಿಮಲೆ ಹೇಳಿಕೆ ನೀಡಿದ್ದಾರೆ.