ವಿಶ್ವಕರ್ಮ ಎಸ್ಟಿಗೆ ಸೇರ್ಪಡೆಗಾಗಿ ಪಾದಯಾತ್ರೆ: ಕೆ.ಪಿ.ನಂಜುಂಡಿ

By Govindaraj SFirst Published Jan 7, 2023, 2:36 PM IST
Highlights

ಕಲೆ, ಸಾಹಿತ್ಯ, ಶಿಲ್ಪಕಲೆಗೆ ಮಹತ್ವದ ಕೊಡುಗೆ ನೀಡಿದ ವಿಶ್ವಕರ್ಮ ಸಮಾಜಕ್ಕೆ ಪರಿಶಿಷ್ಟಪಂಗಡ ಮೀಸಲಾತಿ ನೀಡಲು ಆಗ್ರಹಿಸಿ ಲಿಂಗಸುಗೂರಿನಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದೆಂದು ವಿಧಾನ ಪರಿಷತ್‌ ಸದಸ್ಯ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು. 

ಲಿಂಗಸುಗೂರು (ರಾಯಚೂರು) (ಜ.07): ಕಲೆ, ಸಾಹಿತ್ಯ, ಶಿಲ್ಪಕಲೆಗೆ ಮಹತ್ವದ ಕೊಡುಗೆ ನೀಡಿದ ವಿಶ್ವಕರ್ಮ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡಲು ಆಗ್ರಹಿಸಿ ಲಿಂಗಸುಗೂರಿನಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದೆಂದು ವಿಧಾನ ಪರಿಷತ್‌ ಸದಸ್ಯ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು. ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ, ಉಚಿತ ಸಾಮೂಹಿಕ ವಿವಾಹ ಸಮಾರಂಭದ ಹಾಗೂ 119ನೇ ಜಾಗೃತಿ ಸಮಾವೇಶ ಮತ್ತು ವಿಶ್ವಕರ್ಮ ಸಮಾಜಕ್ಕೆ ಎಸ್‌ಟಿ ಮೀಸಲು ನೀಡಲು ಆಗ್ರಹಿಸಿ ಲಿಂಗಸುಗೂರಿನಿಂದ ರಾಯಚೂರು ವರೆಗೆ 100 ಕಿ.ಮೀ. ಪಾದಯಾತ್ರೆ ಚಾಲನಾ ಕಾರ್ಯಕ್ರಮದಲ್ಲಿ ನಂಜುಂಡಿ ಮಾತನಾಡಿದರು.

ಮೀಸಲಾತಿ ಪಡೆಯಲು ವಿಶ್ವಕರ್ಮ ಸಮಾಜದ ಬಂಧುಗಳು ಒಂದಾಗಿ ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಮಕ್ಕಳ ಶೈಕ್ಷಣಿಕ ಭವಿಷ್ಯ ಅಪಾಯದ ಕೂಪಕ್ಕೆ ತಳಲ್ಪಡಲಿದೆ. ವಿಶ್ವಕರ್ಮ ಸಮುದಾಯಕ್ಕೆ ಪರಿಶಿಷ್ಟಪಂಗಡ ಮೀಸಲಾತಿ ಜಾರಿಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಲಿಂಗಸುಗೂರಿನಿಂದ ರಾಯಚೂರುವರೆಗೆ ಪಾದಯಾತ್ರೆ ನಡೆಸಲಾಗುವುದು. ಸಮುದಾಯದ ಬಂಧುಗಳು ಕಾಲ್ನಡಿಗೆ ಜಾಥಾ ಯಶಸ್ವಿಗೊಳಿಸಬೇಕು. ಪ್ರಜಾಪ್ರಭುತ್ವದಲ್ಲಿ ಮೀಸಲಾತಿ ಜಾರಿಗೆ ಬಂದಿದೆ. ಹಿಂದುಳಿದ ಸಮುದಾಯಗಳ ಶೈಕ್ಷಣಿಕ ಏಳಿಗೆಗೆ, ಸಮುದಾಯ ಆಚರಣೆ ಮಾಡುವ ಸಂಪ್ರದಾಯ, ಸಂಸ್ಕೃತಿ, ಆಚರಣೆ, ಪದ್ಧತಿಗಳು ಮೀಸಲಾತಿ ಪಡೆಯಲು ತೊಡಕು ಆಗುವುದಿಲ್ಲ. ಮೀಸಲಾತಿ ಬೇರೆ ಸಂಪ್ರದಾಯ, ಸಂಸ್ಕೃತಿಗಳ ಆಚರಣೆಗೆ ಸಂಬಂಧವಿಲ್ಲ ಎಂದು ಹೇಳಿದರು.

ಸೋನಿಯಾ ಮನೆ ಬಳಿ ಕಾದು ನಿಲ್ಲುತ್ತಿದ್ದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ

ವಿಶ್ವಕರ್ಮ ಸಮಾಜದಲ್ಲಿ 39ಕ್ಕೂ ಅಧಿಕ ಪಂಗಡಗಳಿವೆ. ಸಮಾಜದ ಬಂಧುಗಳು ಅಮರಶಿಲ್ಪಿ ಜಕಣಾಚಾರಿ ಹೆಸರಲ್ಲಿ ಸಮುದಾಯ ಜಾಗೃತಿಗೊಳಿಸಲು ಮುಂದಾಗಬೇಕು. ಏಕೆಂದರೆ ಈಗಾಗಲೆ ಸಮುದಾಯಕ್ಕೆ ನಿಗಮ, ಮಂಡಳಿ ಸ್ಥಾಪನೆ ಮಾಡಿರುವುದು ಸಮುದಾಯದ ಹೋರಾಟದ ಫಲವಾಗಿದೆ. ಇದರಿಂದ ಸಮುದಾಯದ ಜನರು ಪರಿಶಿಷ್ಟಪಂಗಡದ ಮೀಸಲಾತಿ ಪಡೆಯಬೇಕು. ಮೀಸಲಾತಿ ಸರ್ಕಾರದ ಕೈಯಲ್ಲಿ ಇಲ್ಲ, ಬದಲಾಗಿ ಸಮುದಾಯದ ಕೈಯಲ್ಲಿದೆ. ಇದನ್ನು ಅರಿತು ಸಮುದಾಯ ಎಚ್ಚರಗೊಳ್ಳಬೇಕೆಂದರು. ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ, ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್‌, ಮದಾನೆಗೂಂದಿ ಮಹಾ ಸಂಸ್ಥಾನ ಪೀಠಾಧೀಶ ದೇವದುರ್ಗ ಮೌನೇಶ್ವರ ಶ್ರೀಗಳು, ಅಜ್ಜೇಂದ್ರ ಶ್ರೀಗಳು, ಸೂರ್ಯನಾರಾಯಣ ಮಹಾಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.

ಹಂಪಿ ಉತ್ಸವದಲ್ಲಿ ಅಮರಶಿಲ್ಪಿ ಜಕಣಾಚಾರಿಗೆ ಆದ್ಯತೆ ಸಿಗಲಿ: ಹಂಪಿಯಲ್ಲಿ ಜನವರಿ ತಿಂಗಳಾಂತ್ಯದಲ್ಲಿ ನಡೆಯಲಿರುವ ಹಂಪಿ ಉತ್ಸವದ ವೇದಿಕೆಯಲ್ಲಿ ವಿಶ್ವಕರ್ಮ ಸಮಾಜದ ಸ್ವಾಮೀಜಿಗಳನ್ನು ಕೂಡಿಸುವ ಮೂಲಕ ಸಮಾಜಕ್ಕೆ ಆದ್ಯತೆ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಕೆ.ಪಿ. ನಂಜುಂಡಿ ಒತ್ತಾಯಿಸಿದರು. ನಗರದ ಡಾ. ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ರಾತ್ರಿ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ- 2023 ಕಾರ್ಯಕ್ರಮದಲ್ಲಿ ಮಾತನಾಡಿದರು. ಆಳುವ ಸರ್ಕಾರಗಳು ಶ್ರೀಕೃಷ್ಣ ದೇವರಾಯ ವಂಶಸ್ಥರನ್ನು ಪ್ರಧಾನವನ್ನಾಗಿಸಿಕೊಂಡು ಹಂಪಿ ಉತ್ಸವ ಆಚರಿಸುತ್ತಿಲ್ಲ. ಈ ಉತ್ಸವದಲ್ಲಿ ಶಿಲ್ಪಕಲೆ, ವಾಸ್ತು ಶಿಲ್ಪವೇ ಪ್ರಧಾನವಾಗಿದೆ. ಹೀಗಾಗಿ, ಅಮರ ಶಿಲ್ಪಿ ಜಕಣಾಚಾರಿಗೆ ಮಹತ್ವ ನೀಡಬೇಕು. 

ಬಾದಾಮಿ, ವರುಣಾ, ಕೋಲಾರದಿಂದ ಸ್ಪರ್ಧೆಗೆ ಅರ್ಜಿ ಹಾಕಿದ್ದೇನೆ: ಸಿದ್ದರಾಮಯ್ಯ

ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಅವರು ಈ ಸಮಾರಂಭಕ್ಕೆ ಆಗಮಿಸಿದ್ದರೆ, ವೇದಿಕೆಯಲ್ಲೇ ಮನವಿ ಮಾಡುತ್ತಿದ್ದೆ ಎಂದರು. ಸಮಾಜದ ಜನರು ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಸಮಾಜದ ಸಮಗ್ರ ಅಭಿವೃದ್ಧಿಗಾಗಿ ವಿಶ್ವಕರ್ಮ ಸಮುದಾಯಕ್ಕೆ ಎಸ್‌ಟಿ ಮೀಸಲಾತಿಗಾಗಿ ಹಲವು ದಶಕಗಳಿಂದ ಹೋರಾಟ ಆರಂಭಿಸಿದ್ದು, ನನ್ನ ಉಸಿರು ಇರುವ ವರೆಗೆ ನಿಲ್ಲುವುದಿಲ್ಲ. ಹೋರಾಟಕ್ಕೆ ಗ್ರಾಮ, ಹೋಬಳಿಗಳಿಂದ ಸಮಾಜದ ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವಾಸುದೇವ ಬಡಿಗೇರ ಮಾತನಾಡಿ, ವಿಶ್ವಕರ್ಮ ಸಮಾಜದ ಕಲೆ ಎಲ್ಲ ಸಮುದಾಯಗಳ ಧಾರ್ಮಿಕ, ಸಾಂಸ್ಕೃತಿಕತೆಯ ಭಾಗವಾಗಿದೆ ಎಂಬುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.

click me!