ರಾಜ್ಯದಲ್ಲಿ ಮತ್ತೆ ಮೋದಿ ಹವಾ: ಮಾ.12ರಂದು ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಉದ್ಘಾಟನೆ

By Kannadaprabha NewsFirst Published Mar 10, 2023, 6:35 AM IST
Highlights

ಇಲ್ಲಿನ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ’ದಲ್ಲಿ ನಿರ್ಮಾಣಗೊಂಡಿರುವ 1.5 ಕಿ.ಮೀ. ಉದ್ದದ ವಿಶ್ವದ ಅತಿ ದೀರ್ಘ ರೈಲ್ವೆ ಪ್ಲಾಟ್‌ಫಾರ್ಮ್‌ನ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಪ್ಲಾಟ್‌ಫಾರ್ಮ್‌ ಲೋಕಾರ್ಪಣೆಗೊಳಿಸಲಿದ್ದಾರೆ.
 

ಶಿವಾನಂದ ಗೊಂಬಿ

ಹುಬ್ಬಳ್ಳಿ (ಮಾ.09): ಇಲ್ಲಿನ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ’ದಲ್ಲಿ ನಿರ್ಮಾಣಗೊಂಡಿರುವ 1.5 ಕಿ.ಮೀ. ಉದ್ದದ ವಿಶ್ವದ ಅತಿ ದೀರ್ಘ ರೈಲ್ವೆ ಪ್ಲಾಟ್‌ಫಾರ್ಮ್‌ನ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಪ್ಲಾಟ್‌ಫಾರ್ಮ್‌ ಲೋಕಾರ್ಪಣೆಗೊಳಿಸಲಿದ್ದಾರೆ.

2019ರ ಅಕ್ಟೋಬರ್‌ನಲ್ಲಿ 20.1 ಕೋಟಿ ವೆಚ್ಚದಲ್ಲಿ ಈ ಪ್ಲಾಟ್‌ಫಾರ್ಮ್‌ನ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು, 2020ರ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಕೋವಿಡ್‌ನಿಂದಾಗಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜನೆಗೊಂಡಿರಲಿಲ್ಲ. ಆದರೆ, ರೈಲುಗಳ ಸಂಚಾರ ದಟ್ಟಣೆ ಜಾಸ್ತಿಯಾಗಿದ್ದರಿಂದ ಲೋಕಾರ್ಪಣೆಗೊಳ್ಳದಿದ್ದರೂ ಕಾರ್ಯಾಚರಣೆ ಆರಂಭಿಸಲಾಗಿತ್ತು.

Chikkaballapur: ಮಾ.25ಕ್ಕೆ ಮುದ್ದೇನಹಳ್ಳಿಗೆ ಪ್ರಧಾನಿ ಮೋದಿ ಭೇಟಿ

ಮಾ.12ರಂದು ಮಂಡ್ಯದಲ್ಲಿ ಬೃಹತ್‌ ರೋಡ್‌ ಶೋ ಹಾಗೂ ಸಮಾವೇಶ ನಡೆಸುವ ಮೋದಿ, ಬಳಿಕ ಧಾರವಾಡಕ್ಕೆ ಆಗಮಿಸಿ, ಐಐಟಿಯ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಇದೇ ವೇದಿಕೆಯಲ್ಲೇ ಅವರು ಈ ಪ್ಲಾಟ್‌ಫಾರ್ಮ್‌ ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ, .13 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿರುವ ಹೊಸಪೇಟೆಯ (ವಿಜಯನಗರ) ರೈಲ್ವೆ ನಿಲ್ದಾಣವನ್ನು ಕೂಡ ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲದೆ, ಹೊಸಪೇಟೆ- ತಿನೈಘಾಟ್‌ ಮಾರ್ಗದ 245 ಕಿ.ಮೀ.ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯೂ ನಡೆಯಲಿದೆ.

ಪ್ಲಾಟ್‌ಫಾರ್ಮ್‌ ವಿಶೇಷತೆ: ಇಲ್ಲಿನ ರೈಲ್ವೆ ನಿಲ್ದಾಣದ 1ನೇ ಪ್ಲಾಟ್‌ಫಾರ್ಮ್‌ 550 ಮೀಟರ್‌ ಉದ್ದವಿತ್ತು. ಇದನ್ನು ವಿಸ್ತರಿಸಿ 10 ಮೀ.ಅಗಲದೊಂದಿಗೆ 1,505 ಮೀಟರ್‌ವರೆಗೆ (1.5 ಕಿ.ಮೀ.) ವಿಸ್ತರಿಸಲಾಗಿದೆ. ಇದೀಗ ಇದು ಜಗತ್ತಿನಲ್ಲೇ ಅತಿ ಉದ್ದದ ಪ್ಲಾಟ್‌​ರ್ಮ್‌ ಆಗಿ ಹೊರಹೊಮ್ಮಿದೆ. ಈವರೆಗೂ ಈಶಾನ್ಯ ರೈಲ್ವೆ ವಲಯದ ಗೋರಖಪುರ ನಿಲ್ದಾಣದಲ್ಲಿರುವ 1,366 ಮೀಟರ್‌ (1.36 ಕಿ.ಮೀ.) ಉದ್ದದ ಪ್ಲಾಟ್‌ಫಾರ್ಮ್‌ ಅತಿ ಉದ್ದದ ಪ್ಲಾಟ್‌ಫಾರ್ಮ್‌ ಆಗಿತ್ತು.

ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?

ವಿಶ್ವದಲ್ಲೇ ಅತಿ ಉದ್ದದ ಪ್ಲಾಟ್‌ಫಾರ್ಮ್‌ನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ಈ ಪ್ಲಾಟ್‌ಫಾರ್ಮ್‌ನ್ನು ಮಾ.12ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಅಂದು ಧಾರವಾಡದ ಐಐಟಿ ಕ್ಯಾಂಪಸ್‌ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಅವರು ಉದ್ಘಾಟಿಸಲಿದ್ದು, ಅದರೊಂದಿಗೆ ಈ ಕಾರ್ಯಕ್ರಮ ಕೂಡ ನಡೆಯಲಿದೆ.
- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

click me!