ಎಲ್ಲಿಯ ಸಿಯಾಟ್ಟಲ್‌, ಎಲ್ಲಿಯ ತುಂಗೆ, ಅಮೆರಿಕ ಪುರಾತತ್ವಜ್ಞನ ಅಸ್ಥಿ ಹಂಪಿಯ ತುಂಗಭದ್ರೆಯಲ್ಲಿ ಲೀನ!

By Gowthami K  |  First Published Mar 9, 2023, 4:50 PM IST

ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನರಾಗಿದ್ದ ಅಮೆರಿಕದ ಹೆಸರಾಂತ ಅಂತರರಾಷ್ಟ್ರೀಯ ಪುರಾತತ್ವಜ್ಞ, ಸಂಶೋಧಕ ಜಾನ್ ಮೆರ್ವಿನ್ ಫ್ರಿಟ್ಸ್ ಅವರ ಅಸ್ಥಿ ವಿಸರ್ಜನೆಯನ್ನು ಅವರ ಇಚ್ಛೆಯಂತೆ ಹಂಪಿಯ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಗಿದೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ವಿಜಯನಗರ ( ಹಂಪಿ): ಹಿಂದೂಗಳ ಧಾರ್ಮಿಕ ಪೂಜಾ ಕೈಂಕರ್ಯ, ಸಂಸ್ಕೃತಿ ಮತ್ತು ಪರಂಪರೆಗೆ ಅತಿದೊಡ್ಡ ಇತಿಹಾಸವೇ ಇದೆ. ಇಲ್ಲಿ ಹುಟ್ಟಿನಿಂದ ಸಾಯೋವರೆಗೂ ಮನುಷ್ಯ ಜೀವನದಲ್ಲಿ ಆಗುವ ಎಲ್ಲಾ ಘಟನೆಗಳಿಗೂ ಒಂದೊಂದು ರೀತಿಯ ಧಾರ್ಮಿಕ ಆಚರಣೆ ನಡೆಯುತ್ತವೆ. ಮನುಷ್ಯ ಮೃತಪಟ್ಟ ಮೇಲೂ ಅವರ ಅಸ್ಥಿ ವಿಸರ್ಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜೀವನ ಕೊನೆಗೊಳ್ಳುತ್ತದೆ. ಇದನ್ನು ಹಿಂದೂಗಳು ಅಥವಾ ಭಾರತೀಯರಷ್ಟೇ ಅಲ್ಲದೇ ವಿದೇಶಿಗರು ಈ ರೀತಿಯ ಆಚರಣೆ ಮಾಡ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂತರರಾಷ್ಟ್ರೀಯ ಪುರಾತತ್ವಜ್ಞ ಸಂಶೋಧಕ ಜಾನ್ ಮೆರ್ವಿನ್ ಫ್ರಿಟ್ಸ್ (83) ಅವರ ಅಸ್ಥಿ ವಿಸರ್ಜನೆ ಕಾರ್ಯಕ್ರಮ.  ಮೃತಪಟ್ಟಿದ್ದು ವಿದೇಶದಲ್ಲಿಯಾದ್ರೂ ಅವರ ಕೊನೆಯ ಇಚ್ಛೆಯಂತೆ ಅಸ್ಥಿ  ವಿಸರ್ಜನೆ ಮತ್ತು ಅಂತಿಮ ಧಾರ್ಮಿಕ ವಿಧಿವಿಧಾನಗಳನ್ನು ಹಂಪಿಯಲ್ಲಿ  ಮಾಡಲಾಗಿದೆ.

Tap to resize

Latest Videos

undefined

ಉಕ್ರೇನ್ ಪ್ರತಿಜ್ಞೆಗೆ ಸೇಡು, ಬಂಧಿತ ಉಕ್ರೇನ್ ಯೋಧನನ್ನು ಗುಂಡಿಕ್ಕಿ ಕೊಂದ ರಷ್ಯಾ ಪಡೆ!

ಭಾರತೀಯ ಸಂಸ್ಕೃತಿ ಮೇಲೆ ವಿದೇಶಿಗರಿಗೂ‌ ಇದೆ ನಂಬಿಕೆ:
ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನರಾಗಿದ್ದ ಅಮೆರಿಕದ ಹೆಸರಾಂತ ಅಂತರರಾಷ್ಟ್ರೀಯ ಪುರಾತತ್ವಜ್ಞ, ಸಂಶೋಧಕ ಜಾನ್ ಮೆರ್ವಿನ್ ಫ್ರಿಟ್ಸ್ (83) ಅವರ ಅಸ್ಥಿ ವಿಸರ್ಜನೆಯನ್ನು ಅವರ ಇಚ್ಛೆಯಂತೆ ಹಂಪಿಯ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಗಿದೆ. ಅಮೆರಿಕದಲ್ಲಿ ಹುಟ್ಟಿದ್ದ ಫ್ರಿಟ್ಜ್  ಅವರ ಕಾರ್ಯಕ್ಷೇತ್ರ ಲಂಡನ್ ಆಗಿತ್ತು. ಅವರು ಕಳೆದ ಜನವರಿ 23 ರಂದು ಕ್ಯಾನ್ಸರ್‌ನಿಂದ ಲಂಡನ್‌ ನಲ್ಲೇ ಮೃತಪಟ್ಟಿದ್ದರು. ಅವರ ಕೊನೆಯ ಆಸೆಯಂತೆ ಅವರ ಮಗಳು ಅ್ಯಲಿಸ್ ಚಂದ್ರ, ಮೊಮ್ಮಗ ವಿಲಿಯಂ, ಅವರು ಅಮೆರಿಕದ ಸಿಯಾಟೆಲ್‌ನಿಂದ ಹಂಪಿಗೆ, ಬಂದು ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ತುಂಗಭದ್ರಾ ನದಿಯಲ್ಲಿ ಅವರ ಅಸ್ತಿಯನ್ನು ವಿಸರ್ಜಿಸಿದರು. ಫಿಡ್ಜ ಅವರ ಒಡನಾಡಿಗಳಾಗಿದ್ದ ಸಂಶೋಧಕ ಜಾರ್ಜ್ ಮಿಶೆಲ್‌, ಹಂಪಿ ಇಂಟಿಗ್ರೇಟೆಡ್ ಮ್ಯಾನೆಜ್‌ಮೆಂಟ್ ಪ್ಲಾನ್ ಮಾಜಿ ಮುಖ್ಯಸ್ಥ ಪ್ರೊ, ನಳಿನಿ ಠಾಕೂರ್, ವಿಜಯನಗರ, ರಿಸರ್ಚ್ ಪ್ರಾಜೆಕ್ಟ್‌ನ ಸುಗಂಧಾ ಜೋಹರ್ ಸೇರಿದಂತೆ ವಿದೇಶದ ಕೆಲ ಸ್ನೇಹಿತರು ಈ ವೇಳೆ  ಇದ್ದರು.

ಈ ದೇಶದಲ್ಲಿ ಮೃತದೇಹದೊಂದಿಗೆ ನೃತ್ಯ ಮಾಡಿ ಸಂಭ್ರಮಾಚರಿಸ್ತಾರೆ ಜನ

ಹಂಪಿ‌ ಜೊತೆಗೆ ದಶಕಗಳ ನಂಟು ಹೊಂದಿದ್ರು:
ಫ್ರಿಟ್ಜ್ ಅವರು‌1981ರಿಂದ ನಿರಂತರವಾಗಿ ಹಂಪಿಗೆ ಭೇಟಿ ನೀಡುತ್ತಿದ್ದರು. ಹಂಪಿ  ಬಗ್ಗೆ ಆಳವಾದ ಸಂಶೋಧನೆ ನಡೆಸಿ, ಅನೇಕ ಪುಸ್ತಕಗಳನ್ನು ಬರೆದಿದ್ದರು. ಇದರಲ್ಲಿ ಮೊನೊಗ್ರಾಫ್ ಸರಣಿ ಪ್ರಮುಖವಾದದ್ದಾಗಿದೆ. ಹಂಪಿ ಜೊತೆಗೂ ವಿಶೇಷ ಸಂಬಂಧ 
ಹೊಂದಿದ್ದ ಹಿನ್ನೆಲೆ ತಮ್ಮ ಕಾಲದ ನಂತರ  ತಮ್ಮ ಅಸ್ಥಿಯನ್ನು ಹಂಪಿಯಲ್ಲೇ ವಿಸರ್ಜಿಸಬೇಕೆಂದು ಹೇಳಿದ್ದರು. ಅದರಂತೆ ಅವರ ಮಗಳು ಎಲ್ಲಾ ರೀತಿಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

click me!