108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಗೆ world book of records ಗರಿ

Published : Nov 09, 2022, 07:11 PM ISTUpdated : Nov 09, 2022, 07:14 PM IST
108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಗೆ world book of records ಗರಿ

ಸಾರಾಂಶ

108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಗೆ world book of records ಗರಿ ಸಿಕ್ಕಿದ್ದು, ನಗರ ನಿರ್ಮಾಣದ ವ್ಯಕ್ತಿಯ ಸಾಲಿನಲ್ಲಿ ಅತಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಈ ಗರಿ ಲಭಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಿಸಲಾಗಿದ್ದು, ಶುಕ್ರವಾರ, ನವೆಂಬರ್‌ 11 ರಂದು ಪ್ರಧಾನಿ ಮೋದಿ ಈ ಎತ್ತರದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. 

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru International Airport) ಆವರಣದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು (Kempegowda Statue) ನವೆಂಬರ್‌ 11 ರಂದು ಪ್ರಧಾನಿ ಮೋದಿ (PM Narendra Modi) ಉದ್ಘಾಟಿಸಲಿದ್ದಾರೆ. 108 ಅಡಿ ಎತ್ತರದ ಕಂಚಿನ ಪ್ರತಿಮೆ ಇದು. ಇನ್ನು, ಈ ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೂ ಮುನ್ನವೇ ರಾಜ್ಯಕ್ಕೆ ಶುಭ ಸುದ್ದಿ ದೊರಕಿದೆ. ಅದೇನದು ಶುಭ ಸುದ್ದಿ ಅಂತೀರಾ..? 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಗೆ ವಿಶ್ವ ದಾಖಲೆಯ ಗರಿ ಸಿಕ್ಕಿದೆ. 

ಹೌದು, 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಗೆ world book of records ಗರಿ ಸಿಕ್ಕಿದ್ದು, ನಗರ ನಿರ್ಮಾಣದ ವ್ಯಕ್ತಿಯ ಸಾಲಿನಲ್ಲಿ ಅತಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಈ ಗರಿ ಲಭಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಿಸಲಾಗಿದ್ದು, ಶುಕ್ರವಾರ, ನವೆಂಬರ್‌ 11 ರಂದು ಪ್ರಧಾನಿ ಮೋದಿ ಈ ಎತ್ತರದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. 

ಇದನ್ನು ಓದಿ: ಸರ್ಕಾರವೇಕೆ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದೆ?: ಸಚಿವ ಸುಧಾಕರ್‌

ಉದ್ಘಾಟನೆಗೂ ಮುನ್ನವೇ ಅಂದರೆ ನಾಳೆ ಕೆಂಪೇಗೌಡ ಪ್ರತಿಮೆ ಬಳಿ ಸಿಎಂ ಬೊಮ್ಮಾಯಿ‌ಗೆ ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ ಸಂಸ್ಥೆ ಪ್ರಮಾಣ ಪತ್ರವನ್ನು ನೀಡಲಿದೆ ಎಂದು ತಿಳಿದುಬಂದಿದೆ. ಶುಕ್ರವಾರ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಜತೆಗೆ ಕೆಂಪೇಗೌಡ ಥೀಮ್‌ ಪಾರ್ಕ್ ಸಹ ಉದ್ಘಾಟನೆಯಾಗುತ್ತಿದೆ. 

ಈ ಮಧ್ಯೆ, ರಾಜ್ಯ ರಾಜಧಾನಿಯ ವಿಧಾನಸೌಧದಲ್ಲೂ ಮುಂದಿನ ವರ್ಷ ಕೆಂಪೇಗೌಡರ ಪ್ರತಿಮೆ ಅನಾವರಣ ಆಡಲಾಗುತ್ತದೆ ಎಂದು ಇತ್ತೀಚೆಗೆ ಸಚಿವ ಅಶೋಕ್‌ ಹೇಳಿದ್ದಾರೆ. 
ವಿಧಾನಸೌಧ ನಿರ್ಮಾಣವಾಗಿ 75 ವರ್ಷಗಳು ಕಳೆದರೂ ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆಯಾಗಿಲ್ಲ, ವಿಧಾನಸೌಧದ ಮುಂದೆ ಬೆಂಗಳೂರು ನಗರ ಕಟ್ಟಿದ ಕೆಂಪೇಗೌಡರ ಪ್ರತಿಮೆ ಇಲ್ಲದಿರುವುದು ಬೆಂಗಳೂರಿಗೆ ಅರ್ಥವಿಲ್ಲದಂತಾಗಿದೆ. ಮುಂಬರುವ ಫೆಬ್ರವರಿಯಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ವಿಧಾನಸೌಧ ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ: ಸಚಿವ ಅಶೋಕ್‌

ಅಲ್ಲದೆ, ನವೆಂಬರ್‌ 11ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯುತ್ತಿದ್ದು, ನಾಡಿಗೆ ಮಹಾ ಪುರುಷನನ್ನು ನೆನಪು ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದೂ ಅವರು ಹೇಳಿದ್ದರು. 

ನವೆಂಬರ್ 11 ರಂದು ಪ್ರಧಾನಿ ಮೋದಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಿದ್ದು, ಜತೆಗೆ .ಸಿಎಂ ಬಸವರಾಜ್‌ ಬೊಮ್ಮಾಯಿ ಹಾಗೂ ಸಚಿವರು ಸೇರಿ ಅನೇಕ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮ ಉದ್ಘಾಟನೆಗೂ ಮುನ್ನವೇ ಸಿಎಂಗೆ ವಿಶ್ವ ದಾಖಲೆಯ ಗರಿ ದೊರೆಯುತ್ತಿರುವುದು ವಿಶೇಷವಾಗಿದೆ. 

ಇದನ್ನೂ ಓದಿ: Kempegowda Statue Inauguration: ಮೋದಿಗೆ ಕೆಂಪೇಗೌಡ ಪೇಟಾ! ಏನಿದರ ವಿಶೇಷತೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್