ವಿಪ್ರೋ ಕ್ಯಾಂಪಸ್‌ಗಿಲ್ಲ ಪ್ರವೇಶ, ರಾಜ್ಯ ಸರ್ಕಾರದ ಮನವಿ ತಿರಸ್ಕರಿಸಿದ ಅಜೀಂ ಪ್ರೇಮ್‌ಜೀ

Published : Sep 25, 2025, 07:04 PM IST
 azim premji and siddaramaiah

ಸಾರಾಂಶ

ಬೆಂಗಳೂರಿನ ಹೊರವರ್ತುಲ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡಲು, ವಿಪ್ರೋ ಸರ್ಜಾಪುರ ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ಅಜೀಂ ಪ್ರೇಮ್‌ಜಿ ತಿರಸ್ಕರಿಸಿದ್ದಾರೆ.

ಬೆಂಗಳೂರು: ಹೊರವರ್ತುಲ ರಸ್ತೆ (ORR)ಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥಾಪಕ ಹಾಗೂ ಅಧ್ಯಕ್ಷ ಅಜೀಂ ಪ್ರೇಮ್‌ಜಿಗೆ ಪತ್ರ ಬರೆದು, ಕಂಪನಿಯ ಸರ್ಜಾಪುರ ಕ್ಯಾಂಪಸ್ ಮೂಲಕ ಸೀಮಿತ ಸಾರ್ವಜನಿಕ ವಾಹನ ಸಂಚಾರಕ್ಕೆ ಪೀಕ್‌ ಅವರ್‌ ನಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಪ್ರೇಮ್‌ಜಿ ಅವರು ಈ ಮನವಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.

ಕಾನೂನು ಮತ್ತು ಆಡಳಿತಾತ್ಮಕ ಅಡೆತಡೆಗಳು

ಪ್ರೇಮ್‌ಜಿ ಅವರು ತಮ್ಮ ಪತ್ರದಲ್ಲಿ, “ಸರ್ಜಾಪುರ ಕ್ಯಾಂಪಸ್ ಖಾಸಗಿ ಆಸ್ತಿಯಾಗಿದ್ದು, ಇದು ಜಾಗತಿಕ ಗ್ರಾಹಕರಿಗೆ ಸೇವೆ ನೀಡುವ ವಿಶೇಷ ಆರ್ಥಿಕ ವಲಯ (SEZ)ದ ಭಾಗವಾಗಿದೆ. ಇಂತಹ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಪ್ರವೇಶ ನಿಯಂತ್ರಣ ಕಡ್ಡಾಯವಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡುವುದು ಕಾನೂನು, ಆಡಳಿತ ಹಾಗೂ ಶಾಸನಾತ್ಮಕ ಸವಾಲುಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಇದು ತಕ್ಷಣದ ಪರಿಹಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಶ್ವತ ಪರಿಹಾರದ ಪರವಾಗಿ ವಿಪ್ರೋ

ಸಂಚಾರ ಸಮಸ್ಯೆಗೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರದೊಂದಿಗೆ ಸಹಕರಿಸಲು ವಿಪ್ರೋ ಬದ್ಧವಾಗಿದೆ ಎಂದು ಪ್ರೇಮ್‌ಜಿ ಮನವರಿಕೆ ಮಾಡಿ ತಿಳಿಸಿದ್ದು. ಸಹಯೋಗದ, ಡೇಟಾ ಆಧಾರಿತ ವಿಧಾನವು ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಹೆಚ್ಚು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುತ್ತದೆ. ನಾವು ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.

ತಜ್ಞರ ಅಧ್ಯಯನದ ಸಲಹೆ

ಪ್ರೇಮ್‌ಜಿ ಅವರು ನಗರ ಸಾರಿಗೆ ನಿರ್ವಹಣೆಯ ತಜ್ಞರ ನೇತೃತ್ವದಲ್ಲಿ ವೈಜ್ಞಾನಿಕ ಅಧ್ಯಯನವನ್ನು ನಡೆಸಲು ಸಲಹೆ ನೀಡಿದರು. ಇಂತಹ ಸಮಗ್ರ ಅಧ್ಯಯನವು ಅಲ್ಪಾವಧಿ, ಮಧ್ಯಮಾವಾದಿ ಮತ್ತು ದೀರ್ಘಾವಧಿಯಲ್ಲಿಯೂ ಜಾರಿಗೊಳಿಸಬಹುದಾದ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ನೆರವಾಗುತ್ತದೆ. ಇದಕ್ಕಾಗಿ ವಿಪ್ರೋ ಅಧ್ಯಯನದ ವೆಚ್ಚದ ಗಮನಾರ್ಹ ಭಾಗವನ್ನು ಭರಿಸಲು ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 19ರಂದು ಬರೆದಿದ್ದ ಪತ್ರದಲ್ಲಿ, ORR ಪ್ರದೇಶದಲ್ಲಿ, ವಿಶೇಷವಾಗಿ ಇಬ್ಲೂರು ಜಂಕ್ಷನ್ ಬಳಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ತಜ್ಞರ ಪ್ರಾಥಮಿಕ ಮೌಲ್ಯಮಾಪನಗಳ ಪ್ರಕಾರ, ಈ ಕ್ರಮ ಜಾರಿಯಾದರೆ ಗರಿಷ್ಠ ಕಚೇರಿ ಸಮಯದಲ್ಲಿ ORR ಬಳಿಯ ಸಂಚಾರ ದಟ್ಟಣೆ ಸುಮಾರು 30 ಶೇಕಡಾ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಅಂದಾಜಿಸಿತ್ತು.

ಪ್ರೇಮ್‌ಜಿ ಅವರ ಸ್ಪಷ್ಟ ನಿಲುವು

ಆದರೆ ಪ್ರೇಮ್‌ಜಿ ಅವರ ಪ್ರಕಾರ, ಕೇವಲ ಕ್ಯಾಂಪಸ್ ಪ್ರವೇಶವನ್ನು ಸಾರ್ವಜನಿಕ ಸಂಚಾರಕ್ಕೆ ತೆರೆದಿಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಬದಲಾಗಿ, ವೈಜ್ಞಾನಿಕ ಅಧ್ಯಯನದ ಮೂಲಕ ದೀರ್ಘಕಾಲೀಕ ಯೋಜನೆ ರೂಪಿಸುವುದು ಅತ್ಯವಶ್ಯಕ. ಸಂಚಾರ ಸಮಸ್ಯೆಯ ಸಂಕೀರ್ಣತೆ ಬಹು ಅಂಶಗಳಿಂದ ಉದ್ಭವಿಸಿದ್ದು, ಇದಕ್ಕೆ ಒಂದೇ ಪರಿಹಾರ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಅವರ ಮನವಿಯನ್ನು ನಿರಾಕರಿಸಿದರೂ, ಬೆಂಗಳೂರಿನ ಸಂಚಾರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಲು ವಿಪ್ರೋ ಬದ್ಧವಾಗಿದೆ ಎಂದು ಅಜೀಂ ಪ್ರೇಮ್‌ಜಿ ಪುನರುಚ್ಚರಿಸಿದ್ದಾರೆ. “ನಮ್ಮ ನಗರಕ್ಕೆ ಶಾಶ್ವತ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡುವುದು ನಮ್ಮ ಉದ್ದೇಶ. ಅದರ ಭಾಗವಾಗಲು ನಾವು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್