ಅಕ್ಷಯ ತೃತೀಯ ಹಬ್ಬದ ದಿನ ಮುಸ್ಲಿಂ ಜ್ಯುವೆಲ್ಲರಿಗಳಲ್ಲಿ ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಾನು ಕೇರಳಕ್ಕೂ ಹೋಗುತ್ತೇನೆ ಅಲ್ಲೂ ಹೊರಟ ಮಾಡುತ್ತೇನೆ. ಕೇರಳದಲ್ಲೂ ಶ್ರೀರಾಮಸೇನೆ ಸಂಘಟನೆ ಇದೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ವರದಿ ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಏ.25): ಅಕ್ಷಯ ತೃತೀಯ ಹಬ್ಬದ ( Akshaya Tritiya festival) ದಿನ ಮುಸ್ಲಿಂ ಜ್ಯುವೆಲ್ಲರಿ (Muslim gold shops)ಗಳಲ್ಲಿ ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ( pramod mutalik), ಈ ಕುರಿತು ಜಾಗೃತಿ ಮೂಡಿಸಲು ನಾನು ಕೇರಳಕ್ಕೂ (Kerala) ಹೋಗುತ್ತೇನೆ ಎಂದು ಸವಾಲೆಸೆದಿದ್ದಾರೆ.
ಉಡುಪಿಯ ಕುಂದಾಪುರ ತಾಲೂಕು ತೆಕ್ಕಟ್ಟೆಯಲ್ಲಿ ಮಾತನಾಡಿದ ಅವರು, ಈ ಥರ ಸಂಘರ್ಷ ನಿರಂತರ ಮುಂದುವರೆಯುತ್ತದೆ. ಸಮಾಜಕ್ಕೆ , ಜನರಿಗೆ , ದೇಶಕ್ಕೆ ಯಾವುದು ಹಿತ, ಯಾವುದು ಮಾರಕ ಎನ್ನುವುದು ಗೊತ್ತಾಗಿದೆ.ಹಿಂದೂ ಸಂಘಟನೆಗಳಿಂದ ಸಮಾಜ ಜಾಗೃತಿ ಯಾಗಿದೆ. ಸಮಾಜಕ್ಕೊಂದು ಕಲ್ಪನೆ, ದೃಷ್ಟಿಕೋನ ಸಿಕ್ಕಿದೆ.ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಿ, ಹೀಗೆ ಮಾಡಬೇಕೆನ್ನುವುದು ಕೇವಲ ನಮ್ಮ ಒತ್ತಾಯವಲ್ಲ, ಜನರಿಗೂ ಅನ್ನಿಸಿದೆ ಎಂದರು.
ಅಕ್ಷಯ ತೃತೀಯ ಹಿಂದುಗಳ ಹಬ್ಬ. ಹಿಂದುಗಳ ಹಬ್ಬದಂದು ಹಿಂದುಗಳ ಅಂಗಡಿಯಲ್ಲಿ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತೆ.ಹಿಂದೂಸ್ತಾನದ ಸುರಕ್ಷತೆಗೆ ಇದು ಅಗತ್ಯ, ಇದಕ್ಕಾಗಿ ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ.ಹಲಾಲ್ ಬಗ್ಗೆ ಆಗಿರುವ ಜಾಗೃತಿಯನ್ನು ನಾವು ನೋಡಿದ್ದೇವೆ.ಮುಂದಿನ ದಿನ ಹಲಾಲ್ ಕಟ್ ಮಾಂಸ ಸಂಪೂರ್ಣವಾಗಿ ಹಿಂದೂಗಳು ಖರೀದಿ ಮಾಡುವುದಿಲ್ಲ.ಇದೇ ಮಾದರಿಯ ಹೋರಾಟ ಗೋಲ್ಡ್ ಬ್ಯಾನ್ ವಿಚಾರದಲ್ಲೂ ನಡೆಯಲಿದೆ ಎಂದರು.
UDUPI ತಲಾಕ್ ನಂತೆ ಬಹುಪತಿತ್ವವನ್ನೂ ನಿಷೇಧಿಸಲು ಮುಸ್ಲಿಂ ಮೋದಿಗೆ ಕುಟುಂಬದ ಮನವಿ
ಕೇರಳ ಮೂಲದ ಜ್ಯುವೆಲ್ಲರಿ ಕಂಪನಿಗಳು ಹಿಂಸೆಗೆ ಹಣಕಾಸು ನೆರವು ನೀಡುತ್ತಿವೆ. ಪರೋಕ್ಷವಾಗಿ ದೇಶದ್ರೋಹಿ ಸಂಘಟನೆಗಳಿಗೆ ಸಹಕಾರ ಕೊಡುತ್ತಿದ್ದಾರೆ. ಕೇರಳದಲ್ಲಿ 800ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಈ ರೀತಿ ಬರ್ಬರ ಕೊಲೆಗಳಿಗೆ ಹಣಕಾಸು ನೆರವು ನೀಡಿದ್ದಾರೆ. ಕೇರಳದಲ್ಲಿ ನಡರದಿರುವುದು ಸ್ವಾರ್ಥದ ಕೊಲೆಯಲ್ಲ, ಸಿದ್ಧಾಂತಕ್ಕಾಗಿ ನಡೆದ ಕೊಲೆ. ಹಿಂದುತ್ವದ ಕಾರಣಕ್ಕೆ ಕೊಲೆ ಮಾಡಿದ್ದಾರೆ. ದೇಶಭಕ್ತ ಹಿಂದೂ ನಾಯಕರನ್ನು ಕೊಲೆ ಮಾಡಿದ್ದಾರೆ. ಚಿನ್ನದ ವ್ಯಾಪಾರಸ್ಥರು ಇದಕ್ಕೆ ಹಣ ಹೂಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಇವರ ಜಾಹೀರಾತುಗಳಲ್ಲಿ ಮುಸ್ಲಿಂ ಮಹಿಳೆಯರನ್ನೇ ತೋರಿಸುತ್ತಾರೆ. ಹಣೆಯಲ್ಲಿ ಕುಂಕುಮ ಇಲ್ಲದವರನ್ನು ತೋರಿಸುತ್ತಾರೆ. ಹಣೆ ಮೇಲೆ ಕುಂಕುಮ ಇಟ್ಟವರನ್ನು,
ಹಿಂದೂ ಸ್ತ್ರೀಯರನ್ನು ತೋರಿಸುವುದಿಲ್ಲ.ನಮ್ಮ ಸಂಸ್ಕೃತಿಯ ಅವಹೇಳನ ಮಾಡುತ್ತಿದ್ದಾರೆ. ನಮ್ಮ ಹಣಬೇಕು ಸಂಸ್ಕೃತಿ ಬೇಡ ಅಂತಾರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಜಾಗೃತಿಗೆ ಕೇರಳಕ್ಕೂ ಹೋಗುತ್ತೇನೆ: ಮುತಾಲಿಕ ರಿಗೆ ವಿಮಾನ ಟಿಕೆಟ್ ಕೊಡುತ್ತೇವೆ ಕೇರಳದಲ್ಲಿ ಹೋಗಿ ಹೋರಾಟ ಮಾಡಲಿ ಎಂದಿರುವ ಮುಸ್ಲಿಂ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್,ನಾನು ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಹೋರಾಟ ಮಾಡುತ್ತೇನೆ. ನನ್ನನ್ನು ತಡೆಯಲು ನೀವು ಯಾರು? ನಿಮಗೇನು ಹಕ್ಕಿದೆ ನಾನು ಈ ದೇಶದ ನಾಗರಿಕ. ಸಂವಿಧಾನಬದ್ಧ ಅಧಿಕಾರದಲ್ಲಿ ಹೋರಾಟ ಮಾಡುತ್ತೇನೆ. ನನ್ನನ್ನು ಕೇರಳಕ್ಕೆ ಹೋಗು, ಪಾಕಿಸ್ತಾನಕ್ಕೆ ಹೋಗು ಅನ್ನಲು ನೀವು ಯಾರು? ನಿಮಗೆ ಬೇಕಾದರೆ ನೀವು ಹೋಗಿ. ನಾನು ಕೇರಳಕ್ಕೂ ಹೋಗುತ್ತೇನೆ ಅಲ್ಲೂ ಹೊರಟ ಮಾಡುತ್ತೇನೆ. ಕೇರಳದಲ್ಲೂ ಶ್ರೀರಾಮಸೇನೆ ಸಂಘಟನೆ ಇದೆ ಹೋರಾಟ ಮಾಡುತ್ತೇವೆ. ನಿಮ್ಮ ಯಾರ ಉಪದೇಶವು ನನಗೆ ಬೇಕಾಗಿಲ್ಲ ಎಂದರು.
Chitradurga ಸಕ್ಕರೆ ಕಾರ್ಖಾನೆ ಮತ್ತೆ ತೆರೆಯುವಂತೆ ಹಿರಿಯೂರು ಜನರ ಆಗ್ರಹ
ಬಿಜೆಪಿಗೆ ಎಚ್ಚರಿಕೆ ನೀಡಿದ ಮುತಾಲಿಕ್: ನಾನಂತೂ 67 ವರ್ಷದಿಂದ ಹಿಂದೂ ಸಂಘಟನೆಗಳಲ್ಲಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಎಲ್ಲ ಹೋರಾಟದ ಲಾಭ ಬಿಜೆಪಿಗೆ ಹೋಗುತ್ತಿದೆ ಅನ್ನೋದು ಗೊತ್ತಿದೆ. ಆದರೆ ಬಿಜೆಪಿಯವರ ಸ್ಪಂದಿಸುತ್ತಿಲ್ಲ. ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರೇ ಅಡ್ಡಿಪಡಿಸುತ್ತಿದ್ದಾರೆ. ಕೋಲಾರ ,ಉಡುಪಿ, ಕಲಬುರ್ಗಿ ಜಿಲ್ಲೆಗೆ ನನಗೆ ಬ್ಯಾನ್ ಮಾಡಿದರು. ಕಾಂಗ್ರೆಸ್ ಇದ್ದಾಗಲೂ ಬ್ಯಾನ್, ಜೈಲು ಬಿಜೆಪಿ ಇದ್ದಾಗಲೂ ಬ್ಯಾನ್ ಕೇಸು ಜೈಲು. ಬಿಜೆಪಿಯು ನನ್ನನ್ನು ಬ್ಯಾನ್ ಮಾಡುತ್ತಾರೆ ಅಂದ್ರೆ ಹೇಗೆ?ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ ಹಿಂದುತ್ವವನ್ನು, ಹಿಂದೂ ಸಿದ್ಧಾಂತವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದೂಗಳಿಂದಲೇ ಗೆದ್ದು ಬಂದವರು ನೀವು. ಹಿಂದೂಗಳನ್ನೇ ನೀವು ತಡೆಯುತ್ತೀರಿ ಅಂದರೆ ಮುಂದಿನ ದಿನ ನಿಮಗೆ ಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಸಿದರು.
ಬೈಬಲ್ ಬೋಧನೆ ಶಾಲೆ ಮಾನ್ಯತೆ ರದ್ದು ಮಾಡಿ: ಬೆಂಗಳೂರಿನ ಕ್ರಿಶ್ಚಿಯನ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿಚಾರದಲ್ಲಿ ಮಾತನಾಡಿದ ಮುತಾಲಿಕ್ಬೈಬಲ್ ಕಡ್ಡಾಯ ಮಾಡಿರುವುದು ಖಂಡನೀಯ.ಪ್ರವೇಶಾತಿ ವೇಳೆಯಲ್ಲೇ ಬೈಬಲ್ ಕಡ್ಡಾಯ ಎಂದು ಹೇಳಿದ್ದಾರೆ. ಇದು ಕಾನೂನು ಬಾಹಿರ ಕೃತ್ಯ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ.ತಕ್ಷಣ ಈ ಶಾಲೆಯನ್ನು ರದ್ದುಮಾಡಿ. ಈ ಶಾಲೆಯ ಮಾನ್ಯತೆ ರದ್ದು ಮಾಡಿ ಸೀಸ್ ಮಾಡಿ ಇಂದು ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.