
ಬಾಗಲಕೋಟೆ(ಏ.25): ಹುಬ್ಬಳ್ಳಿ ಗಲಭೆ ವಿಚಾರದ ಬಗ್ಗೆ ಬಿಜೆಪಿಯವರು ಬರೀ ಬಡಾಯಿ ಮಾತನ್ನು ಮಾತ್ರ ಹೇಳುತ್ತಾರೆ. ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಗಟ್ಸ್ ಇಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಕೂಡ ಹೀಗೆಯೇ ಆಗಿತ್ತು. ಅಲ್ಲಿ 300 ಜನರನ್ನು ಬಂಧಿಸಿದ್ದರು, ಅವರು ಸ್ವಲ್ಪ ದಿನ ಆದ ನಂತರ ಬೇಲ್ ಮೇಲೆ ಹೊರಬಂದರು. ಬಿಜೆಪಿಯವರು ಏನೂ ಮಾಡುವುದಿಲ್ಲ. ಇದು ಸಾಮೂಹಿಕ, ಸಂಘಟಿತ ಗಲಭೆಯಗಿದ್ದು, ಕೋಕಾ ಕಾಯ್ದೆ ಹಾಕಿ ಅಂದರೂ ಕೇಳುತ್ತಿಲ್ಲ. ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿ ತಪ್ಪಿತಸ್ಥರು ಜೈಲಿನಲ್ಲಿ ಕೊಳೆಯುವಂತೆ ಮಾಡಿದರೆ ಅಂಥವರಿಗೆ ತಕ್ಕ ಪಾಠವಾಗುತ್ತದೆ ಎಂದು ಹೇಳಿದರು.
ಹಳೇ ಹುಬ್ಬಳ್ಳಿ ಗಲಭೆ ಕೇಸ್, ಎಐಎಂಐಎಂನ ಕಾರ್ಪೋರೇಟರ್ ಬಂಧನ!
ಸಿದ್ದರಾಮಯ್ಯ ವಿರುದ್ಧ ಆಕ್ರೋಶ:
ಬುಲ್ಡೋಜರ್‌ನಿಂದ ಶ್ರೀರಾಮಸೇನೆಯನ್ನು ಮೊದಲು ಕಿತ್ತೊಗೆಯಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಮೋದ ಮುತಾಲಿಕ, ಸಿದ್ದರಾಮಯ್ಯನವರ ಮಾತು ಗೊಂದಲ ಮತ್ತು ಹತಾಶೆಯಿಂದ ಕೂಡಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅಲ್ಲಿ ನಡೆದ ಗಲಾಟೆ ವೇಳೆ 300 ವರ್ಷಗಳ ಹಿಂದಿನ ದೇವಾಲಯವನ್ನು ಸಂಪೂರ್ಣ ಭಗ್ನಗೊಳಿಸಲಾಗಿದೆ. ಸಾಕಷ್ಟುಬಡ ಹಿಂದೂಗಳ ಮನೆಗಳನ್ನು ಕೆಡವಿದ್ದಾರೆ. ಅಲ್ಲಿನ ಕಾಂಗ್ರೆಸ್ ಸಿಎಂ ನಮ್ಮಿಂದ ತಪ್ಪಾಗಿದೆ. ದೇಗುಲ ಪುನರ್ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಏನೂ ಹೇಳದೇ, ಜಾಣಮೌನ ತಾಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮಸೇನೆ ಎಂದಿಗೂ ದೇಶದ್ರೋಹದ ಕೆಲಸ ಮಾಡಿಲ್ಲ. ಪೊಲೀಸ್ ಠಾಣೆಗೆ, ಎಂಎಲ…ಎ ಮನೆಗೆ ಬೆಂಕಿ ಹಚ್ಚಿಲ್ಲ. ಇದನ್ನು ಸಿದ್ದರಾಮಯ್ಯ ಎಂಐಎಂ, ಪಿಎಫ್‌ಐ, ಮತ್ತಿತರ ಮುಸ್ಲಿಂ ಸಂಘಟನೆಯವರಿಗೆ ಹೇಳಬೇಕಿದೆ. ಸುಖಾಸುಮ್ಮನೇ ಮೇಲಿಂದ ಮೇಲೆ ಹಿಂದೂಪರ ಸಂಘಟನೆಗಳ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ. ನಾವು ಕಾನೂನು ವಿರುದ್ಧದ ಕಾರ್ಯಗಳನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಆದರೆ, ಕಾಂಗ್ರೆಸ್ ತನ್ನ ಮತಬ್ಯಾಂಕ್ ತುಷ್ಟೀಕರಣಕ್ಕೆ ದೇಶಕ್ಕೆ ಅಹಿತಕರವಾಗುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನ ಇಂಥ ತುಷ್ಟೀಕರಣ ನೀತಿಯಿಂದಲೇ ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ, ಪಾದರಾಯನಪುರ ಘಟನೆಗಳು, ಹರ್ಷ, ಮತ್ತಿತರ ಹಿಂದೂಪರ ಕಾರ್ಯಕರ್ತರ ಕೊಲೆಗಳು ನಡೆದಿವೆ. ಶ್ರೀರಾಮ ಸೇನೆ, ಭಜರಂಗದಳದ ಹೆಸರು ಕೇಳಿದರೆ ಕಾಂಗ್ರೆಸ್ ಉರಿದುಕೊಳ್ಳುತ್ತದೆ. ಕಾಂಗ್ರೆಸ್ ಸಂಪೂರ್ಣ ನಾಶ ಆಗುವವರೆಗೂ ಈ ದೇಶಕ್ಕೆ ಸುಖ ಇಲ್ಲ ಎಂದ ಮುತಾಲಿಕ್ ಗುಡುಗಿದರು.
Hubballi Riot: ಮಾಸ್ಟರ್ ಮೈಂಡ್ ವಸೀಂ ಮೊಬೈಲ್ ಮಂಗಮಾಯ, ಬಾಯ್ಬಿಡ್ತಿಲ್ಲ ಕಿಡಿಗೇಡಿ
ಇದೇ ವೇಳೆ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂಬ ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದ ಮುತಾಲಿಕ್, ಆರ್‌ಎಸ್‌ಎಸ್, ಶ್ರೀರಾಮಸೇನೆ, ಭಜರಂಗದಳ, ಮತ್ತಿತರ ಹಿಂದೂಪರ ಸಂಘಟನೆಗಳನ್ನು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಾದ ಎಸ್‌ಡಿಪಿಐ, ಪಿಎಫ್‌ಐಗಳಿಗೆ ಹೋಲಿಕೆ ಮಾಡುವುದು ತಪ್ಪು ಎಂದು ಕಿಡಿಕಾರಿದರು.
ಅಕ್ಷಯ ತೃತೀಯಂದು ಹಿಂದೂ ಮಾಲೀಕತ್ವದ ಜುವೇಲರಿಯಲ್ಲೇ ಚಿನ್ನ ಖರೀದಿಸಿ:
ಮುಂಬರುವ ಅಕ್ಷಯ ತೃತೀಯಂದು ಎಲ್ಲ ಹಿಂದೂಗಳ ಹಿಂದೂ ಮಾಲೀಕತ್ವದ ಜವೇಲರಿಯಲ್ಲೇ ಚಿನ್ನ ಖರೀದಿಸಬೇಕು ಎಂಬ ಟ್ವಿಟರ್ ಅಭಿಯಾನಕ್ಕೆ ಶ್ರೀರಾಮ ಸೇನೆಯ ಸಂಪೂರ್ಣ ಬೆಂಬಲ ಇದೆ. ಯಾವೊಬ್ಬ ಹಿಂದೂ ಕೂಡ ರಾಜ್ಯದಲ್ಲಿ ಇರುವ ಕೇರಳ ಮೂಲದ ಮುಸ್ಲಿಮರ ಜವೇಲರಿ ಶಾಪ್‌ನಲ್ಲಿ ಚಿನ್ನ ಖರೀದಿಸಬಾರದು. ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ದಿನಬೆಳಗಾದರೆ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿವೆ. ಕೇರಳದ 12 ಸಾವಿರ ಹಿಂದೂ ಹುಡುಗಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಇಂಥದರಲ್ಲಿ ಕೇರಳ ಮೂಲದ ಮುಸ್ಲಿಂರ ಅಂಗಡಿಯಲ್ಲಿ ಚಿನ್ನ ಖರೀದಿಸಿದರೆ, ನಮ್ಮ ತಲೆ ಮೇಲೆ ನಾವೇ ಚಪ್ಪಡಿ ಎಳೆದುಕೊಂಡಂತಾಗುತ್ತದೆ ಎಂದು ಮುತಾಲಿಕ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ