ಸಿದ್ಧಾಂತ ಒಪ್ಪಿ ಬರೋದಾದ್ರೆ ಬರ್ಲಿ, ಸಿಎಂ ಇಬ್ರಾಹಿಂ ಘರ್ ವಾಪಸಿಗೆ ನಮ್ಮ ವಿರೋಧ ಇಲ್ಲ; ಡಾ.ಜಿ.ಪರಮೇಶ್ವರ್

By Ravi Janekal  |  First Published Oct 1, 2023, 2:59 PM IST

ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಸಿಎಂ ಇಬ್ರಾಹಿಂ ಅಸಮಾಧಾನಗೊಂಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.


ಬೆಂಗಳೂರು (ಅ.1): ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಸಿಎಂ ಇಬ್ರಾಹಿಂ ಅಸಮಾಧಾನಗೊಂಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಗಮನಕ್ಕೆ ಬಾರದೆ ಮೈತ್ರಿ ಮಾಡಿಕೊಂಡಿದ್ದಾರೆ. ನನಗೆ ಬೇಸರವಾಗಿದೆ 16 ತಾರೀಕು ಸಭೆ ಮಾಡಿ ಮುಂದಿನ ನಿರ್ಧಾರ ಮಾಡ್ತೇವೆ ಎಂದು ಸಿಎಂ ಇಬ್ರಾಹಿಂ ಹೇಳಿಕೊಂಡಿದ್ದಾರೆ. ಕಾಯೋಣ ಕಾಂಗ್ರೆಸ್ ಪಕ್ಷದ  ಸಿದ್ದಾಂತ ಒಪ್ಪಿ ಬರ್ತೇನೆ, ಮೊದಲಿನಂತೆ ಕಾಂಗ್ರೆಸ್ ನಲ್ಲಿ ಕೆಲಸ ಮಾಡ್ತೇನೆ ಎಂದರೆ ಹೈಕಮಾಂಡ್ ಒಂದು ಅವಕಾಶ ಕೊಡಬಹುದು. ಅವರು ಮರಳಿ ಬರುವುದಾದರೆ ನಾವು ವಿರೋಧ ಮಾಡುವುದಿಲ್ಲ, ಕಾಂಗ್ರೆಸ್ ಸಿದ್ದಾಂತ ಒಪ್ಪಬೇಕು ಅಷ್ಟೇ ಎಂದರು.

Tap to resize

Latest Videos

ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದು ತ್ರಿಶಂಕು ಸ್ಥಿತಿಯಲ್ಲಿ ಸಿಎಂ ಇಬ್ರಾಹಿಂ!

ಸರ್ಕಾರಕ್ಕೆ ಹೇಳಿಕೆಗಳಿಂದ ಡ್ಯಾಮೇಜ್ ಆಗುವು ವಿಚಾರ ಪ್ರಸ್ತಾಪಿಸಿದ ಸಚಿವರು, ಎಲ್ಲಾ ಚೆನ್ನಾಗಿ ಇದ್ದರೆ ಯಾರೂ ನಿಮ್ಮನ್ನು ಮಾತೇ ಆಡಿಸುವುದಿಲ್ಲ. ಆ ರೀತಿ ಇರಬೇಕು, ಡ್ಯಾಮೇಜ್ ಮಾಡುವಂತ ಹೇಳಿಕೆಗಳು ಬರ್ತಾ ಇರುತ್ತೆ. ಆದರೆ ಏನೂ ತೊಂದರೆ ಇಲ್ಲ. ಸರ್ಕಾರ ಸುಭದ್ರವಾಗಿದೆ, ಜನ ಆಶೀರ್ವಾದ ಮಾಡಿದ್ದಾರೆ‌. ಕೊಟ್ಟ ಮಾತಿನಂತೆ ನಾವು ಕೆಲಸ ಮಾಡ್ತಾ ಇದ್ದೇವೆ ಸಿಎಂ, ಸಚಿವರು ಎಲ್ಲರೂ ಕೆಲಸದಲ್ಲಿ ಬ್ಯುಸಿ ಇದ್ದೇವೆ. ಬೇರೆ ಯಾವುದೂ ನಮ್ಮ ಹತ್ರಾ ಬರೋದಿಲ್ಲ ಎಂದರು.

ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಅಸಮಾಧಾನ, 'ಕಾಲಾಯ ತಸ್ಮೈ ನಮಃ' ಎಂದ ಸಿಎಂ ಇಬ್ರಾಹಿಂ!

click me!