ಬದಲಾಗ್ತಾರಾ ಮೈತ್ರಿ ಸರ್ಕಾರದ ಸಿಎಂ...!?

By Web DeskFirst Published Nov 18, 2018, 12:33 PM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗುವುದು ಖಚಿತ ಎಂಬ ಸೂಚನೆ ನೀಡಿದ್ದಾರೆ.

ಮೈಸೂರು[ನ.18]: ಮೈತ್ರಿ ಸರ್ಕಾರ ಸಚಿವ ಸಂಪುಟ ವಿಸ್ತರಣೆಗೆ ತಯಾರಿ ನಡೆಸುತ್ತಿದ್ದು, ಯಾರಿಗೆಲ್ಲ ಸಚಿವ ಸ್ಥಾನ ಸಿಗಬಹುದೆಂಬ ಚರ್ಚೆ ಸದ್ಯ ಕಾವು ಪಡೆದಿದೆ. ಹೀಗಿರುವಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗುವುದು ಖಚಿತ ಎಂಬ ಸೂಚನೆ ನೀಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಐದು ರಾಜ್ಯಗಳ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗುತ್ತಿಲ್ಲ. ರಾಹುಲ್ ಭೇಟಿ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಫೈನಲ್ ಆಗುತ್ತದೆ' ಎಂದಿದ್ದಾರೆ‌.

ಇದನ್ನೂ ಓದಿ: ಮುಂದಿನ ವಾರವೇ ಸಂಪುಟ ವಿಸ್ತರಣೆ: ಮಿನಿಸ್ಟರ್ ಗಿರಿ ಯಾರಿಗುಂಟು..ಯಾರಿಗಿಲ್ಲ..?

ಇದೇ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ್ ಸಿಎಂ ಆಗಲು ಸಿದ್ಧ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ 'ಕಾಂಗ್ರೆಸ್‌ನಲ್ಲಿ ಸಿಎಂ ಆಗೋ ಅರ್ಹತೆ ಬಹಳ‌ ಜನರಿಗಿದೆ. ಅವರು ಕೂಡಾ ಒಬ್ಬರು, ಅವರು ಹೇಳಿದ್ದರಲ್ಲಿ ತಪ್ಪೇನಿದೆ....? ಸದ್ಯ ಸಿಎಂ ಬದಲಾವಣೆ ವಿಚಾರ ಇಲ್ಲ, ಯಾಕೆ‌ಂದ್ರೆ ಆ ಸೀಟು ಖಾಲಿ ಇಲ್ಲ’ ಎನ್ನುವ ಮೂಲಕ ಡಿಸಿಎಂ ಪರಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ 'ಇಂದಿರಾ ಕ್ಯಾಂಟಿನ್‌ನಿಂದ ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬಂದು ಬಿಡುತ್ತೆ ಎಂದು ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ. ನೆಹರು ಅವರನ್ನ ಹಿಟ್ಲರ್ ಎಂದು ಕರೆಯುವ ಆರ್‌ಎಸ್ಎಸ್‌ನವರು ಫ್ಯಾಸಿಸ್ಟ್ ಮನೋಭಾವನೆ ಉಳ್ಳವರು. ಬಿಜೆಪಿಯವರು ಹಿಟ್ಲರ್‌ನಂತೆ ಆಡಳಿತ ನಡೆಸುತ್ತಿದ್ದಾರೆ. ಬಿಜೆಪಿಯವರು ಹಿಟ್ಲರ್ ವಂಶಸ್ಥರು' ಎಂದಿದ್ದಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ಹುತ್ತಕ್ಕೆ ಕೈಹಾಕಿದ ದೋಸ್ತಿ ಸರ್ಕಾರ..! ಮುಹೂರ್ತ ಯಾವಾಗ?

ಸದ್ಯ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರವಾಗಿಯೂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, 'ಈಗಾಗಲೇ ಸಿಎಂ ಸಭೆ ಮಾಡುತ್ತೇನೆಂದು ಹೇಳಿದ್ದಾರೆ. ಮಂಗಳವಾರ ಸಭೆ ಮಾಡಬಹುದು, ಸ್ಥಳ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ' ಎಂದು ತಿಳಿಸಿದ್ದಾರೆ. 

click me!