ಆರೋಪಿ ಎದುರು ಕುಣಿದ ಪಿಎಸ್‌ಐ ಸಸ್ಪೆಂಡ್

By Web DeskFirst Published Nov 18, 2018, 11:10 AM IST
Highlights

ವಿಚಾರಣೆ ವೇಳೆ ಠಾಣೆಯಲ್ಲಿ ಆರೋಪಿಗೆ ಥಳಿಸಿ ಡ್ಯಾನ್ಸ್‌ ಮಾಡಿಸಿ, ತಾನೂ ಡ್ಯಾನ್‌ ಮಾಡಿದ್ದ ಕೋಲಾರದ ಕೆಜಿಎಫ್​ ತಾಲ್ಲೂಕಿನ ಬೇತಮಂಗಲ ಪೊಲೀಸ್​ ಠಾಣೆಯ ಎಸ್​ಐ ಹೊನ್ನೇಗೌಡ ಅಮಾನತ್ತುಗೊಂಡಿದ್ದಾರೆ.

ಕೋಲಾರ[ನ.18]: ಆರೋಪಿಯೊಬ್ಬನಿಗೆ ಥಳಿಸಿ, ಡ್ಯಾನ್ಸ್‌ ಮಾಡಿಸಿದ ಆರೋಪದ ಹೊತ್ತಿದ್ದ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೇತಮಂಗಲ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಹೊನ್ನೇಗೌಡ ಅವರನ್ನು ಸೇವೆಯಿಂದ ಅಮಾನಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಹೊನ್ನೇಗೌಡ ಆರೋಪಿಯನ್ನು ಠಾಣೆಗೆ ಕರೆತಂದು, ಡ್ಯಾನ್ಸ್‌ ಮಾಡಿಸಿದ್ದಲ್ಲದೇ, ತಾನೂ ಕೂಡ ನೃತ್ಯ ಮಾಡಿದ್ದ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಅಲ್ಲದೇ ಪಿಎಸ್‌ಐ ಬೋವಿ ಸಮುದಾಯ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಸಮುದಾಯದ ಮುಖಂಡರು ಶನಿವಾರ ಠಾಣೆ ಮುಂದೆ ಪ್ರತಿಭಟಿಸಿದ್ದರು.

ಇದನ್ನು ಓದಿ: ಠಾಣೆಯಲ್ಲಿ ಆರೋಪಿ ಎದುರೇ ಕುಣಿದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್!

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್‌ ಡಿವೈಎಸ್ಪಿ ಶ್ರೀನಿವಾಸಮೂರ್ತಿ ತನಿಖೆ ನಡೆಸಿ ಎಸ್ಪಿಗೆ ವರದಿ ನೀಡಿದ್ದರು. ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪ ಮಾಡಿರುವ ಆರೋಪ ಮೇಲೆ ಪಿಎಸ್‌ಐ ಹೊನ್ನೇಗೌಡ ಅವರನ್ನು ಎಸ್ಪಿ ಅಮಾನತು ಮಾಡಿದ್ದಾರೆ.

click me!