ಕಾಫಿನಾಡಲ್ಲಿ ಅರಣ್ಯ ಇಲಾಖೆಯಿಂದ ಎಡವಟ್ಟು; ಅರವಳಿಕೆ ಚುಚ್ಚುಮದ್ದಿಗೆ ಕಾಡಾನೆ ಬಲಿ!

By Ravi Janekal  |  First Published Dec 3, 2023, 10:43 AM IST

ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದ ಅರವಳಿಕೆ ಚುಚ್ಚುಮದ್ದಿ ಕಾಡಾನೆ ಸಾವಿಗೀಡಾದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಭೈರಾಪುರದ ದೊಡ್ಡಗೊಳ್ಳ ಎಂಬಲ್ಲಿ ನಡೆದಿದೆ.


ಚಿಕ್ಕಮಗಳೂರು (ಡಿ.3): ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದ ಅರವಳಿಕೆ ಚುಚ್ಚುಮದ್ದಿ ಕಾಡಾನೆ ಸಾವಿಗೀಡಾದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಭೈರಾಪುರದ ದೊಡ್ಡಗೊಳ್ಳ ಎಂಬಲ್ಲಿ ನಡೆದಿದೆ.

ರಾತ್ರಿಯ‌ ವೇಳೆ ಕಾರ್ಯಚಾರಣೆ, ಅರವಳಿಕೆ ಹೆಚ್ಚಿನ ಪ್ರಮಾಣದಲ್ಲಿ ನೀಡಿದ ಪರಿಣಾಮ ಸಾವು? ಅರಣ್ಯ ಇಲಾಖೆಯ ನಿರ್ಲಕ್ಷ್ಯ, ಅವೈಜ್ಞಾನಿಕ ಕಾಡಾನೆ ಸೆರೆಯಿಂದಾಗ ಸಲಗ ಬಲಿಯಾಗಿದೆ. ಕಾಡಾನೆ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಅರಣ್ಯ ಇಲಾಖೆಯ ವಿರುದ್ಧ ಪರಿಸರವಾದಿಗಳಿಂದ‌‌ ಆಕ್ರೋಶ ವ್ಯಕ್ತವಾಗಿದೆ.

Tap to resize

Latest Videos

undefined

ಗೋವಾದಿಂದ 'ಪುಷ್ಪ' ಸಿನಿಮಾ ಸ್ಟೈಲ್‌ನಲ್ಲಿ ಮದ್ಯ ಸಾಗಾಟ; ಗೂಡ್ಸ್ ವಾಹನ ಜಪ್ತಿ

ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ತಿಕ ಗೌಡ ಸೇರಿದಂತೆ ಒಂಟಿ ಸಲಗ ದಾಳಿಯಿಂದ ಮೂವರು ಬಲಿಯಾಗಿದ್ದರು. ಕಾಡಾನೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ನರಹಂತಕ ಕಾಡಾನೆ ಸೇರಿದಂತೆ ಮೂರು ಕಾಡಾನೆ ಸೆರೆಗೆ ಸರ್ಕಾರ ಆದೇಶ ಮಾಡಿತ್ತು. ಸರ್ಕಾರದ ಆದೇಶದ ಅನ್ವಯ 9 ಸಾಕಾನೆಗಳ ಮೂಲಕ ಮೂಡಿಗೆರೆ ಭಾಗದಲ್ಲಿ ಕಾರ್ಯಚರಣೆ ಅರಣ್ಯಾಧಿಕಾರಿಗಳು. ರಾತ್ರಿ ಕಾರ್ಯಾಚರಣೆ ವೇಳೆ ಕಾಡಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಚುಚ್ಚುಮದ್ದು ನೀಡಿದ್ದರಿಂದ ಕಾಡಾನೆ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. 

ತಾಯಿಯನ್ನು ನಿಂದಿಸಿದನೆಂದು ಅಜ್ಜನನ್ನೇ ಕೊಂದ ಮೊಮ್ಮಗ!

click me!