
ಬೆಂಗಳೂರು (ಮಾ. 23): ಅಪರೂಪದ ಪ್ರಸಂಗದಲ್ಲಿ ಪತಿಯ (husband ) ವಿರುದ್ಧವೇ ಪತ್ನಿ (Wife) ಅತ್ಯಾಚಾರ ಕೇಸ್ (Rape Case) ದಾಖಲಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಒರಿಸ್ಸಾ ಮೂಲದ ದಂಪತಿಯ ಕುಟುಂಬದಲ್ಲಿ ವೈಮನಸ್ಸು ಏರ್ಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ (Karnataka High Court) ಪತಿಯ ವಿರುದ್ಧವೇ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ.
ಇನ್ನೊಂದೆಡೆ ತಮ್ಮ ಮೇಲಿನ ಆರೋಪದ ಕುರಿತಾಗಿ ಅರ್ಜಿಯನ್ನು ರದ್ದುಪಡಿಸುವಂತೆ ಪತಿ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ ಕಾರಣಕ್ಕಾಗಿ ಕೇಸ್ ದಾಖಲಿಸಲಾಗಿತ್ತು. ತನ್ನನ್ನು ಲೈಂಗಿಕ ಗುಲಾಮಳಂತೆ ಪತಿ ಬಳಸಿಕೊಂಡಿದ್ದಾಗಿ ಪತ್ನಿ ಆರೋಪ ಮಾಡಿದ್ದಲ್ಲದೆ, ಅಪ್ರಾಪ್ತ ಮಗಳ ವಿರುದ್ಧವೂ ಪತಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ (Bengaluru Women Police Station) ಪ್ರಕರಣ ದಾಖಲಿಸಲಾಗಿತ್ತು.
ತನ್ನ ಮೇಲೆ ಸೇಡಿಗಾಗಿ ಅತ್ಯಾಚಾರ ಆರೋಪ ಹೊರಿಸಿದ್ದಾಳೆ. ಇದನ್ನು ರದ್ದು ಮಾಡುವಂತೆ ಪತಿ ಕೋರ್ಟ್ ಗೆ ಮನವಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದ. ಈ ಕುರಿತಂತೆ ವಿಚಾರಣೆ ನಡೆಸಿರುವ ನ್ಯಾಯಾಲಯ ಅತ್ಯಾಚಾರ ಆರೋಪವನ್ನು ಕೈಬಿಡಲು ನಿರಾಕರಿಸಿದೆ. ಪತಿಗೆ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಎಂದು ವಾದವನ್ನೂ ಮಂಡಿಸಲಾಗಿತ್ತು. ಆದರೆ, ಪತಿಯ ಅರ್ಜಿಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ನೇರವಾಗಿ ವಜಾ ಮಾಡಿದೆ.
ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ(M.Nagaprasanna) ಅವರಿದ್ದ ಏಕಸದಸ್ಯ ಪೀಠ, ಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ಎನಿಸಿದಲ್ಲಿ ಪತಿಯ ವಿರುದ್ಧವೂ ಅತ್ಯಾಚಾರ ಕೇಸ್ ಎಂದೇ ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗುತ್ತಾಳೆ. ಇದು ಆಕೆಯ ದೇಹದ ಮೇಲೆ ಪರಿಣಾಮ ಬೀರುವ ಅಂಶ. ಪತ್ನಿಯ ಆತ್ಮದ ಮೇಲೆ ಅಳಿಸಲಾಗದಂಥ ಕಲೆಯಾಗುತ್ತದೆ. ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯಿತಿಯನ್ನು ರದ್ದು ಮಾಡುವುದೇ ಸೂಕ್ತ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Minor Girl Rape in Pune ಅಪ್ಪ, ಅಣ್ಣ, ಅಜ್ಜ, ಅಂಕಲ್ ಎಲ್ಲರಿಂದಲೂ ಪುಟ್ಟ ಹುಡುಗಿಯ ಮೇಲೆ ರೇಪ್!
ಈ ಬಗ್ಗೆ ನಮ್ಮ ಶಾಸಕಾಂಗ ಚಿಂತನೆ ನಡೆಸಬೇಕಿದೆ. ವಿಶ್ವದ ಮುಂದುವರಿದಂಥ ದೇಶಗಳಾದ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಕೆಲ ದೇಶಗಳಲ್ಲಿ ಪತ್ನಿಯ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ. ಪತಿಯಾಗಲಿ, ಪತ್ನಿಯಾಗಲಿ ಇಚ್ಛೆಗೆ ವಿರುದ್ಧವಾಗಿ ಸಂಭೋಗಕ್ಕೆ ಒಳಗಾಗುವಂತಿಲ್ಲ. ಒತ್ತಾಯಪೂರ್ವಕವಾಗಿ ಇದು ನಡೆದಲ್ಲಿ ಅತ್ಯಾಚಾರ ಎಂದು ಪರಿಗಣನೆ ಮಾಡುತ್ತಾರೆ. ಇಂಗ್ಲೆಂಡ್ ನಲ್ಲಿಯೂ ಇಂಥದ್ದೊಂದು ವಿನಾಯಿತಿಯನ್ನು ತೆಗೆದುಹಾಕಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ರೇಪ್ ವಿಚಾರದಲ್ಲಿ ಮಹಿಳೆ ಹಾಗೂ ಪತ್ನಿಯ ತಾರತಮ್ಯ ಸರಿಯಲ್ಲ. ವಿವಾಹ ಎನ್ನುವುದು ಪತ್ನಿಯ ಮೇಲೆ ದೌರ್ಜನ್ಯ ಎಸಗಲು ನೀಡುವ ಅನುಮತಿಯಲ್ಲ ಎಂದು ಹೇಳಿದೆ.
ಮಗಳನ್ನೇ ರೇಪ್ ಮಾಡಿದ ತಂದೆ, 10ರ ಬಾಲಕಿಯ ಅಬಾರ್ಷನ್‌ಗೆ ಅನುಮತಿ ಕೊಟ್ಟ ಕೋರ್ಟ್!
35 ವಾರ ತಾಯಿ ಗರ್ಭದಲ್ಲಿ ಬೆಳೆದ ಶಿಶುವಿನ ಅಬಾರ್ಷನ್, ನ್ಯಾಯಾಲಯದಿಂದ ಅಪರೂಪದ ತೀರ್ಪು! : 35 ವಾರಗಳ ನಂತರ ಮಹಿಳೆಯೊಬ್ಬಳು ಅಬಾರ್ಷನ್ ಮಾಡಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ. ಮಹಿಳೆಯ ವೈದ್ಯಕೀಯ ಮಂಡಳಿಯ ವರದಿಯು ಅರ್ಜಿದಾರಳ ಬೆನ್ನುಮೂಳೆಯಲ್ಲಿರುವ ದೋಷ ಮತ್ತು ಭ್ರೂಣ ಸರಿಯಾಗಿ ಬೆಳೆಯದಿರುವುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಈ ಅಪರೂಪದ ಅನುಮತಿಯನ್ನು ಕೋರ್ಟ್ ನೀಡಿದೆ. ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯ ಒಂಬತ್ತು ಸದಸ್ಯರ ವೈದ್ಯಕೀಯ ಮಂಡಳಿಯ ವರದಿಯಲ್ಲಿ, ತಕ್ಷಣದ ಗರ್ಭಧಾರಣೆಯಿಂದ ಮಗು ಬದುಕುಳಿಯುವ ಅಥವಾ ಸಾಮಾನ್ಯ ಜೀವನವನ್ನು ನಡೆಸುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ನ್ಯಾಯಾಲಯವು ಗಮನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ